ಮನುಷ್ಯರ ಪಾಪಗಳನ್ನು ತೊಳೆಯಲು, ಕಳೆಯಲು ಮಠಗಳು ಮಾರ್ಗದರ್ಶಕ ಕೇಂದ್ರಗಳಾಗಿದ್ದು, ಈ ಶ್ರಾವಣ ಮಾಸದಲ್ಲಿ ನಡೆಯುವಂತಹ ವಚನಾಮೃತ ಬೋಧನೆಗಳನ್ನು ಕೇಳುತ್ತಾ ಆಧ್ಯಾತ್ಮಿಕತೆಯ ಕಡೆ ತಿರುಗಿಕೊಂಡು ತಮ್ಮ ಜೀವನಗಳನ್ನು ಪಾವನ ಮಾಡಿಕೊಳ್ಳಬೇಕು ಎಂದು ಹಾರನಹಳ್ಳಿಯ ಶ್ರೀ ಕೋಡಿಮಠ ಮಹಾಸಂಸ್ಥಾನದ ಶ್ರೀ. ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ನುಡಿದರು.
ಚನ್ನಗಿರಿ (ಆ.19): ಮನುಷ್ಯರ ಪಾಪಗಳನ್ನು ತೊಳೆಯಲು, ಕಳೆಯಲು ಮಠಗಳು ಮಾರ್ಗದರ್ಶಕ ಕೇಂದ್ರಗಳಾಗಿದ್ದು, ಈ ಶ್ರಾವಣ ಮಾಸದಲ್ಲಿ ನಡೆಯುವಂತಹ ವಚನಾಮೃತ ಬೋಧನೆಗಳನ್ನು ಕೇಳುತ್ತಾ ಆಧ್ಯಾತ್ಮಿಕತೆಯ ಕಡೆ ತಿರುಗಿಕೊಂಡು ತಮ್ಮ ಜೀವನಗಳನ್ನು ಪಾವನ ಮಾಡಿಕೊಳ್ಳಬೇಕು ಎಂದು ಹಾರನಹಳ್ಳಿಯ ಶ್ರೀ ಕೋಡಿಮಠ ಮಹಾಸಂಸ್ಥಾನದ ಶ್ರೀ. ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ನುಡಿದರು.
ಅವರು ಪಟ್ಟಣದ ಶ್ರೀ ಹಾಲಸ್ವಾಮಿ ವಿರಕ್ತ ಮಠದಲ್ಲಿ ಸಂಜೆ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಸಂಸ್ಮರಣೆ, ಶ್ರೀ ಹಾಲಸ್ವಾಮೀಜಿ ಸಂಸ್ಮರಣೆ, ಶ್ರೀ ನೀಲಕಂಠ ಮಹಾಸ್ವಾಮೀಜಿ 39ನೇ ವರ್ಷದ ಸಂಸ್ಮರಣೆ, ಶ್ರೀ ಜಯದೇವ ಮಹಾಸ್ವಾಮಿಗಳ ತೃತೀಯ ಸಂಸ್ಮರಣೋತ್ಸವ ಹಾಗೂ ಬಸವ ತತ್ವ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದ ಶ್ರೀಗಳು ಈ ಕ್ಷೇತ್ರದ ಶಾಸಕರಾಗಿದ್ದ ಮಾಡಾಳು ವಿರೂಪಾಕ್ಷಪ್ಪನವರ ಶ್ರೇಯಸ್ಸನ್ನು ಸಹಿಸದೆ, ಮಹಾನ್ ವ್ಯಕ್ತಿಗಳ ಪಿತೂರಿಯಿಂದ ಇವರನ್ನು ಪಾಪದ ಕೂಪಕ್ಕೆ ತಳ್ಳಿದರು.
ರಾಜ್ಯದಲ್ಲಿ ವಿಚಿತ್ರವಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ: ಶಾಸಕ ಬಿ.ವೈ.ವಿಜಯೇಂದ್ರ
ಎಂತೆಂತಹ ಮಹಾನ್ ವ್ಯಕ್ತಿಗಳಾದ ಮಹಾತ್ಮಗಾಂಧಿ, ಇಂದಿರಾಗಾಂಧಿ, ನೆಹರು, ಅಮಿತ್ ಷಾ, ಯಡಿಯೂರಪ್ಪ ಇಂತಹ ಇನ್ನೂ ಅನೇಕ ಪ್ರಮುಖರು ಒಂದು ತತ್ವ ಸಿದ್ಧಾಂತಗಳನ್ನು ಇಟ್ಟುಕೊಂಡು ಹೋದವರಿಗೆ ಜೈಲಿಗೆ ಕಳಿಸಿ ನೋವುಂಟು ಮಾಡುವಂತಹ ಜನರೇ ತುಂಬಿಕೊಂಡಿದ್ದಾರೆ. ಮಾಡಾಳು ವಿರೂಪಾಕ್ಷಪ್ಪನವರು ದೂರದೃಷ್ಟಿಯನ್ನು ಹೊಂದಿರುವ ಪ್ರಬುದ್ಧ ರಾಜಕಾರಣಿಯಾಗಿದ್ದು, ಮುಂದಿನ ದಿನಗಳಲ್ಲಿ ಇವರ ಭವಿಷ್ಯ ಉಜ್ವಲಗೊಳ್ಳಲಿದೆ ಎಂದು ಆಶೀರ್ವದಿಸಿದರು.
