ಶಿವಮೊಗ್ಗ (ಜು.22): ಕೊರೋನಾ ಕಾರಣ ಸ್ಥಗಿತಗೊಳಿಸಲಾಗಿದ್ದ ಮಹತ್ವಾಕಾಂಕ್ಷಿ ಸಪ್ತಪದಿ ಯೋಜನೆ ಪುನರಾರಂಭಿಸಲು ಉದ್ದೇಶಿಸಿದ್ದು, ರಾಜ್ಯದ 100 ಆಯ್ದ ದೇವಸ್ಥಾನಗಳಲ್ಲಿ ಸರ್ಕಾರದಿಂದಲೇ ಸರಳ ವಿವಾಹ ಏರ್ಪಡಿಸಲಾಗುವುದು ಎಂದು ರಾಜ್ಯ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಯಡಿ ಮದುವೆಯಾಗುವ ವಧುವಿಗೆ 40 ಸಾವಿರ ರು. ಮೌಲ್ಯದ ಬಂಗಾರ ನೀಡಲಾಗುವುದಲ್ಲದೆ, 10 ಸಾವಿರ ರು. ಮೌಲ್ಯದ ಧಾರೆ ಸೀರೆ ಮತ್ತು ವರನಿಗೆ 5 ಸಾವಿರ ರು. ಮೌಲ್ಯದ ವಸ್ತ್ರ ನೀಡಲಾಗುವುದು ಎಂದರು.
undefined
ಕೋವಿಡ್ ಆಸ್ಪತ್ರೆಯಲ್ಲೇ ಮಾಂಗಲ್ಯಂ ತಂತು ನಾನೇನ.. ಪಿಪಿಇ ಕಿಟ್ ಧರಿಸಿ ಸಪ್ತಪದಿ ತುಳಿದ ಜೋಡಿ
ಮಂಗಳಕಾರ್ಯಗಳಿಗೆ ಈಗಾಗಲೇ ಮುಹೂರ್ತ ನಿಗದಿಪಡಿಸಲಾಗಿದ್ದು, ಅಗತ್ಯಸಿದ್ಧತೆ ಮಾಡಿಕೊಳ್ಳಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಜನಸಾಮಾನ್ಯರು ಇತ್ತೀಚಿನ ದಿನಗಳಲ್ಲಿ ಆಡಂಬರದ ಮದುವೆಗಿಂತ ಸರಳ ಮದುವೆಗಳತ್ತ ಮನಸ್ಸು ಮಾಡುತ್ತಿದ್ದಾರೆ. ಇದರಿಂದಾಗಿ ಕಾರ್ಯಕ್ರಮಕ್ಕೆ ಮಹತ್ವ ಹೆಚ್ಚಾಗಿದೆ ಎಂದರು.