ಶಿರಸಿ (ಜು.22): ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಶೀಘ್ರದಲ್ಲೇ ಸುಖಾಂತ್ಯ ಕಾಣಲಿದೆ ಎಂದು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನೇರಲಕಟ್ಟೆಗ್ರಾಮದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಯಾವ ರೀತಿಯ ಸುಖಾಂತ್ಯ ಎಂದು ಹೇಳಲು ಸಾಧ್ಯವಿಲ್ಲ.
ಕೋಡಿಮಠದ ಶ್ರೀಗಳಿಂದ ಸ್ಫೋಟಕ ಭವಿಷ್ಯ : ಕೊರೋನಾ ಕೊನೆಯಾಗುತ್ತಾ-ಮತ್ತೇನು ಕಾದಿದೆ ಜಗಕೆ..?
ಈಗ ರಾಜ್ಯಕ್ಕೆ ಅಶುಭ ನುಡಿಯುವುದಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ. ಆಗಸ್ಟ್ 3ನೇ ವಾರದಿಂದ ರೋಗ ರುಜಿನ ಹೆಚ್ಚಾಗಲಿದ್ದು, ಜನವರಿವರೆಗೆ ಇರಲಿದೆ. ಕೊರೋನಾ ಭಯಕ್ಕೆ ಜನರು ಸಾಯುತ್ತಿದ್ದಾರೆ.
ಸಂಕ್ರಾಂತಿಯ ಒಳಗೆ ಬಹುದೊಡ್ಡ ಅವಘಡ ಆಗಲಿದೆ. ರಾಜಕೀಯ ಅವಘಡದಿಂದ ಜಾಗತಿಕ ತಲ್ಲಣ ಉಂಟಾಗಲಿದೆ. ಜಲಪ್ರಳಯ ಉಂಟಾಗಲಿದೆ. ಪಂಚಭೂತಗಳು ಅನಾಹುತಕ್ಕೆ ಕಾರಣವಾಗುತ್ತವೆ ಎಂದರು.