ನಾಲ್ಕು ತಿಂಗಳಲ್ಲಿ ಚುನಾವಣೆಗೆ ಆದೇಶ

Published : Jul 05, 2019, 09:23 AM IST
ನಾಲ್ಕು ತಿಂಗಳಲ್ಲಿ ಚುನಾವಣೆಗೆ ಆದೇಶ

ಸಾರಾಂಶ

ಇನ್ನು ನಾಲ್ಕು ತಿಂಗಳಲ್ಲಿ ಚುನಾವಣೆ ನಡೆಸಲು ಹೈ ಕೋರ್ಟ್ ಆದೇಶ ನೀಡಿದೆ. ಹಲವು ವರ್ಷಗಳಿಂದ ಪದಾಧಿಕಾರಿಗಳ ಆಯ್ಕೆ ನಡೆಯದೇ ಇರುವ ಹಿನ್ನೆಲೆ ನಿರ್ಮಾಪಕರ ಸಂಘಕ್ಕೆ ಚುನಾವಣೆ ನಡೆಸಲು ಸೂಚನೆ ನೀಡಲಾಗಿದೆ.

ಬೆಂಗಳೂರು [ಜು.05]: ಹಲವು ವರ್ಷಗಳಿಂದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸದೆ ಇದ್ದ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ 4 ತಿಂಗಳ ಒಳಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ. 

ಅನೇಕ ವರ್ಷಗಳಿಂದ ನಿರ್ಮಾಪಕರ ಸಂಘಕ್ಕೆ ಚುನಾವಣೆ ನಡೆದಿಲ್ಲ. ಹೀಗಾಗಿ ಸಹಕಾರ ಸಂಘಗಳ ಕಾಯ್ದೆ ಪ್ರಕಾರ ನಡೆಯಬೇಕಿದ್ದ ಚುನಾವಣೆ ನಡೆಸದೆ ಒಬ್ಬರೇ ಅಧ್ಯಕ್ಷರಾಗಿ ಮುಂದುವರಿಯುತ್ತಿರುವುದನ್ನು ಪ್ರಶ್ನಿಸಿ ನಿರ್ಮಾಪಕ ಬಸಂತ್‌ಕುಮಾರ್ ಪಾಟೀಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕೂಡಲೇ ಸರ್ಕಾರದಿಂದ ಆಡಳಿತ ವ್ಯವಸ್ಥಾಪಕರನ್ನು ನೇಮಿಸಿ ಚುನಾವಣೆ ನಡೆಸುವಂತೆ ದೂರುದಾರರು ಅರ್ಜಿಯಲ್ಲಿ ಕೋರಿದ್ದರು.

ಅರ್ಜಿಯನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿದ ನ್ಯಾಯಾಲಯ, ಕಾನೂನು ಅನುಸಾರ ನಿರ್ಮಾಪಕರ ಸಂಘಕ್ಕೆ ಚುನಾವಣೆ ನಡೆಸುವಂತೆ ಆದೇಶಿಸಿದೆ.

PREV
click me!

Recommended Stories

ಬೆಂಗಳೂರು ಶಾಕಿಂಗ್: ಕೇವಲ ₹200 ರೂಪಾಯಿ ಜಗಳಕ್ಕೆ ಆತ್ಮ*ಹತ್ಯೆ ಮಾಡಿಕೊಂಡ ಎರಡು ಮಕ್ಕಳ ತಾಯಿ!
ರೈತರಿಗೆ ಭೂಸ್ವಾಧೀನ ಪರಿಹಾರ ಕೊಡದ ಸರ್ಕಾರ; ಹಣಕ್ಕಾಗಿ ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡಿದ ಕೋರ್ಟ್!