* ಮಹಿಳೆಯರ ಬಗ್ಗೆ ಅಗೌರ ತೋರುತ್ತಿರುವ ಶಾಸಕರು, ಸಚಿವರು
* ಪ್ರತಿಪಕ್ಷದ ಸದಸ್ಯರು ಮೌನದಿಂದ ಹೊರ ಬರಬೇಕು
* ಇಂತಹ ಹೇಳಿಕೆಗಳಿಗೆ ಆಸ್ಪದವಾಗದಂತೆ ಪ್ರತಿಭಟಿಸಬೇಕು
ಬಳ್ಳಾರಿ(ಮಾ.10): ಶಾಸಕರು, ಸಚಿವರು ಸದನಕ್ಕೆ ಗೌರವ ಬರುವಂತೆ ನಡೆದುಕೊಳ್ಳುವುದು ಬಿಟ್ಟು, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮಹಿಳೆಯರ(Women) ಬಗ್ಗೆ ಅಗೌರ ತೋರುತ್ತಿದ್ದಾರೆ. ‘ಒಂದು ವೇಳೆ ನಾನು ಸದನದಲ್ಲಿ(Assembly Session) ಇದ್ದಿದ್ರೆ ಮೆಟ್ಟು ತಗೊಂಡು ಹೊಡೀತಿದ್ದೆ’ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್(Kodihalli Chandrashekar) ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಹಿಳೆಯರ ಬಗ್ಗೆ ಅಗೌರವವಾಗಿ ಮಾತನಾಡುವವರ ವಿರುದ್ಧ ಕ್ರಮವಾಗಬೇಕು. ಪ್ರತಿಪಕ್ಷದ ಸದಸ್ಯರು ಮೌನದಿಂದ ಹೊರ ಬರಬೇಕು. ಇಂತಹ ಹೇಳಿಕೆಗಳಿಗೆ ಆಸ್ಪದವಾಗದಂತೆ ಪ್ರತಿಭಟಿಸಬೇಕು ಎಂದರು.
ತಟ್ಟೆ, ಲೋಟ ಬಡಿದು ಧರಣಿ: ಕೋಡಿಹಳ್ಳಿ ಚಂದ್ರಶೇಖರ್
ಶಾಸಕ, ಸಚಿವರಾದವರು ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡುವುದು ಸರಿಯೇ? ಅಂಥ ಸಂದರ್ಭದಲ್ಲಿ ನಾನೇನಾದರೂ ಸದನದಲ್ಲಿ ಇದ್ದಿದ್ದರೆ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು ಎಂದರು.
ರೈತಸಂಘದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ: ಕೋಡಿಹಳ್ಳಿ
ಯಾದಗಿರಿ(Yadgir): ಮುಂದಿನ ದಿನಗಳಲ್ಲಿ ರೈತರು ಸಹ ವಿಧಾನಸಭೆ ಪ್ರವೇಶಿಸಬೇಕೆನ್ನುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ರೈತ ಸಂಘ ವಿಧಾನಸಭೆ ಚುನಾವಣೆಗಳಲ್ಲಿ9Assembly Elections) ಸ್ಪರ್ಧಿಸಲಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಘೋಷಿಸಿದ್ದಾರೆ. ರಾಜ್ಯದಲ್ಲಿ ಪುಂಡಪೋಕರಿಗಳು ಶಾಸಕರಾಗಿ ವಿಧಾನಸೌಧಕ್ಕೆ ಹೋಗಿದ್ದಾರೆ. ಹೀಗಾಗಿ, ವ್ಯವಸ್ಥೆಯನ್ನು ಸರಿಪಡಿಸಲು, ಮುಂದಿನ ದಿನಗಳಲ್ಲಿ ರೈತರೂ ವಿಧಾನಸೌಧಕ್ಕೆ ಹೋಗಬೇಕಾಗಿದೆ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ರೈತಸಂಘದ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ. ನಾನೂ ರೈತರು ಎಲ್ಲಿ ಸ್ಪರ್ಧೆ ಮಾಡು ಅನ್ನುತ್ತಾರೋ, ಆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದರು.
ಅಧಿವೇಶನದಲ್ಲಿ ಕೃಷಿ ಕಾಯ್ದೆ ರದ್ದುಗೊಳಿಸಿ
ಹೊಸಪೇಟೆ: ಕೇಂದ್ರ ಸರ್ಕಾರ(Central Government) ರದ್ದುಗೊಳಿಸಿರುವ ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರ(Government of Karnataka) ಈ ಅಧಿವೇಶನದಲ್ಲಿ ರದ್ದು ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ರೈತರು(Farmers) ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದರು.
