ಕೋಲಾರ ನಗರಸಭೆ ಶೀಘ್ರದಲ್ಲೇ ಪಾಲಿಕೆಯಾಗಿ ಮೇಲ್ದರ್ಜೆಗೆ

By Kannadaprabha News  |  First Published Dec 25, 2023, 10:26 AM IST

ಕೋಲಾರ ನಗರಸಭೆಯನ್ನು ಮಹಾನಗರ ಪಾಲಿಯನ್ನಾಗಿಸಿ ಮೇಲ್ದರ್ಜೆಗೇರಿಸಲು ಸರ್ಕಾರವು ಚಿಂತನೆ ನಡೆಸಿದ್ದು ಈ ಸಂಬಂಧವಾಗಿ ಕೇಂದ್ರಸ್ಥಾನಿಕ ಸಹಾಯಕ ಪೌರಾಡಳಿತ ನಿರ್ದೇಶನಾಲಯವು ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಮಾಡಿದೆ. ಜಿಲ್ಲಾಡಳಿತವು ನಗರಸಭೆ ವ್ಯಾಪ್ತಿಗೆ ಬರಲಿರುವ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಅಭಿಪ್ರಾಯ ತಿಳಿಸುವಂತೆ ಸೂಚಿಸಿದೆ.


 ಕೋಲಾರ :  ಕೋಲಾರ ನಗರಸಭೆಯನ್ನು ಮಹಾನಗರ ಪಾಲಿಯನ್ನಾಗಿಸಿ ಮೇಲ್ದರ್ಜೆಗೇರಿಸಲು ಸರ್ಕಾರವು ಚಿಂತನೆ ನಡೆಸಿದ್ದು ಈ ಸಂಬಂಧವಾಗಿ ಕೇಂದ್ರಸ್ಥಾನಿಕ ಸಹಾಯಕ ಪೌರಾಡಳಿತ ನಿರ್ದೇಶನಾಲಯವು ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಮಾಡಿದೆ. ಜಿಲ್ಲಾಡಳಿತವು ನಗರಸಭೆ ವ್ಯಾಪ್ತಿಗೆ ಬರಲಿರುವ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಅಭಿಪ್ರಾಯ ತಿಳಿಸುವಂತೆ ಸೂಚಿಸಿದೆ.

ಕೋಲಾರ ನಗರವು ಬೃಹತ್ ನಗರಕ್ಕೆ ಸಮೀಪವೇ ಇರುವುದರಿಂದ ಕೋಲಾರದ ಸುತ್ತಮುತ್ತಲಿನ ಗ್ರಾಪಂ ಗ್ರಾಮಾಂತರ ಪ್ರದೇಶಗಳು ಸಹ ನಗರಕ್ಕೆ ಹೊಂದಿಕೊಂಡಿವೆ.

Tap to resize

Latest Videos

undefined

ಅಭಿಪ್ರಾಯ ತಿಳಿಸಲು ಸೂಚನೆ

ಕೋಲಾರ ನಗರವನ್ನು ಉತ್ತಮವಾಗಿ ಅಭಿವೃದ್ದಿಗೊಳಿಸುವುದು ತುಂಬ ಅವಶ್ಯಕ ಎಂದು ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್‌ರಿಗೆ ತಿಳಿಸಿದ್ದಾರೆ. ಸಿಎಂ ಸೂಚನೆ ಮೇರೆಗೆ ಕೋಲಾರ ನಗರವನ್ನು ಹೆಚ್ಚಿನ ಮೂಲಭೂತ ಸೌಕರ್ಯಗಳೊಂದಿಗೆ ಮೇಲ್ದರ್ಜೆಗೆ ಏರಿಕೆ ಮಾಡಿ ಕೋಲಾರವನ್ನು ಮಹಾ ನಗರ ಪಾಲಿಕೆಯನ್ನಾಗಿ ಪರಿವರ್ತಿಸುವ ಸಲುವಾಗಿ ಸರ್ಕಾರ ಮತ್ತು ಪೌರಾಡಳಿತ ನಿರ್ದೇಶನಾಲಯದ ಹಂತದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳೇನಾದರೂ ಇದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಹಾಗೂ ಸ್ವಷ್ಟ ಅಭಿಪ್ರಾಯ ಪ್ರತ್ಯೇಕವಾದ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಡಳಿತ ಕೋರಿದೆ.

