Kodagu: ಶ್ರೀನಗರದಲ್ಲಿ ಹಿಮಪಾತದಡಿ ಸಿಲುಕಿ ವಿರಾಜಪೇಟೆ ಯೋಧ ಸಾವು

By Kannadaprabha News  |  First Published Feb 24, 2022, 6:45 AM IST

*   ದೇಶ ಸೇವೆಗೆ ಗಡಿಕಾಯಲು ಹೋಗಿದ್ದ ವಿರಾಜಪೇಟೆಯ ಯೋಧ
*  ಎಓಸಿ ರೆಜಿಮೆಂಟ್‌ನಲ್ಲಿ ಕರ್ತವ್ಯದಲ್ಲಿದ್ದ ಅಲ್ತಾಫ್‌ 
*  ನಾಲ್ಕು ವರ್ಷಗಳ ಅವಧಿಗೆ ಸೇನೆಗೆ ಮರು ಸೇರ್ಪಡೆಗೊಂಡಿದ್ದ ಯೋಧ


ವಿರಾಜಪೇಟೆ(ಫೆ.24):  ಸೇನೆಯಿಂದ ನಿವೃತ್ತಿಯಾಗಿ, ಮರಳಿ ದೇಶ ಸೇವೆಗೆ ಗಡಿಕಾಯಲು ಹೋಗಿದ್ದ ವಿರಾಜಪೇಟೆಯ ಯೋಧರೊಬ್ಬರು(Soldier) ಶ್ರೀನಗರದಲ್ಲಿ ಕರ್ತವ್ಯನಿರತರಾಗಿದ್ದಾಗ ಹಿಮಪಾತದಲ್ಲಿ(Snowfall) ಸಿಲುಕಿ ಮೃತಪಟ್ಟಿದ್ದಾರೆ. 

ವಿರಾಜಪೇಟೆ(Virajpet) ಮೀನುಪೇಟೆಯ ಹುಲ್ಲು ವ್ಯಾಪಾರಿ ದಿವಂಗತ ಉಮ್ಮರ್‌ ಮತ್ತು ಆಶಿಯಾ ದಂಪತಿ ಪುತ್ರ ಹವಲ್ದಾರ್‌ ಯು.ಅಲ್ತಾಫ್‌ ಅಹಮ್ಮದ್‌ (37)(Altaf Ahmed) ಮೃತ ಯೋಧ. ವಿರಾಜಪೇಟೆಯ ಕಾಲೇಜಲ್ಲಿ ಪಿಯುಸಿ ಮುಗಿಸಿದ್ದ ಅಲ್ತಾಫ್‌ ನಂತರ ಸೇನೆ(Army) ಸೇರಿಕೊಂಡಿದ್ದರು. 

Tap to resize

Latest Videos

ನಿವೃತ್ತಿಯಾದ 2ನೇ ದಿನಕ್ಕೆ ಯೋಧ ಸಾವು : ಕುಟುಂಬಕ್ಕೆ ಬರಸಿಡಿಲು

ಎಓಸಿ ರೆಜಿಮೆಂಟ್‌ನಲ್ಲಿ(AOC Regiment) ಕರ್ತವ್ಯದಲ್ಲಿದ್ದ ಅಲ್ತಾಫ್‌ ಅವರು 16 ವರ್ಷ ಸೇವೆ ಸಲ್ಲಿಸಿ ನಂತರ ನಿವೃತ್ತರಾಗಿದ್ದರು. ಬಳಿಕ ವಿರಾಜಪೇಟೆ ಪೆರುಂಬಾಡಿಯಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಾಣಕ್ಕೂ ಮುಂದಾಗಿದ್ದರು. ಈ ಮಧ್ಯೆ ನಾಲ್ಕು ವರ್ಷಗಳ ಅವಧಿಗೆ ಸೇನೆಗೆ ಮರು ಸೇರ್ಪಡೆಗೊಂಡು ಶ್ರೀನಗರದಲ್ಲಿ(Srinagar) ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ತಾಫ್‌ ಅವರಿಗೆ ಇಬ್ಬರು ಪುಟ್ಟಮಕ್ಕಳಿದ್ದಾರೆ. ಅಲ್ತಾಫ್‌ ಅವರ ಅಂತಿಮ ವಿಧಿ-ವಿಧಾನಗಳು ವಿರಾಜಪೇಟೆಯ ಮಲಬಾರ್‌ ರಸ್ತೆಯಲ್ಲಿರುವ ಖಬರಿಸ್ತಾನದಲ್ಲಿ ಗುರುವಾರ ನೆರವೇರಲಿವೆ ಎಂದು ಹೇಳಲಾಗಿದೆ.

ಬಾಗಲಕೋಟೆ: ಜಮ್ಮು-ಕಾಶ್ಮೀರದಲ್ಲಿ ಹಾವು ಕಚ್ಚಿ ಬಾದಾಮಿ ಯೋಧ ಸಾವು

ಬಾಗಲಕೋಟೆ: ಜಮ್ಮು-ಕಾಶ್ಮೀರದಲ್ಲಿ(Jammu- Kashmir) ಹಾವು ಕಚ್ಚಿ ಬಾಗಲಕೋಟೆ(Bagalkot) ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಯೋಧನೊಬ್ಬ ಮೃತಪಟ್ಟ ಘಟನೆ ಸೆ.08 ರಂದು ನಡೆದಿತ್ತು. ಚಿದಾನಂದ್ ಹಲಕುರ್ಕಿ(25) ಎಂಬುವರೇ ಕಾವು ಕಡಿತದಿಂದ ಸಾವನ್ನಪ್ಪಿದ ಯೋಧ.  

