
ಚಿತ್ರದುರ್ಗ (ಮೇ. 13): ಚಿತ್ರದುರ್ಗದ ಮಲ್ಲಾಪುರ ಗ್ರಾಮದಲ್ಲಿ (Mallapura Village) ಕಳೆದ 20 ವರ್ಷಗಳಿಂದ ಕೆರೆಯ ಕೋಡಿ ಬಿದ್ದು ಜನರಿಗಾಗುತ್ತಿದ್ದ ಸಮಸ್ಯೆಗಳ ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ 3 ತಂಡ (Big 3) ವರದಿ ಮಾಡಿತ್ತು. ಮಳೆ ಬಂದರೆ ಸಾಕು ಕೊಳಚೆ ನೀರು ಮನೆಯೊಳಗೆ ನುಗ್ಗುತ್ತಿತ್ತು.ಇದರಿಂದ ಗ್ರಾಮದ 200ಕ್ಕೂ ಹೆಚ್ಚು ಮನೆಗಳಿಗೆ ಕಂಟಕ ಎದುರಾಗಿ ಜನರು ಕೊಳಚೆ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದರು. ಅಲ್ಲದೆ ಜನರಿಗೆ ಸಂಚಾರಕ್ಕೆ ಕೂಡ ತೊಂದರೆಯಾಗುತ್ತಿತ್ತು. ಆದರೆ ಯಾವೊಬ್ಬ ಜನಪ್ರತಿನಿಧಿಯೂ, ಅಧಿಕಾರಿಯಾಗಲಿ ಈ ಕಡೆ ತಲೆ ಹಾಕಿರಲಿಲ್ಲ. ಜನರ ಸಮಸ್ಯೆ ಆಲಿಸಿರಲಿಲ್ಲ.
ಒಂದು ಕಡೆ ಮನೆಗೆ ನೀರು ನುಗಿ ಗ್ರಾಮದ ಮನೆಗಳು ಕೆರೆಯಂತಾಗುತ್ತಿದ್ದವು. ಹಗಲು ರಾತ್ರಿ ಎನ್ನದೇ ಮನೆ ಮಂದಿ ಮನೆಯ ನೀರನ್ನೇ ಹೊರಹಾಕುವುದುದೇ ಕೆಲಸ ವಾಗಿಬಿಟ್ಟಿತ್ತು. ಅದರಲ್ಲೂ ವಯಸ್ಸಾದವರ ಪಾಡು ಹೇಳತೀರದ್ದು. "ಕೆರೆ ಕೋಡಿ ಬಿದ್ದು ಮನೆಗಳಿಗೆ ನೀರು ನುಗ್ಗಿ, ರೋಗ ರುಜಿನಗಳು ಹರಡುತ್ತಿವೆ. ಆಸ್ಪತ್ರಗೆ ತೆರಳಬೇಕೆಂದರೂ ವಾಹನ ಕೂಡ ಬರಲ್ಲ" ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದರು.
"ಕೆರೆಯ ಸಾಮರ್ಥ್ಯಕ್ಕಿಂರ ಹೆಚ್ಚಿನ ನೀರು ಹರಿದಾಗ, ಕೊಳಚೆ ನೀರು ಊರೊಳಗೆ ನುಗ್ಗಿ, ಮನೆಯೊಳಗೆ ನುಗ್ಗುತ್ತದೆ. ಇದರಿಂದ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗಗಳು ಬರುತ್ತವೆ. ಸಣ್ಣ ನೀರಾವರಿ ಇಲಾಖೆಯವರೂ ಗ್ರಾಮಕ್ಕೆ ಬಂದೂ ಯಾವತ್ತು ಪರೀಶಿಲನೆ ಮಾಡಿಲ್ಲ. ಹೀಗಾಗಿ ಅಧಿಕಾರಿಗಳು ಪರಿಶೀಲನೆ ಮಾಡಿ ಗ್ರಾಮಕ್ಕೆ ನೀರು ನುಗ್ಗದಂತೆ ತಡೆಗೋಡೆ ನಿರ್ಮಾಣ ಮಾಡಬೇಕು" ಎಂದು ಗ್ರಾಮಸ್ಥರು ಆಗ್ರಹಿಸಿದ್ದರು.
"
ಜನರ ಗೋಳನ್ನು ಬಿಗ್3 ಯಲ್ಲಿ ಪ್ರಸಾರ ಮಾಡಿ, ಸಂಬಂಧಫಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಕ್ಲಾಸ್ ತೆಗೆದುಕೊಂಡ ಮೇಲೆ, ತಡೆಗೋಡೆ ನಿರ್ಮಾಣ ಮಾಡುವ ಭರವಸೆ ನೀಡಿದ್ದರು. ಈಗ 20 ವರ್ಷದ ಸಮಸ್ಯೆ 1 ವರ್ಷದಲ್ಲಿ ಕ್ಲೀಯರ್ ಆಗಿದ್ದು, ಮಲ್ಲಾಪುರ ಕೆರೆ ಕೋಡಿ ಸಮಸ್ಯೆಗೆ ಪರಿಹಾರ ಸಿಕ್ಕಿದೆ.
ಶಾಸಕರ ಅನುದಾನದಿಂದ 1 ಕೋಟಿ ವೆಚ್ಚದಲ್ಲಿ 100 ಮೀ ದೂರದ ಶಾಶ್ವತ ತಡೆಗೋಡೆ ನಿರ್ಮಾಣವಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಬಿಗ್ 3ಗೆ ಮಲ್ಲಾಪುರದ ಜನರು ಅಭಿನಂದನೆ ಸಲ್ಲಿಸಿದ್ದಾರೆ.
"ತಡೆಗೋಡೆ ನಿರ್ಮಾಣವಾದಮೇಲೆ ಕಲುಷಿತ ನೀರು ಈಗ ಗ್ರಾಮಕ್ಕೆ ನುಗುತ್ತಿಲ್ಲ, ಬಿಗ್ 3 ತಂಡಕ್ಕೆ ನಾವು ಹೃದಯಪೂರ್ವಕ ಧನ್ಯವಾದ ತಿಳಿಸುತ್ತೇವೆ" ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.
"20 ವರ್ಷಗಳಿಂದ ಬಗೆಹರಿಸಲಾಗದ ಸಮಸ್ಯೆ ಬಗ್ಗೆ 2021ರಲ್ಲಿ ಸುವರ್ಣ ನ್ಯೂಸ್ ಬಿಗ್ 3 ವರದಿ ಮಾಡಿತ್ತು. ಈ ಮೂಲಕ ಸುವರ್ಣ ತಂಡ ನಮಗೆ ಅನುಕೂಲ ಮಾಡಿಕೊಟ್ಟಿದೆ. ಸುವರ್ಣ ಬಿಗ್ 3 ತಂಡಕ್ಕೆ ಮಲ್ಲಾಪುರ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು" ಮತ್ತೊಬ್ಬ ಗ್ರಾಮಸ್ಥರು ಹೇಳಿದ್ದಾರೆ.
"