ಮಾ.7 ರಂದು ನಗರದ ಎಪಿಎಂಸಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದು ಮಾಡಿದ್ದರೂ ರಾಜ್ಯ ಸರ್ಕಾರ ಕೃಷಿ ಕಾಯ್ದೆಗಳನ್ನು ಈವರಗೂ ರದ್ದುಗೊಳಿಸದೇ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ, ಮಾ. 28ರಂದು ರೈತರ ಸಭೆ ನಡೆಯಲಿದೆ. ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿದ್ದಾರೆ. ಸರ್ಕಾರ ಮೀನಮೇಷ ಮಾಡದೇ ಅಧಿವೇಶನಲ್ಲಿ ಕೃಷಿ ಕಾಯ್ದೆಗಳನ್ನು ರದ್ದುಮಾಡಬೇಕು ಎಂದು ಒತ್ತಾಯಿಸಿದ್ದರು.
ಬರ ಮುಕ್ತ ಕರ್ನಾಟಕ:
ನೀರು, ನೈಸರ್ಗಿಕ ಸಂಪತ್ತು ಹೊಂದಿರುವ ಕರ್ನಾಟಕವನ್ನು ಬರ ಮುಕ್ತ ರಾಜ್ಯ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದರು.
ಮುಂದುವರಿದ ಹಗ್ಗ ಜಗ್ಗಾಟ: ಮುಷ್ಕರ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದ ಕೋಡಿಹಳ್ಳಿ
ಪಾದಯಾತ್ರೆ ರಾಜಕಾರಣ:
ಕಾಂಗ್ರೆಸ್(Congress) ಅಧಿಕಾರದಲ್ಲಿದ್ದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮೇಕೆದಾಟು-ಕಾವೇರಿ ವಿಚಾರ ಕುರಿತು ಮೌನಕ್ಕೆ ಶರಣಾಗಿದ್ದರು. ಈಗ ಅಧಿಕಾರ ಕಳೆದುಕೊಂಡು ಮೇಕೆದಾಟು ಯೋಜನೆ ಜಾರಿಗೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಈಗ ಕಾಂಗ್ರೆಸ್ ಹಾದಿಯಲ್ಲಿ ಬಿಜೆಪಿ ಕೂಡ ಸಾಗುತ್ತಿದೆ. ಪರಿಸರ, ಅರಣ್ಯ ಇಲಾಖೆಯ ಕ್ಲಿಯರನ್ಸ್ ಹಾಗೂ ಕೇಂದ್ರ ಸರ್ಕಾರ ಅನುಮತಿ ಪಡೆಯದೇ ಈ ಬಜೆಟ್‌ನಲ್ಲಿ ಮೇಕೆದಾಟು ಯೋಜನೆಗೆ ಸಾವಿರ ಕೋಟಿ ರು. ಮೀಸಲಿಟ್ಟು ಜನರ ಮೂಗಿಗೆ ತುಪ್ಪ ಸವರುತ್ತಿದೆ. ಇದೊಂದು ವಿಚಿತ್ರ ಸರ್ಕಾರ ಎಂದು ಲೇವಡಿ ಮಾಡಿದ್ದರು.
ಹಸಿರು ಶಾಲಿನಲ್ಲಿ ರಾಜಕಾರಣಿಗಳು:
ಇತ್ತೀಚಿನ ದಿನಗಳಲ್ಲಿ ರೈತರ ಪರ ಹೋರಾಟ ಮಾಡುವ ನೆಪದಲ್ಲಿ ರಾಜಕಾರಣಿಗಳು ಹಸಿರು ಶಾಲು ಹೆಗಲ ಮೇಲೆ ಹೊತ್ತು ಪ್ರದರ್ಶನ ಮಾಡುತ್ತಿದ್ದಾರೆ. ಹಾಗಾದರೆ, ಇವರ ಪಕ್ಷದ ಚಿನ್ನೆ-ವಸ್ತ್ರಗಳು ಎಲ್ಲಿ ಹೋದವು. ಇವರಲ್ಲ ಮೂರು ಬಿಟ್ಟವರು. ರೈತರ ಶಾಲಿಗೆ ತನ್ನದೇ ಆದ ಗೌರವವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.