ಬತ್ತಿದ ಅಂತರ್ಜಲ, ಮಳೆಯ ನಿರೀಕ್ಷೆಯಲ್ಲಿ ಬೀಜ ಬಿತ್ತಿ ದಿಕ್ಕು ತೋಚದಂತಾದ ಕೊಡಗಿನ ರೈತರು!

By Gowthami K  |  First Published Jun 16, 2023, 10:11 PM IST

ಮಳೆ ಇಲ್ಲದೆ ಒಣಗಿ ಹೋಗುತ್ತಿರುವ ಮೆಕ್ಕೆಜೋಳದ ಬೆಳೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಬಿತ್ತನೆ ಮಾಡಿ ನಷ್ಟದ ಭೀತಿಯಲ್ಲಿರುವ ಕೊಡಗಿನ ರೈತರು


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜೂ.16): ಮಲೆನಾಡು ಜಿಲ್ಲೆಯಾಗಿರುವ ಕೊಡಗು ಜಿಲ್ಲೆಗೂ ವರುಣನ ಅವಕೃಪೆ ಎದುರಾಗಿದೆ. ಪರಿಣಾಮವಾಗಿ ಮಳೆಯನ್ನು ನಂಬಿ ಬಿತ್ತನೆ ಮಾಡಿದ್ದ ರೈತರು ಇದೀಗ ಲಕ್ಷಾಂತರ ರೂಪಾಯಿಯನ್ನು ಭೂಮಿಗೆ ಹಾಕಿ ಕೈಯಲ್ಲಿದ್ದಿದ್ದನ್ನು ಕಳೆದುಕೊಳ್ಳುವಂತೆ ಆಗಿದೆ. ಅರೆಮಲೆನಾಡಿನಂತಿರುವ ಕುಶಾಲನಗರ ತಾಲ್ಲೂಕಿನಲ್ಲಿ ಮೇ ತಿಂಗಳಿನಲ್ಲಿ ಸುರಿದ ಮಳೆಯನ್ನು ನಂಬಿ ಸಾವಿರಾರು ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಚೆನ್ನಾಗಿಯೇ ಹುಟ್ಟಿದ ಬೆಳೆಗಳು ಕಳೆದ ಒಂದು ತಿಂಗಳಿನಿಂದ ಮಳೆಯಿಲ್ಲದೆ ಎಲ್ಲವೂ ಬಿಸಿಲ ಬೇಗೆಗೆ ಸುಟ್ಟು ಹೋಗುತ್ತಿವೆ.

Tap to resize

Latest Videos

undefined

ಎಕರೆಗೆ ಕನಿಷ್ಠ 20 ಸಾವಿರದಂತೆ ಖರ್ಚು ಮಾಡಿ ರೈತರು ಮೆಕ್ಕೆ ಜೋಳ ಬಿತ್ತನೆ ಮಾಡಿದ್ದರು. ಕೆಲವು ರೈತರು ಒಂಭತ್ತರಿಂದ 10 ಬ್ಯಾಗ್ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಚಿನ್ನಾಭರಣಗಳನ್ನು ಬ್ಯಾಂಕು, ಗಿರವಿ ಅಂಗಡಿಗಳಲ್ಲಿ ಅಡಮಾನವಿಟ್ಟು ಲಕ್ಷಾಂತರ ರೂಪಾಯಿ ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ. ಇನ್ನೂ ಕೆಲವು ರೈತರು ಬಡ್ಡಿ ಸಾಲ ಮಾಡಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಇನ್ನೊಂದು ವಾರ ಮಳೆ ಬಾರದಿದ್ದಲ್ಲಿ ಈಗ ಬತ್ತಿ ಹೋಗಿರುವ ಜೋಳದ ಬೆಳೆ ಸಂಪೂರ್ಣ ಒಳಗಿ ಹೋಗಲಿದೆ.

