ಸಚಿವ ಸ್ಥಾನ ಪಡೆದುಕೊಳ್ಳುವುದು ಕೊಡಗಿನ ಹಕ್ಕು: ಶಾಸಕ ಪೊನ್ನಣ್ಣ

By Girish GoudarFirst Published May 26, 2023, 12:00 AM IST
Highlights

ಕೊಡಗಿಗೆ ಸಚಿವ ಸ್ಥಾನ ನೀಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಪ್ರತ್ಯೇಕ ರಾಜ್ಯವಾಗಿದ್ದ ಕೊಡಗು ಜಿಲ್ಲೆ ರಾಜ್ಯದೊಂದಿಗೆ ವಿಲೀನವಾಯಿತು. ಅಂದಿನಿಂದ ಕೊಡಗು ಜಿಲ್ಲೆ ರಾಜ್ಯದ ಒಂದು ಭಾಗವಲ್ಲವೆ. ಹೀಗಿರುವಾಗ ರಾಜ್ಯ ಸರ್ಕಾರ ಕೊಡಗಿಗೆ ಒಂದು ಸಚಿವಸ್ಥಾನ ಕೊಡಲೇಬೇಕು ಎಂದು ಆಗ್ರಹಿಸಿದ  ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು 

ಕೊಡಗು(ಮೇ.26): ರಾಜ್ಯ ಸಚಿವ ಸಂಪುಟ ಭಾನುವಾರದ ಒಳಗೆ ಸಂಪೂರ್ಣ ವಿಸ್ತರಣೆ ಆಗಲಿದ್ದು, ಕೊಡಗಿಗೆ ಒಂದು ಸಚಿವಸ್ಥಾನ ಕೊಡಗಲೇ ಬೇಕು. ಸಚಿವಸ್ಥಾನ ಪಡೆದುಕೊಳ್ಳುವುದು ನಮ್ಮ ಹಕ್ಕು ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಆಗ್ರಹಿಸಿದ್ದಾರೆ.  ಕೊಡಗು ಪ್ರೆಸ್‌ ಕ್ಲಬ್‌ನಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಡಗಿಗೆ ಸಚಿವ ಸ್ಥಾನ ನೀಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಪ್ರತ್ಯೇಕ ರಾಜ್ಯವಾಗಿದ್ದ ಕೊಡಗು ಜಿಲ್ಲೆ ರಾಜ್ಯದೊಂದಿಗೆ ವಿಲೀನವಾಯಿತು. ಅಂದಿನಿಂದ ಕೊಡಗು ಜಿಲ್ಲೆ ರಾಜ್ಯದ ಒಂದು ಭಾಗವಲ್ಲವೆ. ಹೀಗಿರುವಾಗ ರಾಜ್ಯ ಸರ್ಕಾರ ಕೊಡಗಿಗೆ ಒಂದು ಸಚಿವಸ್ಥಾನ ಕೊಡಲೇಬೇಕು ಎಂದು ಆಗ್ರಹಿಸಿದ್ದಾರೆ. 

ಇಂದು ಜಿಲ್ಲೆ ಲೋಕಸಭಾ ಸ್ಥಾನವನ್ನು ಕಳೆದು ಕೊಂಡಿದೆ. ಮೂರು ಶಾಸಕ ಸ್ಥಾನ ಹೊಂದಿದ್ದ ಕೊಡಗು ಇಂದು ಕೇವಲ ಎರಡು ಶಾಸಕ ಸ್ಥಾನಕ್ಕೆ ಇಳಿದಿದೆ. ಜಿಲ್ಲೆಗೆ ಕೇವಲ ಎಂಎಲ್ಸಿ ಸ್ಥಾನಗಳನ್ನು ಕೊಟ್ಟು ಸುಮ್ಮನಿರಿಸಲಾಗುತ್ತಿದೆ. ಆ ಮೂಲಕ ಜಿಲ್ಲೆಗೆ ರಾಜಕೀಯ ಪ್ರಾತಿನಿಧ್ಯವೇ ಇಲ್ಲದಂತೆ ಆಗುತ್ತಿದೆ. ಸರ್ಕಾರ ರಚನೆ ಮಾಡಿರುವವರು ಕೊಡಗಿಗೆ ಸಚಿವಸ್ಥಾನ ಕೊಡಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದು ಕೊಡಗು ಜಿಲ್ಲೆಯ ಹಕ್ಕು. ಇದುವರೆಗೆ ಕೊಡಗಿಗೆ ಸಚಿವ ಸ್ಥಾನ ಕೊಡದೆ ಅನ್ಯಾಯವಾಗಿದೆ. ಕಾಂಗ್ರೆಸ್ ಸರ್ಕಾರ ಇರುವಾಗ ಇದೆಲ್ಲವನ್ನೂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿಕೆಶಿ, ಎಐಸಿಸಿ ಮುಖಂಡರು ಎಲ್ಲರೂ ಗಮನಿಸಿ ಕೊಡಗಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. 

