ಮತ್ತೊಬ್ಬ ಶಾಸಕ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್..!

By Kannadaprabha News  |  First Published Aug 2, 2021, 7:39 AM IST

*  ಬಿಎಸ್ಪಿಯಿಂದ ಉಚ್ಚಾಟನೆಯಾಗಿದ್ದ ಮಹೇಶ್‌
*  ರಾಜಕೀಯ ಭವಿಷ್ಯದ ದೃಷ್ಟಿಯಿಂದ ಬಿಜೆಪಿಗೆ ಹತ್ತಿರವಾಗಿದ್ದ ಮಹೇಶ್‌
*  ಯಾವುದೇ ಷರತ್ತಿಲ್ಲದೆ ಬಿಜೆಪಿ ಸೇರುತ್ತಿದ್ದೇನೆ  


ಕೊಳ್ಳೇಗಾಲ(ಆ.02): ಕೊಳ್ಳೇಗಾಲ ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕ ಎನ್‌.ಮಹೇಶ್‌ ಅವರ ಬಿಜೆಪಿ ಸೇರ್ಪಡೆಗೆ ಕೊನೆಗೂ ದಿನ ನಿಗದಿಯಾಗಿದೆ. ಆ.5ರಂದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಹೇಶ್‌ ಅವರು ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಲಿದ್ದಾರೆ. 

ಬಿಎಸ್ಪಿಯಿಂದ ಆಯ್ಕೆಯಾಗಿದ್ದ ಎನ್‌.ಮಹೇಶ್‌ರನ್ನು ನಂತರ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಆ ಬಳಿಕ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಮಹೇಶ್‌ ಅವರು ಬಿಜೆಪಿಗೆ ಹತ್ತಿರವಾಗುತ್ತಿದ್ದರು. ಬಿಜೆಪಿ ಸೇರ್ಪಡೆಯಾಗುವುದಾಗಿ ಇತ್ತೀಚೆಗೆ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. 

Tap to resize

Latest Videos

undefined

ಬಿಎಸ್‌ವೈ ಭೇಟಿ ಬಳಿಕ ಬಿಜೆಪಿ ಸೇರ್ಪಡೆ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಶಾಸಕ

ಇದೀಗ ಅವರ ಪಕ್ಷ ಸೇರ್ಪಡೆಗೆ ದಿನ ನಿಗದಿಯಾಗಿದೆ. ಈ ನಡುವೆ, ನಾನು ಯಾವುದೇ ಷರತ್ತಿಲ್ಲದೆ ಬಿಜೆಪಿ ಸೇರುತ್ತಿದ್ದೇನೆ. ಯಡಿಯೂರಪ್ಪ ಅವರ ಮುಂದೆ ಪಕ್ಷ ಸೇರ್ಪಡೆಯ ಇಂಗಿತ ಮುಂದಿಟ್ಟಾಗ ಅವರು ಶೀಘ್ರವೇ ಸೇರಿ ಎಂದು ಆಹ್ವಾನ ನೀಡಿದರು. ಹಾಗಾಗಿ ನಮ್ಮ ಕಾರ್ಯಕರ್ತರು, ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿ ಆ.5ರಂದು ಬಿಜೆಪಿ ಸೇರಲಿದ್ದೇನೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ಮತ್ತಿತರ ಮುಖಂಡರ ಜತೆ ಚರ್ಚಿಸಿದ್ದೇನೆ. ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಕೆಲಸ ಮಾಡುತ್ತೇವೆ. ಸಂಸದರಾದ ವಿ.ಶ್ರೀನಿವಾಸ ಪ್ರಸಾದ್‌ ಅವರ ಆಶೀರ್ವಾದವೂ ನನಗಿದೆ ಎಂದರು.
 

click me!