ಮೃತಯೋಧ ಕಳೆದ 6 ವರ್ಷಗಳಿಂದ ಮರಾಠಾ ರೆಜಿಮೆಂಟ್ ಸೈನಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯದ ಮೇಲಿದ್ದಾಗ ಹಾವು ಕಚ್ಚಿದ ಪರಿಣಾಮ ಚಿದಾನಂದ್ ಸಾವನ್ನಪ್ಪಿದ್ದರು. 

ಬಾದಾಮಿ ಯೋಧ ಅಮೃತಸರದಲ್ಲಿ ಸಾವು

ಬಾದಾಮಿ(Badami): ಕಳೆದ ಒಂದು ವಾರದ ಹಿಂದೆ ಸ್ವಗ್ರಾಮಕ್ಕೆ ರಜೆಯ ಮೇಲೆ ಬಂದು ಕರ್ತವ್ಯಕ್ಕೆ ಮರಳಿದ್ದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರ ಗ್ರಾಮದ ಬಿಎಸ್‌ಎಫ್‌ ಯೋಧ ಅನಾರೋಗ್ಯದಿಂದ ಪಂಜಾಬ್‌ನ ಅಮೃತಸರದ ಬಿಎಸ್‌ಎಫ್‌ ಕ್ಯಾಂಪ್‌ನಲ್ಲಿ ಮೃತಪಟ್ಟ ಘಟನೆ ಕಳೆದ ವರ್ಷದ ಆ.03 ರಂದು ನಡೆದಿತ್ತು. 

ಬೇಲೂರ ಗ್ರಾಮದ ಚಂದ್ರಶೇಖರ ಶಂಕ್ರಪ್ಪ ಕಿನ್ನಾಳ (53) ಮೃತಪಟ್ಟಿರುವ ಯೋಧ. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗವಿದೆ. ಕಳೆದ ಒಂದು ವಾರದ ಹಿಂದೆ ಸ್ವಗ್ರಾಮಕ್ಕೆ ರಜೆಯ ಮೇಲೆ ಬಂದು ಜು.26 ರಂದು ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದರು. ಕರ್ತವ್ಯದ ವೇಳೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಬೇಲೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಂತ್ಯಕ್ರಿಯೆ ನಡೆದಿತ್ತು. 

ತೀವ್ರ ಅನಾರೋಗ್ಯದಿಂದ ಅರಕಲಗೂಡು ಮೂಲದ ಯೋಧ ಸಾವು

ಅರಕಲಗೂಡು: ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದ ಅರಕಲಗೂಡಿನ ಯೋಧ ರಾಕೇಶ್‌(23) ನಿಧನರಾಗಿದ್ದಾರೆ. ಅವರು ಹಿಮಾಚಲದಲ್ಲಿ ಕರ್ತವ್ಯದಲ್ಲಿದ್ದಾಗ ಆರೋಗ್ಯದ ಸಮಸ್ಯೆ ಉಲ್ಭಣಿಸಿತ್ತು. ಅಸ್ವಸ್ಥನಾಗಿದ್ದ ಯೋಧನನ್ನು ಛತ್ತಿಸ್‌ಗಡ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳಿದಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಹುಕ್ಕೇರಿ ಯೋಧ ಸಾವು

2018ರಲ್ಲಿ ಬೆಳಗಾವಿ ಸೈನಿಕ ಶಾಲೆಯಲ್ಲಿ ಮಿಲಿಟರಿ ಸೇನಾ ತರಬೇತಿ ಪಡೆದು ಹಿಮಾಚಲದಲ್ಲಿ ದೇಶಸೇವೆ ಸಲ್ಲಿಸುತ್ತಿದ್ದ ಯೋಧ ರಾಕೇಶ್‌ ಅವರು ಅರಕಲಗೂಡು ಪಟ್ಟಣ ಪಂಚಾಯಿತಿ ನೌಕರರಾಗಿ ಕೆಲಸ ಮಾಡುತ್ತಿರುವ ಶಿವಮ್ಮ ಮತ್ತು ಬಾಣದಹಳ್ಳಿ ರಾಜು ಅವರ ದ್ವಿತೀಯ ಪುತ್ರ. ಸಹೋದರ ರಕ್ಷಿತ್‌ ಇದ್ದಾರೆ.

ಹುತಾತ್ಮ ಯೋಧ ಅರಕಲಗೂಡು ಅತ್ನಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಅರಕಲಗೂಡಿನ ಕೋಟೆ ಸರ್ಕಾರಿ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣ ಪಡೆದು ಕಂಚಿರಾಯ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದರು. ಪದವಿ ಪೂರ್ವ ಶಿಕ್ಷಣವನ್ನು ಇದೇ ಅರಕಲಗೂಡು ಬಾಲಕರ ಸರ್ಕಾರಿ ಕಾಲೇಜಿನಲ್ಲಿ ಪಡೆದು ನಂತರ ಹಾಸನದ ಎನ್‌ಡಿಆರ್‌ಕೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗಲೇ ಭಾರತೀಯ ಸೇನೆ ಸೇರಿದ್ದರು.
 

click me!