ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಇದೀಗ ಇಲ್ಲಿನ ಜನರನ್ನು ಮತ್ತೆ ಆತಂಕಕ್ಕೆ ದೂಡಿದೆ. ಮಂಗಳೂರು - ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ.
ಮಡಿಕೇರಿ [ಜು.05] : ಕಳೆದ ಬಾರಿ ಭೀಕರ ಪ್ರವಾಕ್ಕೆ ತುತ್ತಾಗಿದ್ದ ಮಡಿಕೇರಿಯಲ್ಲಿ ಈ ಬಾರಿಯೂ ಕೂಡ ಆತಮಖ ಮುಂದುವರಿದಿದೆ. ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಡಗು ಜಿಲ್ಲಾಧಿಕಾರಿ ಅನೀಶ್ ಕಣ್ಮನಿ ಜಾಯ್ ನೇತೃತ್ವದ ತಂಡ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ತಂಡ ಬಿರುಕು ಬಿಟ್ಟ ಸ್ಥಳಕ್ಕೆ ತೆರಳಿ ಪರಿಶೀಲಿಸಿದೆ.
undefined
ಮಡಿಕೇರಿಯಿಂದ 6 ಕಿಲೋ ಮೀಟರ್ ದೂರದ ಕಾಟಕೇರಿ ಜಂಕ್ಷನ್ ಬಳಿ ಬಿರುಕು ಹಾಣಿಸಿಕೊಂಡಿದ್ದು, ಹೆದ್ದಾರಿ ಕುಸಿಯುವ ಭೀತಿ ನಿರ್ಮಾಣವಾಗಿದೆ. ಒಂದು ವೇಳೆ ಹೆದ್ದಾರಿಯಲ್ಲಿ ಭಾರೀ ಕುಸಿತ ಕಂಡು ಬಂದಲ್ಲಿ ಮಡಿಕೇರಿ - ಮಂಗಳೂರು ರಸ್ತೆ ಸಂಪರ್ಕ ಬಂದ್ ಮಾಡುವ ಸಾಧ್ಯತೆ ಇದೆ.
ಮೂನ್ಸೂಚನೆ: ಮುಂದಿನ 24 ಗಂಟೆಯಲ್ಲಿ ಕರ್ನಾಟಕದ ಇಲ್ಲೆಲ್ಲ ಭಾರಿ ಮಳೆ
ಮುಂಜಾಗ್ರತೆ ಕ್ರಮ ವಹಿಸಿರುವ ಕೊಡಗು ಜಿಲ್ಲಾಡಳಿತ ಸ್ಥಳದಲ್ಲೇ ಬೀಡು ಬಿಟ್ಟಿದ್ದು, NHAI ತಜ್ಞರ ತಂಡ ಬಿರುಕಿಗೆ ಸಿಮೆಂಟ್ ತೇಪೆ, ಚರಂಡಿ ಮಾಡಿ ನೀರು ಹರಿಯಲು ಕ್ರಮ ಕೈಗೊಂಡಿದೆ. ಬ್ಯಾರಿಗೇಟ್ ಅಳವಡಿಸಿ ಬಿರುಕು ಸ್ಥಳ ಗುರುತು ಮಾಡಲಾಗಿದ್ದು, ವಾಹನ ಸಂಚಾರರು ಆತಂಕ ಪಡುವಂತಾಗಿದೆ.