ಮಡಿಕೇರಿ (ಮೇ.23): ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಹಿನ್ನೆಲೆಯಲ್ಲಿ ನಗರದ ಭಾರತೀಯ ಜೀವ ವಿಮಾ ಕಚೇರಿ ಬಳಿ ‘ನಮ್ಮ ವಾರ್ಡ್ ಕೊರೋನಾ ಮುಕ್ತ ವಾರ್ಡ್’ ಮತ್ತು ‘ನಮ್ಮ ಗ್ರಾಮ ಕೊರೋನಾ ಮುಕ್ತ ಗ್ರಾಮ’ ಎಂಬ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಶನಿವಾರ ಚಾಲನೆ ನೀಡಿದರು.
ಜಿಲ್ಲಾಧಿಕಾರಿಗಳೊಂದಿಗೆ ಇತ್ತೀಚೆಗೆ ಪ್ರಧಾನಿ ಮೋದಿ ಸಂವಾದದ ವೇಳೆ ಕೊರೋನಾ ಮುಕ್ತ ಗ್ರಾಮ, ವಾರ್ಡ್ ಅಭಿಯಾನಕ್ಕೆ ಕರೆ ನೀಡಿದ್ದರು. ಅದರಂತೆ ಕೊಡಗು ಜಿಲ್ಲೆಯಲ್ಲಿ ಅಭಿಯಾನ ಶುರುವಾಗಿದೆ. ಜನತೆಯಲ್ಲಿ ಜಾಗೃತಿ ಮೂಡಿಸಿ ಸೋಂಕು ನಿಯಂತ್ರಣಕ್ಕೆ ಕ್ರಮ ವಹಿಸಲಾಗುತ್ತಿದೆ.
ಮೇ.22ರ ರಿಪೋರ್ಟ್: ರಾಜ್ಯದಲ್ಲಿ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ದುಪ್ಪಟ್ಟು ...
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಡಾ.ಆನಂದ, ಡಾ.ಮಹೇಶ್, ತಹಸೀಲ್ದಾರ್ ಮಹೇಶ್, ಪೌರಾಯುಕ್ತರಾದ ರಾಮದಾಸ, ಕಾರ್ಮಿಕ ಅಧಿಕಾರಿ ಅನೀಲ್ ಬಗಟಿ, ತಾಲೂಕು ವೈದ್ಯಾಧಿಕಾರಿ ಡಾ.ಮಂಜುನಾಥ, ನಗರಸಭೆ ಸದಸ್ಯರು ಇತರರು ಇದ್ದರು.