
ಅರಸೀಕೆರೆ (ಜೂ.04): ಕೊರೋನಾ ಎಂಬ ವೈರಸ್‌ನಿಂದ ವಿಶ್ವ ಸಮುದಾಯವೇ ನಲುಗುತ್ತಿದೆ. ಇದರಿಂದ ಶೀಘ್ರವೇ ಮುಕ್ತಿ ದೊರೆಯಲಿದೆ ಎಂದು ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ ಹೇಳಿದರು.
ಶ್ರೀಮಠದಲ್ಲಿ ಮೃತ್ಯುಂಜಯ ಹೋಮ, ಮುಂಜಾನೆ ಶಿವಲಿಂಗಜ್ಜಯ್ಯನವರ ಗದ್ದುಗೆಗೆ ಹಾಗೂ ಕ್ಷೇತ್ರ ದೇವತೆಗಳಿಗೆ ವಿಶೇಷ ಪೂಜೆ ನಡೆದ ಬಳಿಕ ಕಿರಣ್ ಹಾಗೂ ಅರುಣ್ ಶಾಸ್ತ್ರಿಗಳ ನೇತೃತ್ವದಲ್ಲಿ ಗಣಪತಿ ಹಾಗೂ ಮೃತ್ಯುಂಜಯ ಹೋಮ ನಡೆಸಲಾಯಿತು.
ಕೋಡಿಮಠದ ಶ್ರೀಗಳಿಂದ ಸ್ಫೋಟಕ ಭವಿಷ್ಯ : ಕೊರೋನಾ ಕೊನೆಯಾಗುತ್ತಾ-ಮತ್ತೇನು ಕಾದಿದೆ ಜಗಕೆ..?
ಬಳಿಕ ಶ್ರೀ ಕ್ಷೇತ್ರದ ಪೀಟಾಧಿಪತಿ ಡಾ. ಶಿವಾನಂದ ಶಿವಯೋಗಿ ಸ್ಚಾಮೀಜಿ ಮಾತನಾಡಿ ಜಪ ತಪ ಹೋಮ ಹವನಾದಿಗಳಿಗೆ ಅವುಗಳದ್ದೇ ಮಹತ್ವವಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ಕೊರೋನಾ ಎಂಬ ಸಾಂಕ್ರಾಮಿಕ ರೋಗದಿಮದ ಲಕ್ಷಾಂತರ ಮಂದಿ ಸಾವು ನೋವಿಗೆ ತುತ್ತಾಗುತ್ತಿದ್ದಾರೆ. ಇದರಿಂದ ಮುಕ್ತಿ ದಯಪಾಲಿಸುವಂತೆ ಭಗವಂತನಲ್ಲಿ ಪ್ರಾರ್ಥಿಸಿ ಶ್ರೀ ಮಠದ ಭಕ್ತರ ಸಹಕಾರದೊಂದಿಗೆ ಮಠದಲ್ಲಿ ನಿತ್ಯ ಹೋಮ ಹವನ ನಡೆಸಲಾಗುತ್ತದೆ ಎಂದರು.