Mandya: ಎತ್ತಿನಗಾಡಿ ಓಟದ ಸ್ಪರ್ಧೆ: ವೀಕ್ಷಕರ ಮೇಲೆ ಹರಿದ ಎತ್ತಿನಗಾಡಿ ರೈತ ಸಾವು

Published : Jan 08, 2023, 07:14 PM ISTUpdated : Jan 08, 2023, 07:21 PM IST
Mandya: ಎತ್ತಿನಗಾಡಿ ಓಟದ ಸ್ಪರ್ಧೆ: ವೀಕ್ಷಕರ ಮೇಲೆ ಹರಿದ ಎತ್ತಿನಗಾಡಿ ರೈತ ಸಾವು

ಸಾರಾಂಶ

ಮಂಡ್ಯ ಜಿಲ್ಲೆಯ ಚಿಕ್ಕಮಂಡ್ಯ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಅಂತರರಾಜ್ಯ ಮಟ್ಟದ ಎತ್ತಿನಗಾಡಿ ಓಟದ ಸ್ಪರ್ಧೆಯ ವೇಳೆ ವೀಕ್ಷಣೆಗೆ ಆಗಮಿಸಿದ್ದ ವ್ಯಕ್ತಿಯ ಮೇಲೆ ಎತ್ತಿನಗಾಡಿ ಹರಿದು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಮಂಡ್ಯ (ಜ.08):  ಮಂಡ್ಯ ಜಿಲ್ಲೆಯ ಚಿಕ್ಕಮಂಡ್ಯ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಅಂತರರಾಜ್ಯ ಮಟ್ಟದ ಎತ್ತಿನಗಾಡಿ ಓಟದ ಸ್ಪರ್ಧೆಯ ವೇಳೆ ವೀಕ್ಷಣೆಗೆ ಆಗಮಿಸಿದ್ದ ವ್ಯಕ್ತಿಯ ಮೇಲೆ ಎತ್ತಿನಗಾಡಿ ಹರಿದು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಕಳೆದ ಎರೆಉ ದಿನಗಳಿಂದ ಅಂತರರಾಜ್ಯ ಮಟ್ಟದ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ  ಎತ್ತಿನಗಾಡಿ ಸ್ಪರ್ಧೆ ವೀಕ್ಷಣೆಗೆ ಆಗಮಿಸಿದ್ದ ಮಂಡ್ಯ ತಾಲೂಕಿನ ಕೀಲಾರ ಗ್ರಾಮದ ವ್ಯಕ್ತಿಯ ಮೇಲೆ ವೇಗವಾಗಿ ಬಂದ ಎತ್ತಿನಗಾಡಿ ಹರಿದಿದೆ. ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಹಾಯಗೊಂಡ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ವ್ಯಕ್ತಿಯು ಎತ್ತುಗಳ ತುಳಿತಕ್ಕೆ ಒಳಗಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಅವಘಡದಲ್ಲಿ ಬಾಲಕನೊಬ್ಬನಿಗೂ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ. 

ಎತ್ತಿನಗಾಡಿ ಓಟದ ಸ್ಪರ್ಧೆಯ ವೀಕ್ಷಣೆಗೆಂದು ಸಾವನ್ನಪಿದ ವ್ಯಕ್ತಿಯನ್ನು ಕೀಲಾರ ಗ್ರಾಮದ ನಾಗರಾಜು(42) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿರುವ ಯುವಕನನ್ನು ಮಂಡ್ಯ ತಾಲೂಕಿನ ಹುಲಿವಾನ ಗ್ರಾಮದವನು ಎಂದು ಗುರುತಿಸಲಾಗಿದೆ. ಗಾಯಾಳುವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Mandya: ನಾಟಕ ಮಾಡುವ ವೇಳೆಯೆ ಹೃದಯಘಾತದಿಂದ ಕುಸಿದು ಬಿದ್ದು ಪ್ರಾಣಬಿಟ್ಟ ಕಲಾವಿದ!

ಘಟನೆ ನಡೆದಿದ್ದು ಹೇಗೆ? : ಮಂಡ್ಯ ನಗರದ ಬಳಿಯಿರುವ ಚಿಕ್ಕಮಂಡ್ಯ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಇಂದು ಮದ್ಯಾಹ್ನದ ನಂತರ ಎರಡನೇ ಸುತ್ತಿನ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಹಣಾಹಣಿ ಜೋರಾಗಿದ್ದ ಹಿನ್ನೆಲೆಯಲ್ಲಿ ವೀಕ್ಷಕರ ಸಂಖ್ಯೆಯೂ ಹೆಚ್ಚಾಗಿತ್ತು. ಈ ವೇಳೆ ಒಂದು ಎತ್ತಿನಗಾಡಿ ವೀಕ್ಷಕರು ನೋಡುತ್ತಿದ್ದ ಸ್ಥಳಕ್ಕೆ ನುಗ್ಗಿದೆ. ಗುಂಪು ಗುಂಪಾಗಿ ಜನರು ನೆರೆದಿದ್ದರಿಂದಾಗಿ ಎತ್ತಿನಗಾಡಿ ವೇಗವಾಗಿ ತಮ್ಮ ಕಡೆಗೆ ಬರುತ್ತಿದ್ದರೂ ಕೂಡಲೇ ಹಿಂದಕ್ಕೆ ಹೋಗಲು ಆಗದೇ ಸ್ಥಳದಲ್ಲಿ ಬಿದ್ದಿದ್ದಾರೆ. ಆಗ ಎತ್ತಿನಗಾಡಿಯ ಚಕ್ರಕ್ಕೆ ಸಿಲುಕಿದ ನಾಗರಾಜು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಯುವಕ ಎತ್ತಿನ ಕಾಲುಗಳಿಗೆ ಸಿಲುಕಿ ಗಾಯಗೊಂಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. 

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