ಕೋಲಾರ ನಗರಸಭೆ ವ್ಯಾಪ್ತಿಯನ್ನು ಹೊರತುಪಡಿಸಿ ಸುಮಾರು ೫ ರಿಂದ ೭ ಕಿ.ಮೀ ಸರಹದ್ದಿನಲ್ಲಿ ಕಂಡು ಬರುವ ಕೋಲಾರ ಜಿಲ್ಲೆಯ ಪಂಚಾಯಿತಿಗಳಾದ ಹೊನ್ನೇನಹಳ್ಳಿ, ವಡಗೂರು, ಅರಹಳ್ಳಿ, ಕೊಂಡರಾಜನಹಳ್ಳಿ ಹಾಗೂ ಬೆಗ್ಲಿಹೊಸಹಳ್ಳಿ ಗ್ರಾಪಂಗಳನ್ನು ಸೇರ್ಪಡೆ ಮಾಡಿಕೊಂಡು ಕೋಲಾರ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಪರಿವರ್ತಿಸಿ ಮೇಲ್ದರ್ಜೆಗೇರಿಸಲು ಕರ್ನಾಟಕ ಪುರಸಭೆಗಳ ಅಧಿನಿಯಮ ೧೯೬೪ರ ನಿಯಮ ೩೪೯ರಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ನಿಗದಿಪಡಿಸಲಾಗಿದೆ.

ಜನಸಂಖ್ಯೆಯ ಸಾಂದ್ರತೆ ತಿಳಿಸಿ

ಜನಸಂಖ್ಯೆ10 ಸಾವಿರಕ್ಕೆ ಕಡಿಮೆ ಇಲ್ಲದಂತೆ ಹಾಗೂ 20 ಸಾವಿರಕ್ಕೆ ಹೆಚ್ಚಾಗಿ ಇರಬಾರದು, ಜನಸಂಖ್ಯೆಯ ಜನ ಸಾಂದ್ರಾತೆಯು ಒಂದು ಚದರ ಕಿ.ಮೀ ವಿಸ್ತೀರ್ಣಕ್ಕೆ ೪೦೦ಕ್ಕಿಂತ ಕಡಿಮೆ ಇರಬಾರದು ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗ ಅವಕಾಶಗಳು ಶೇ ಪ್ರಮಾಣವು ಒಟ್ಟು ಉದ್ಯೋಗದ ಪ್ರಮಾಣಕ್ಕಿಂತ ಶೇ.೫೦ಕ್ಕಿಂತ ಕಡಿಮೆ ಇರಬಾರದು ಎಂದು ನಿಗದಿಪಡಿಸಲಾಗಿದೆ.

ಪಾಲಿಕೆಯನ್ನಾಗಿ ಉನ್ನತೀಕರಿಸಲು ಪರಿವರ್ತನೆಗೊಳ್ಳುವ ಪ್ರದೇಶಗಳ ವಿವರಗಳನ್ನು ಅನುಬಂಧ-ಎ ಹಾಗೂ ಸರಹದ್ದನ್ನು ವಿಸ್ತರಿಸಿದ ನಂತರ ಅದರ ಗಡಿಯನ್ನೊಳಗೊಂಡ ಮಾಹಿತಿಯ ಅನುಬಂಧ-ಬಿ ಯಲ್ಲಿ ಸಂಬಂಧಿಸಿ ನಕಾಶೆಯೊಂದಿಗೆ ಜಿಲ್ಲಾಡಳಿತಕ್ಕೆ ಸಲ್ಲಿಸಲು ಕೋರಲಾಗಿದೆ ಎಂದು ಜಿಲ್ಲಾ ಆಡಳಿತ ಮೂಲಗಳಿಂದ ವರದಿಯಾಗಿದೆ.

click me!