ಮದ್ಯ ಮಾರಾಟ ನಿಷೇಧ : ಜಿಲ್ಲಾಧಿಕಾರಿ ಆದೇಶ

By Kannadaprabha News  |  First Published Jan 5, 2020, 2:40 PM IST

ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶದಿಂದ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಒಟ್ಟು ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. 


ಕೊಪ್ಪಳ [ಜ.05]: ಜ. 9,10ರಂದು ಆನೆಗೊಂದಿ ಉತ್ಸವ ಹಾಗೂ ಜ. 10,11ರಂದು ನಡೆಯುವ ಹಂಪಿ ಉತ್ಸವದ ಅಂಗವಾಗಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ ಆದೇಶ ಹೊರಡಿಸಿದ್ದಾರೆ.

ಆನೆಗೊಂದಿ ಹಾಗೂ ಹಂಪಿ ಉತ್ಸವದ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗಾಗಿ ಮತ್ತು ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ 
ತಿಳಿಸಲಾಗಿದೆ. 

Latest Videos

undefined

ಆನೆಗೊಂದಿ ಉತ್ಸವದ ಸಮಯದಲ್ಲಿ ಗಂಗಾವತಿ ತಾಲೂಕಿನ ಸಂಗಾಪುರದ ಹೋಟೆಲ್ ಮೇಘಾ ರೆಸಾರ್ಟ್ (ಸಿಎಲ್- 7)ರಲ್ಲಿ ಜ. 9 ರಂದು ಬೆಳಗ್ಗೆ 6 ರಿಂದ ಜ. 11 ರಂದು ಬೆಳಗ್ಗೆ 6 ರ ವರೆಗೆ, ಹಂಪಿ ಉತ್ಸವ ನಿಮಿತ್ತ ಗಂಗಾವತಿ ತಾಲೂಕಿನ ಸಾಣಾಪುರದ ಮೆ. ಕಿಷ್ಕಿಂದ ಹೆರಿಟೇಜ್ ರೆಸಾರ್ಟ್ ಸೆಎಲ್- 7, ಕೆ. ವೆಂಕಟರಾವ್ ತಂದೆ ಕೆ. ರಾಮರಾವ್ ಸಿಎಲ್-2 ಜ. 10 ರ ಬೆಳಗ್ಗೆ 6 ರಿಂದ 12 ರಂದು ಬೆಳಗ್ಗೆ 6 ರ ವರೆಗೆ ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 21 ರ ಪ್ರಕಾರ ಮದ್ಯ ಮಾರಾಟ ನಿಷೇಧಿಸಲಾಗಿದೆ. 

ಆನೆಗೊಂದಿ ಉತ್ಸವಕ್ಕೆ ದಿನಗಣನೆ: ಪ್ರೇಕ್ಷಕರ ಮೈನವಿರೇಳಿಸಿದ ಬೈಕ್‌ ಸ್ಟಂಟ್‌...

ಈ ಸಂಬಂಧವಾಗಿ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ, ಅದರಲ್ಲಿ ಆರಕ್ಷಕರ ವೃತ್ತ ನಿರೀಕ್ಷ ಕರು, ಅಬಕಾರಿ ವೃತ್ತ ನಿರೀಕ್ಷಕರು ಕಾರ್ಯನಿರ್ವ ಹಿಸ ಬೇಕು. ಆದೇಶ ವನ್ನು ಜಾರಿ ತರುವಲ್ಲಿ ನಿರ್ಲಕ್ಷತನ ತೋರಿದವರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಕೈಗೊ ಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

click me!