ಕೊಡಗಿನಲ್ಲಿ ಆ.16ರ ತನಕ ಭಾರಿ ವಾಹನ ಸಂಚಾರ ನಿಷೇಧ

By Kannadaprabha NewsFirst Published Jul 9, 2021, 3:55 PM IST
Highlights
  • ಕೊಡಗು ಜಿಲ್ಲೆಯಲ್ಲಿ ಭಾರಿ ವಾಹನ ಸಂಚಾರದ ಸಂಬಂಧ ನಿರ್ಬಂಧಕಾಜ್ಞೆ
  • ಭಾರಿ ವಾಹನ ಸಂಚಾರಕ್ಕೆ ಜೂ. 23ರಿಂದ ಆ. 16ರವರೆಗೆ ನಿಷೇಧ
  • ಜಿಲ್ಲಾ ದಂಡಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷೆ ಚಾರುಲತಾ ಸೋಮಲ್‌ ಆದೇಶ

ಮಡಿಕೇರಿ (ಜು.09):  ಕೊಡಗು ಜಿಲ್ಲೆಯಲ್ಲಿ ಭಾರಿ ವಾಹನ ಸಂಚಾರದ ಸಂಬಂಧ ನಿರ್ಬಂಧಕಾಜ್ಞೆ ಹೊರಡಿಸಲಾಗಿದ್ದು, ಈ ಆದೇಶವು ಜೂ. 23ರಿಂದ ಆ. 16ರವರೆಗೆ ಜಾರಿಯಲ್ಲಿರಲಿದೆ.

ನಿರ್ಬಂಧಿತ ವಾಹನಗಳು: ಎಲ್ಲಾ ರೀತಿಯ ಮರದ ದಿಮ್ಮಿ ಮತ್ತು ಮರಳು ಸಾಗಾಣಿಕೆ ವಾಹನಗಳು, ವಾಹನದ ನೋಂದಣಿ ತೂಕ 16,200 ಕೆ.ಜಿ.ಗಿಂತ ಹೆಚ್ಚಿನ ಸರಕು ಸಾಗಾಣೆ ಮಾಡುವ ಸರಕು ಸಾಗಾಣಿಕೆ ವಾಹನಗಳು, ಭಾರಿ ವಾಹನಗಳಾದ ಬುಲೆಟ್‌ ಟ್ಯಾಂಕರ್‌, ಶಿಪ್‌ ಕಾರ್ಗೋ ಕಂಟೈನರ್ಸ್‌, ಲಾಂಗ್‌ ಚಾಸಿಸ್‌(ಮಲ್ಟಿಆಕ್ಸಿಲ್) ವಾಹನಗಳು.

ಮಳೆಗಾಲಕ್ಕೂ ಮುನ್ನವೇ ಕೊಡಗಲ್ಲಿ ಭೂ ಕುಸಿತ : ಕೊಚ್ಚಿ ಹೋದ ಹೆದ್ದಾರಿ

ನಿರ್ಬಂಧದಿಂದ ವಿನಾಯಿತಿ ಹೊಂದಿದ ವಾಹನಗಳು: ಅಡುಗೆ ಅನಿಲ ಮತ್ತು ಇಂಧನ ಪೂರೈಕೆ ವಾಹನಗಳು, ಹಾಲು ಪೂರೈಕೆ ವಾಹನಗಳು, ಸರ್ಕಾರಿ ಕೆಲಸದ ನಿಮಿತ್ತ ಉಪಯೋಗಿಸಲ್ಪಡುವ ವಾಹನಗಳು, ಶಾಲಾ ಕಾಲೇಜು ಮತ್ತು ಸಾರ್ವಜನಿಕ ಪ್ರಯಾಣಿಕರ ವಾಹನಗಳು(ಮಲ್ಟಿಆಕ್ಸಿಲ್‌ ಬಸ್‌ಗಳು ಸೇರಿದಂತೆ) ಪ್ರಸ್ತುತ ಸಾರ್ವಜನಿಕ ಹಿತಾಸಕ್ತಿಯಿಂದ ಈ ಆದೇಶವನ್ನು ಭಾಗಶಃ ಮಾರ್ಪಾಡು ಮಾಡಿ ಆದೇಶಿಸಿದೆ.

ಮಡಿಕೇರಿ: ಅಪಾಯದಲ್ಲಿರುವ 600ಕ್ಕೂ ಅಧಿಕ ಮನೆಗಳಿಗೆ ನೋಟಿಸ್‌

ನಿರ್ಬಂಧಿತ ವಾಹನಗಳು: ವಾಹನದ ನೋಂದಣಿ ತೂಕ 16,200 ಕೆ.ಜಿ.ಗಿಂತ ಹೆಚ್ಚಿನ ತೂಕದ ಸರಕು ಸಾಗಾಣಿಕೆಯ ವಾಹನಗಳು, ಭಾರೀ ವಾಹನಗಳಾದ ಬುಲೆಟ್‌ ಟ್ಯಾಂಕರ್ಸ್‌, ಶಿಪ್‌ ಕಾರ್ಗೋ ಕಂಟೈನರ್ಸ್‌, ಲಾಂಗ್‌ ಚಾಸಿಸ್‌  ವಾಹನಗಳು.

ನಿರ್ಬಂಧದಿಂದ ವಿನಾಯಿತಿ ನೀಡಿದ ವಾಹನಗಳು: ಅಡುಗೆ ಅನಿಲ ಮತ್ತು ಇಂಧನ ಪೂರೈಕೆ ವಾಹನಗಳು, ಹಾಲು ಪೂರೈಕೆ ವಾಹನಗಳು, ಸರ್ಕಾರಿ ಕೆಲಸದ ನಿಮಿತ್ತ ಉಪಯೋಗಿಸಲ್ಪಡುವ ವಾಹನಗಳು, ಶಾಲಾ ಕಾಲೇಜು ಮತ್ತು ಸಾರ್ವಜನಿಕ ಪ್ರಯಾಣಿಕರ ವಾಹನಗಳು (ಮಲ್ಟಿಆಕ್ಸಿಲ್‌ ಬಸ್‌ಗಳು ಸೇರಿದಂತೆ), ವಾಹನದ ನೋಂದಣಿ ತೂಕ 16,200 ಕೆ.ಜಿ.ಗಿಂತ ಕಡಿಮೆ ತೂಕದ ಸರಕು ಸಾಗಾಣಿಕೆಯ ವಾಹನಗಳು ಇದರೊಂದಿಗೆ ಸಂಬಂಧಪಟ್ಟಇಲಾಖೆಗಳು ಹೊರಡಿಸಿರುವ ಅಥವಾ ಇಲಾಖೆ ವತಿಯಿಂದ ಚಾಲ್ತಿಯಲ್ಲಿರುವ ಆದೇಶ, ನಿಯಮ, ನಿರ್ಬಂಧ, ಮಾರ್ಗಸೂಚಿಗಳು ಜಾರಿಯಲ್ಲಿದೆ. ಉಲ್ಲಂಘನೆಯು ಸಂಬಅಧಪಟ್ಟಕಾಯ್ದೆಗಳಡಿ ದಂಡನೀಯವಾಗಿದೆ. ಉಳಿದಂತೆ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಜಿಲ್ಲಾ ದಂಡಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷೆ ಚಾರುಲತಾ ಸೋಮಲ್‌ ತಿಳಿಸಿದ್ದಾರೆ.  

click me!