ಸಮಾರಂಭದ ಉದ್ಘಾಟನೆಯನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನೆರವೇರಿಸಿ ಮಾತನಾಡಿ, ಎಲ್ಲಾ ಕಾಲಗಳಲ್ಲಿಯೂ ಹಿಂದೂ ಧರ್ಮದ ಮೇಲೆ ದಬ್ಬಾಳಿಕೆಗಳೇ ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ಹಿಂದೂ ಧರ್ಮದ ರಕ್ಷಣೆಗೆ ಮಠ-ಮಂದಿರಗಳು ಹಿಂದೂ ಧರ್ಮದ ರಕ್ಷಣೆಗಾಗಿ ಮುಂಚೂಣಿಯಲ್ಲಿ ನಿಂತು, ಧಾರ್ಮಿಕವಾದ ಸೇವೆಗಳನ್ನು ಮಾಡುತ್ತಾ ಜನತೆಯಲ್ಲಿ ಉತ್ತಮವಾದ ಸಂಸ್ಕಾರ-ಸಂಸ್ಕೃತಿಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿದ್ದರ ಬಗ್ಗೆ ಮಾತನಾಡಿದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತದೆ ಎಂದು ಜನರು ಮಾತನಾಡಿ ಕೊಳ್ಳುತ್ತಿದ್ದರು.
ಅಂತಹ ಸಂದರ್ಭದಲ್ಲಿ ಕೋಡಿಮಠ ಶ್ರೀಗಳು ಬರಗಾಲ ಬರಲ್ಲ ಮಳೆಯಾಗುತ್ತೆ ಎಂದು ಹೇಳಿದಂತೆ ಮಳೆಯಾಗುತ್ತಿದೆ. ಶ್ರೀಗಳವರು ಹೇಳಿದ ಮಾತುಗಳು ಸತ್ಯವಾಗಿ ಸಂಭವಿಸುತ್ತವೆ ಎಂದರು. ಇಂದಿರಾಗಾಂಧಿ, ರಾಜೀವ್ ಗಾಂಧಿ, ಪ್ರಧಾನ ಮಂತ್ರಿಗಳಾಗುತ್ತಾರೆಂದು ಭವಿಷ್ಯ ನುಡಿದಂತೆ ನಡೆದಿರುವುದೇ ಸಾಕ್ಷಿಯಾಗಿದೆ. ಅಂತಹ ದೈವಾಂಶ ಶಕ್ತಿಯನ್ನು ಹೊಂದಿದವರು ಈ ಸಂತರು ಎಂದು ಹೇಳುತ್ತಾ ಅಡಿಕೆನಾಡೆಂದೇ ಹೆಸರು ಪಡೆದ ಈ ತಾಲೂಕಿಗೆ ಕೋಡಿಮಠದ ಶ್ರೀಗಳವರ ಪಾದಸ್ಪರ್ಶದಿಂದ ತಾಲೂಕಿನಲ್ಲಿ ಉತ್ತಮ ವಾದ ಮಳೆ-ಬೆಳೆಯಾಗಲಿ ಎಂದು ಹೇಳಿದರು.
ಶ್ರೀ ಮಠದ ಡಾ.ಬಸವ ಜಯಚಂದ್ರ ಮಹಾಸ್ವಾಮಿಗಳು ಮಾತನಾಡಿ, ಪ್ರತಿ ವರ್ಷವೂ ಶ್ರಾವಣ ಮಾಸದಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದು, ಇಂತಹ ಆಚಾರ-ವಿಚಾರಗಳನ್ನುಳ್ಳ ವಚನಾಮೃತ ಬೋಧೆಗಳನ್ನು ಕೇಳುತ್ತಾ ಭಕ್ತ ಸಮೋಹವು ಉತ್ತಮವಾದ ಸಂಸ್ಕಾರಗಳನ್ನು ಹೊಂದುತ್ತಿರುವ ಬಗ್ಗೆ ತಿಳಿಸಿದರು.
ಬಹಿರ್ದೆಸೆಗೆ ತೆರಳಿದ್ದ ಯುವಕನ ಮೇಲೆ ಕಾಡಾನೆ ದಾಳಿ: ದೂರು ನೀಡಿದರೂ ಸ್ವೀಕರಿಸದ ಅರಣ್ಯಾಧಿಕಾರಿಗಳು
ಸಮಾರಂಭದಲ್ಲಿ ಹಿರೇಮಠದ ಡಾ.ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಪ್ರವಚನಕಾರರಾದ ಮಹಾಂತೇಶ ಶಾಸ್ತ್ರಿಗಳು, ಗುಡ್ಡಾಪುರದ ಶ್ರೀದಾನಮ್ಮ ತಾಯಿಯವರ ವಚನಾಮೃತ ಭೋದನೆಗೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ವೀರಶೈವ ಸಮಾಜದ ಅಧ್ಯಕ್ಷ ಕೋರಿ ಬಸವರಾಜ್, ಗೌರವ ಅಧ್ಯಕ್ಷ ಎನ್.ಯು. ರಾಜಶೇಖರಯ್ಯ, ಸಾಗರದ ಶಿವಲಿಂಗಪ್ಪ, ಕವಿತಾಹಾಲಸ್ವಾಮಿ, ಜವಳಿ ಮಹೇಶ್ ಉಪಸ್ಥಿತರಿದ್ದರು. ಜ್ಯೋತಿ ಕೋರಿ, ರೂಪ ಮುರುಡೇಶ್ ತಂಡದವರು ವಚನ ಗೀತೆಗಳನ್ನು ಹಾಡಿದರು.