ಬುಡಕಟ್ಟು ಜನರ ಕುಂಡೆ ಹಬ್ಬ: ಶುಶ್ರೂಷಕಿ ವೇಷ ಧರಿಸಿ ನರ್ತಿಸಿದ ಯುವಕರು

ಕೊಡಗು ಜಿಲ್ಲೆ  ಅಭಿವೃದ್ಧಿ ಆಗುತ್ತಿಲ್ಲ

ಜಿಲ್ಲೆಗೆ ಸಚಿವ ಸ್ಥಾನ ನೀಡದೆ ಕಡೆಗಣಿಸುತ್ತಿರುವುದರಿಂದ ಕೊಡಗು ಜಿಲ್ಲೆ  ಅಭಿವೃದ್ಧಿ ಆಗುತ್ತಿಲ್ಲ. ನಾವು ಕಿರಿಯರು ಎಂದು ಸಚಿವಸ್ಥಾನ ಕೊಡಲು ಸಾಧ್ಯವಿಲ್ಲ ಎನ್ನುವುದಾದರೆ ಕೊಡಗಿನಲ್ಲಿ ಯಾರು ಸೂಕ್ತರಿದ್ದಾರೆಯೋ ಅವರಿಗೆ ಸಚಿವಸ್ಥಾನ ನೀಡಲಿ. ಯಾರನ್ನು ಎಂಎಲ್ಸಿ ಮಾಡಬಹುದೋ ಅವರನ್ನು ಎಂಎಲ್ಸಿ ಮಾಡಿ ಸಚಿವಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. 

ಇನ್ನು ಚುನಾವಣೆ ಸಂದರ್ಭದ ಬೆಳವಣಿಗೆಗಳ ಕುರಿತು ಮಾತನಾಡಿದ ಎ.ಎಸ್. ಪೊನ್ನಣ್ಣ ಬಿಜೆಪಿಯವರು ಕಾಂಗ್ರೆಸ್ ಮುಕ್ತ ಆಗುತ್ತದೆ ಎಂದರೆ ಅದು ವಿರೋಧ ಪಕ್ಷವನ್ನೇ ಇಲ್ಲದಂತೆ ಮಾಡುವುದು ಎಂದರೆ ನಿರಂಕುಶತ್ವದ ಸಂಕೇತ. ಆದರೆ ಅದಕ್ಕೆ ಜನ ತಕ್ಕ ಉತ್ತರ ನೀಡಿದ್ದಾರೆ. ಚುನಾವಣೆಯಲ್ಲಿ ಅಭಿವೃದ್ಧಿ ವಿಷಯಗಳ ಆಧಾರದಲ್ಲಿ ನಾನು ಪ್ರಚಾರ ಮಾಡಿದೆ ಹೊರತ್ತು ವೈಯಕ್ತಿಕ ಟೀಕೆ ಮಾಡಲಿಲ್ಲ. ಶಾಸಕನಾಗಿ ನಾನು ಸರಿಯಾಗಿ ಜವಾಬ್ದಾರಿ ನಿಬಾಯಿಸದಿದ್ದರೆ ಅದನ್ನು ಪ್ರಶ್ನಿಸುವ ಕೆಲಸವನ್ನು ಬಿಜೆಪಿ, ಜೆಡಿಎಸ್ ಅಥವಾ ಇತರೆ ಪಕ್ಷ, ಸಂಘ ಸಂಸ್ಥೆಗಳು ಮಾಡಲಿ. ಅದು ಬಿಟ್ಟು ಎಲ್ಲಾ ವಿಷಯಗಳನ್ನು ರಾಜಕೀಯಗೊಳಿಸುವ ಕೆಲಸ ಮಾಡುವುದು ಬೇಡ. ಸಾರ್ವಜನಿಕ ಜೀವನದಲ್ಲಿ ಇರುವವರು ಕೆಳಮಟ್ಟದ ಭಾಷೆಯನ್ನು ಬಳಸದೆ ಗುಣಮಟ್ಟದ ರಾಜಕಾರಣ ಮಾಡಲಿ ಎಂದಿದ್ದಾರೆ. 

