ಕಾಂಗ್ರೆಸ್‌ನವ್ರು ಪೌರತ್ವ ಕಾಯ್ದೆ ಓದಿಲ್ಲ: ಆರ್. ಅಶೋಕ್

By Suvarna NewsFirst Published Jan 5, 2020, 2:15 PM IST
Highlights

ಪೌರತ್ವ ಕಾಯ್ದೆಯನ್ನು ಸರಿಯಾಗಿ ಓದದೆ ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ. ಪೌರತ್ವ ಕಾಯ್ದೆಯನ್ನು ಕಾಂಗ್ರೆಸ್ , ಕಮ್ಯೂನಿಸ್ಟ್‌ನವರು ಅಪಪ್ರಚಾರ ಮಾಡುತಿದ್ದಾರೆ ಎಂದಿದ್ದಾರೆ.

ತುಮಕೂರು(ಜ.05): ಪೌರತ್ವ ಕಾಯ್ದೆಯನ್ನು ಸರಿಯಾಗಿ ಓದದೆ ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ. ಪೌರತ್ವ ಕಾಯ್ದೆ ಬಗ್ಗೆ ಕಾಂಗ್ರೆಸ್ , ಕಮ್ಯೂನಿಸ್ಟ್‌ನವರು ಅಪಪ್ರಚಾರ ಮಾಡುತಿದ್ದಾರೆ ಎಂದಿದ್ದಾರೆ.

ತುಮಕೂರಿನ ಅಶೋಕನಗರದಲ್ಲಿ ಮನೆ ಮನೆಗೆ ಕರಪತ್ರ ಹಂಚಿ ಪೌರತ್ವ ತಿದ್ದುಪಡಿ ಕಾಯಿದೆ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ನಂತರ ಮಾತನಾಡಿದ ಸಚಿವ ಅಶೋಕ್, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಮೋದಿ ವಿರುದ್ಧ ಅವಹೇಳನಕಾರಿ ವಾಟ್ಸಾಪ್‌ ಸ್ಟೇಟಸ್, ದೂರು ದಾಖಲು

ಪೌರತ್ವ ಕಾಯ್ದೆ ಬಗ್ಗೆ ಅಪಪ್ರಚಾರ ಮಾಡುತಿದ್ದಾರೆ. ಅವರು ಕಾಯ್ದೆಯನ್ನು ಸರಿಯಾಗಿ ಓದದೇ  ಮಾತನಾಡುತಿದ್ದಾರೆ. ಹಾಗಾಗಿ ರಾಜ್ಯದ ಜನರಿಗೆ ಸರಿಯಾದ ತಿಳುವಳಿಕೆ ಕೊಡುವ ನಿಟ್ಟಿನಲ್ಲಿ ಅಭಿಯಾನ ಆರಂಭಿಸಿದ್ದೇವೆ ಎಂದಿದ್ದಾರೆ.

ಸೋಮಶೇಖರ್ ರೆಡ್ಡಿ ಹೇಳಿಕೆ‌ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸೋಮಶೇಖರ್ ರೆಡ್ಡಿ ವಿರುದ್ದ ಈಗಾಗಲೇ ಕೇಸ್ ದಾಖಲಾಗಿದೆ. ಖಾದರ್ ವಿರುದ್ದ ಯಾವ ಕೇಸ್ ಆಗಿತ್ತೋ ಅದೇ ಮಾದರಿಯ ಕೇಸ್ ಸೋಮಶೇಖರ್ ರೆಡ್ಡಿ ಮೇಲೆ ಆಗಿದೆ. ಮಾಧ್ಯಮದಲ್ಲಿ ಏನು ಬಂದಿದೆ ರೆಡ್ಡಿ ಏನು ಮಾತಾಡಿದ್ದಾರೆ ಅನ್ನುವ ನಿಜಾಂಶ ಗೊತ್ತಿಲ್ಲ. ರಿಯಾಲಿಟಿ ತಿಳಿದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಹೂತಿಟ್ಟಿದ್ದ ಮಾಟದ ವಸ್ತು ಪತ್ತೆಹಚ್ಚಿದ ಬಸವ..! ಪವಾಡದ ಮೇಲೊಂದು ಪವಾಡ

ಕೋಲಾರದಲ್ಲಿ ನಿನ್ನೆ ಪೌರತ್ವ ಪರ ಜಾಥಾ ಮಾಡುತಿದ್ದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಕಾನೂನು ಹೇಗೆ ಕಾಪಾಡಬೇಕು ಎಂಬ ಬಗ್ಗೆ ಪೊಲೀಸರಿಗೂ ಕಾನೂನಿದೆ. ಪೊಲೀಸರು ಅವರ ಕೆಲಸ ನಿಭಾಯಿಸ್ತಾರೆ. ಹಾಗಂತ ಪೊಲೀಸರನ್ನು ನಾನು ಸಮರ್ಥಿಸುತಿಲ್ಲ. ಅವರ ಕೆಲಸ ಅವರು ಮಾಡಿದ್ದಾರೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ಗೃಹ ಸಚಿವರ ಬಳಿ ರಾತ್ರಿ ಮಾತಾಡಿದ್ದೇನೆ. ಜನವರಿ 18 ರಂದು ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ನಡೆಯುತ್ತದೆ. ಎಲ್ಲರನ್ನು ಗಮನದಲ್ಲಿ ಇಟ್ಟುಕೊಂಡು ಚುನಾವಣೆ ನಡೆಯುತ್ತದೆ ಎಂದು ಹೇಳಿದ್ದಾರೆ.

KRSನಲ್ಲಿ ಪ್ರವಾಸಿಗರಿಗೆ ಬೆಲೆ ಏರಿಕೆ ಬಿಸಿ..! ಎಂಟ್ರಿ ಫೀಸ್‌ನಲ್ಲಿ ಭಾರೀ ಹೆಚ್ಚಳ

click me!