ಮತಾಂತರ ನಿಷೇಧ ಕಾಯ್ದೆ ರದ್ದು, ಸಿದ್ರಾಮುಲ್ಲಾ ಖಾನ್ ಎಂದು ಘೋಷಣೆ ಕೂಗಿ ಆಕ್ರೋಶ

ಬಿಸಿಲಿನ ಜಳಕ್ಕೆ ಬತ್ತಿಹೋಗುತ್ತಿರುವ ಜೋಳದ ಬೆಳೆಯ ಹೊಲಗಳಲ್ಲಿ ಕುಳಿತು ದುಃಖಪಡುತ್ತಿದ್ದಾರೆ. ರೈತರ ಮೇಲೆ ಏಕಿಷ್ಟು ಸಿಟ್ಟು ದಯತೋರೋ ದೇವರೆ ಎಂದು ಮುಗಿಲತ್ತ ಕೈಮುಗಿದು ಬೇಡುತ್ತಿದ್ದಾರೆ. ಈಗಾಗಲೇ ಬಹುತೇಕ ಒಣಗಿ ಹೋಗಿರುವುದರಿಂದ ಸಕಾಲಕ್ಕೆ ಮಳೆ ಬಂದರೂ ಕೂಡ ಉತ್ತಮ ಬೆಳೆ ಬರುವುದಿಲ್ಲ ಎನ್ನುವುದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಮಳೆಯನ್ನು ನಂಬಿ ಭೂಮಿ ತಾಯಿಗೆ ಬೀಜ ಹಾಕಿದೆವು. ಆದರೆ ಸಕಾಲಕ್ಕೆ ಮಳೆ ಬಾರದೆ ಎಲ್ಲವೂ ಸುಟ್ಟುಹೋಗುತ್ತಿದ್ದು ನಮಗೆ ದಿಕ್ಕು ತೋಚದಂತೆ ಆಗಿದೆ. ರಾತ್ರಿ ನಿದ್ರೆ ಬರುತ್ತಿಲ್ಲ, ಊಟ, ತಿಂಡಿ ದೇಹಕ್ಕೆ ಸೇರುತ್ತಿಲ್ಲ ಎಂದು ತೊರೆನೂರಿನ ರೈತ ರಾಜಪ್ಪ ಅಳಲು ತೋಡಿಕೊಂಡಿದ್ದಾರೆ. ಮೇ ತಿಂಗಳ ಆರಂಭದಲ್ಲಿ ಸುರಿದ ಕೃತಿಕೆ ಮಳೆಗೆ ಬಿತ್ತನೆ ಮಾಡಿದೆವು. ಜೋಳ ಹುಟ್ಟಿ ಬಂದವು. ಸಮಯಕ್ಕೆ ಸರಿಯಾಗಿ ಮಳೆ ಬಂದಿದ್ದರೆ, ಇಷ್ಟೊತ್ತಿಗಾಗಲೇ ಜೋಳದ ಬೆಳೆಗಳನ್ನು ಅರಗಿ, ಗೊಬ್ಬರ ಹಾಕಿ ಕೆಲಸ ಮುಗಿಸಬೇಕಾಗಿತ್ತು. ಆದರೆ ಮಳೆಯೇ ಇಲ್ಲದೆ ಗಿಡಗಳು ಇಷ್ಟೇ ಉದ್ದಕ್ಕೆ ಬೆಳೆದಿದ್ದವು. ಈಗ ಮಳೆ ಇಲ್ಲದೆ ಬಿಸಿಲಿನ ತಾಪ ಮತ್ತಷ್ಟು ಜೋರಾಗಿರುವುದರಿಂದ ಬೆಳೆ ಒಣಗಿ ಹೋಗುತ್ತಿವೆ.

MYSURU: ಕೃಷಿ ಕಾಯ್ದೆ ವಾಪಸ್‌ ಪಡೆಯಲು ಆಗ್ರಹಿಸಿ ರೈತರಿಂದ ಪ್ರತಿಭಟನೆ

ಬೀಜ ಬಿತ್ತನೆ ಸಂದರ್ಭ ಕೆಲಸ ಮಾಡಿದ ಜನರಿಗೆ ಕೂಲಿಯನ್ನು ಕೊಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇನ್ನೊಂದು ವಾರ ಮಳೆ ಬಾರದಿದ್ದರೆ, ಈಗ ಬೆಳೆಹಾಕಿರುವ ಹೊಲಗಳನ್ನು ಮತ್ತೆ ಉಳುಮೆ ಮಾಡಿ ಹೊಸದಾಗಿ ಬಿತ್ತನೆ ಮಾಡಬೇಕಾಗುತ್ತದೆ ಎನ್ನುತ್ತಿದ್ದಾರೆ. ನೀರು ಹಾಯಿಸೋಣ ಎಂದರೆ ಬೋರ್ಬೆಲ್ಗಳಲ್ಲೂ ನೀರಿಲ್ಲ. ಅರ್ಧಗಂಟೆ ಮೋಟರ್ ಓಡಿದರೆ ಅಲ್ಲಿಗೆ ಮುಗಿಯಿತು ಎನ್ನುವ ಸ್ಥಿತಿಗೆ ಬೋರ್ವೆಲ್ಗಳಲ್ಲಿ ಅಂತರ್ಜಲ ಕುಗ್ಗಿ ಹೋಗಿದೆ. ಏನು ಮಾಡಬೇಕು ಎನ್ನುವುದೇ ದಿಕ್ಕು ತೋಚದಂತೆ ಆಗಿದೆ. ಇನ್ನಿಲ್ಲದಂತೆ ಬಿಸಿಲು ಬೀಳುತ್ತಿದ್ದು, ಯಾವುದೇ ಕೆಲಸವನ್ನು ಮಾಡಲಾಗುತ್ತಿಲ್ಲ.  ಏನಾದರೂ ಕೆಲಸ ಮಾಡೋಣ ಎಂದು ಹೊಲ ಗದ್ದೆಗಳಿಗೆ ಇಳಿದರೆ ಕಾಲುಗಳು ಬೆಂದು ಹೋಗುವಷ್ಟು ಸುಡುತ್ತಿವೆ. ಅಷ್ಟು ಬಿಸಿಲು ಬೀಳುತ್ತಿದ್ದು, ಬೇಸಿಗೆ ಬಿಸಿಲಿಗಿಂತ ಎರಡು ಪಟ್ಟು ಹೆಚ್ಚಿನ ಪ್ರಮಾಣದ ಬಿಸಿಲು ಬೀಳುತ್ತಿದೆ. ಹೀಗಾದರೆ ಇನ್ನು ಬೆಳೆಗಳು ಉಳಿಯುತ್ತವೆಯೇ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

click me!