ಮೇ 19 ರಿಂದ ಸರ್ವರ್ ಬಂದ್, 10 ಕೆ. ಜಿ ಫ್ರೀ ಅಕ್ಕಿ ಕೊಡುವುದಕ್ಕೆ ಬಿತ್ತಾ ಕತ್ತರಿ?

ನಮ್ಮ ಸರ್ಕಾರ ಹೊಸ ಬಜೆಟ್ ನೀಡುತ್ತದೆ. ಆಗಲೂ ಕೊಡಗಿಗೆ ಒಳ್ಳೆಯ ಅನುದಾನ ಇಟ್ಟು ಕೊಡಗಿನ ಅಭಿವೃದ್ಧಿ ಆಗಬೇಕು. ಹಿಂದೆ ಸಿದ್ದರಾಮಯ್ಯನವರ ಸರ್ಕಾರ ಮತ್ತು ಸಮ್ಮಿಶ್ರ ಸರ್ಕಾರ ಇದ್ದಾಗ ಮಾತ್ರ ವಿಶೇಷ ಪ್ಯಾಕೇಜ್ ಗಳನ್ನು ಕೊಟ್ಟಿದ್ದು ಬಿಟ್ಟರೆ ಕಳೆದ ಐದು ವರ್ಷಗಳಲ್ಲಿ ಜಿಲ್ಲೆಗೆ ವಿಶೇಷ ಅನುದಾನಗಳನ್ನೇ ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಇನ್ನು ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಆರಂಭವಾದ ವಿವಿಧ ಕಾಮಗಾರಿಗಳ ಅನುದಾನ ಬಿಡುಗಡೆಗೆ ತಡೆಯೊಡ್ಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಪೊನ್ನಣ್ಣ ಅವರು, ಹಲವಾರು ದೂರುಗಳು ಬಂದಿದ್ದರಿಂದ ಈಗ ನಡೆಯುತ್ತಿದ್ದ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡದಂತೆ ತಡೆಹಿಡಿಯಲಾಗಿದೆ. ಜಿಲ್ಲೆಯಲ್ಲೂ ವಿವಿಧ ಕಾಮಗಾರಿಗಳು ಸ್ಥಗಿತವಾಗಿವೆ. ಹೀಗಾಗಿ ಸದ್ಯ ರಿವ್ಹೀವ್ಯೂ ಮೀಟಿಂಗ್ ಮಾಡಲು ಸಭೆ ಕರೆಯುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ. ಕಾಮಗಾರಿಗಳು ನಡೆಯುವುದು ತಡವಾದರೂ ಎಲ್ಲೂ ಭ್ರಷ್ಟಾಚಾರ ಆಗದಂತೆ ಗುಣಮಟ್ಟದ ಕಾಮಗಾರಿ ಆಗಬೇಕಾಗಿದೆ. ಭಷ್ಟ್ರಚಾರ ತಡೆಯುತ್ತೇನೆ ಎಂದು ಜನರಿಗೆ ಮಾತು ನೀಡಿದ್ದೇನೆ, ಹಾಗೆಯೇ ನಡೆದುಕೊಳ್ಳುತ್ತೇನೆ ಎಂದಿದ್ದಾರೆ.

click me!