30 ವರ್ಷದ ಕಾಂಗ್ರೆಸ್‌ ಸಖ್ಯ ತೊರೆದು ಜೆಡಿಎಸ್‌ ಸೇರಿದ ಮುಖಂಡ

By Kannadaprabha News  |  First Published Apr 15, 2021, 4:15 PM IST

ಕಳೆದ  30 ವರ್ಷಗಳ ಕಾಂಗ್ರೆಸ್ ಸಖ್ಯ ತೊರೆದ ಮುಖಂಡರೋರ್ವರು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಹಲವು ವರ್ಷಗಳಿಂದ ಸಕ್ರೀಯರಾಗಿದ್ದ ಕಾಂಗ್ರೆಸ್ ನಂಟಿನಿಂದ ದೂರ ಸರಿದಿದ್ದಾರೆ. 


 ಮಡಿಕೇರಿ (ಏ.15):  ಮೂವತ್ತು ವರ್ಷಗಳಿಂದ ಕೊಡಗು ಜಿಲ್ಲಾ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದ ಅಲ್ಪಸಂಖ್ಯಾತರ ಘಟಕದ ಪ್ರಮುಖ ಕೆ.ಇ. ಮ್ಯಾಥ್ಯು ಅವರು ಬುಧವಾರ ಕಾಂಗ್ರೆಸ್‌ ತೊರೆದು ಜಾತ್ಯಾತೀತ ಜನತಾದಳಕ್ಕೆ ಸೇರ್ಪಡೆಗೊಂಡರು.

ನಗರದಲ್ಲಿರುವ ಜಿಲ್ಲಾ ಜೆಡಿಎಸ್‌ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್‌ ಅವರ ಸಮ್ಮುಖದಲ್ಲಿ ತಮ್ಮ ಬೆಂಬಲಿಗರೊಂದಿಗೆ ಮ್ಯಾಥ್ಯು ಜೆಡಿಎಸ್‌ ಗೆ ಸೇರಿದರು.

Tap to resize

Latest Videos

‘ಜೆಡಿಎಸ್‌ಗೆ ಮತ ಬಿಜೆಪಿಗೆ ಹಿತ’: ಕುಮಾರಸ್ವಾಮಿ ಪ್ರತಿಕ್ರಿಯೆ .

ಕಾಂಗ್ರೆಸ್‌ ಪಕ್ಷಕ್ಕಾಗಿ ಇಷ್ಟುವರ್ಷಗಳ ಕಾಲ ಪ್ರಾಮಾಣಿಕವಾಗಿ ದುಡಿದರೂ ಮಡಿಕೇರಿ ನಗರಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಮಗೆ ಅವಕಾಶ ನೀಡದೆ ಇರುವ ಪಕ್ಷದ ನಾಯಕರ ಕ್ರಮವನ್ನು ಖಂಡಿಸಿ ತಾವು ಪಕ್ಷ ತೊರೆಯುತ್ತಿರುವುದಾಗಿ ಅವರು ಹೇಳಿದರು.

ಮಾಜಿ ಸಚಿವ ಟಿ. ಜಾನ್‌ ಅವರ ಆಪ್ತರಾಗಿ ಕಳೆದ ಅನೇಕ ವರ್ಷಗಳಿಂದ ಕಾಂಗ್ರೆಸ್‌ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಯಾಗಿ ಮ್ಯಾಥ್ಯು ಕಾರ್ಯ ನಿರ್ವಹಿಸಿದ್ದಾರೆ.
 

click me!