'ಕಷ್ಟವಿದ್ದಾಗ ಕೇಳಲು ಬರದೆ ಎಲ್ಲ ಮುಗಿದ ಮೇಲೆ ಸೀಲ್‌ಡೌನ್‌ ಬೋರ್ಡ್ ಹಾಕ್ತೀರಾ'

By Suvarna News  |  First Published May 3, 2021, 9:05 PM IST

ಕ್ವಾರಂಟೈನ್ ಅವಧಿ ಮುಗಿದ ಬಳಿಕ ಮನೆ ಸೀಲ್‌ಡೌನ್/ ಕೊಡಗು ಜಿಲ್ಲೆ ಕಂಬಿಬಾಣೆಯಲ್ಲಿ ಘಟನೆ/ ಏ.22ರಂದು ಪಾಸಿಟಿವ್ ಆಗಿದ್ದ ವ್ಯಕ್ತಿ/ ಹನ್ನೆರಡು ದಿನದ ಕ್ವಾರಂಟೈನ್ ಅವಧಿ ಮುಕ್ತಾಯ/ ಇಂದು ಮನೆಗೆ ಬಂದು ಬ್ಯಾನರ್ ಅಳವಡಿಸಿ ಸೀಲ್‌ಡೌನ್


ಕೊಡಗು(ಮೇ 03) ನಮ್ಮ ಆಡಳಿತ ಯಾವ ಹಂತಕ್ಕೆ ಇಳಿದಿದೆ ಎನ್ನುವುದಕ್ಕೆ ಈ ಘಟನೆಯೇ ಮತ್ತೊಂದು ಸಾಕ್ಷಿ.  ಕ್ವಾರಂಟೈನ್ ಅವಧಿ ಮುಗಿದ ಬಳಿಕ ಮನೆ ಸೀಲ್‌ಡೌನ್ ಮಾಡಲಾಗಿದೆ!

ಕೊಡಗು ಜಿಲ್ಲೆ ಕಂಬಿಬಾಣೆಯಲ್ಲಿ ಘಟನೆ ನಡೆದಿದೆ. ಏ.22ರಂದು ಪಾಸಿಟಿವ್ ಆಗಿದ್ದ ವ್ಯಕ್ತಿಯ  ಹನ್ನೆರಡು ದಿನದ ಕ್ವಾರಂಟೈನ್ ಅವಧಿ ಮುಕ್ತಾಯವಾಗಿದೆ. ಆದರೆ ಸೋಮವಾರ  ಮನೆಗೆ ಬಂದು ಬ್ಯಾನರ್ ಅಳವಡಿಸಿ ಸೀಲ್‌ಡೌನ್ ಮಾಡಲಾಗಿದೆ.

Tap to resize

Latest Videos

'ಸಿಡಿಗೆ ತಡೆಯಾಜ್ಞೆ ತರುವಾಗ ಇದ್ದ ತರಾತುರಿ ಆಕ್ಸಿಜನ್ ಗೆ ಯಾಕಿಲ್ಲ?'

ಗ್ರಾಮ ಪಂಚಾಯಿತಿ ಸಿಬ್ಬಂದಿ ಸೀಲ್ ಡೌನ್ ಮಾಡಿದ್ದಾರೆ. ಪಂಚಾಯಿತಿ ಕ್ರಮಕ್ಕೆ ಮನೆ ಮಾಲೀಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟು ದಿನ ಕಷ್ಟ ಕೇಳಲು ಯಾರೂ ಬರಲಿಲ್ಲ. ಈಗ ಸೀಲ್‌ಡೌನ್ ಮಾಡಿರೋದು ಎಷ್ಟು ಸರಿ ಎಂದು ಜಿಲ್ಲಾಡಳಿತಕ್ಕೆ ಕೋವಿಡ್‌ನಿಂದ ಗುಣಮುಖರಾದ ಸುರೇಶ್ ಪ್ರಶ್ನೆ ಮಾಡಿದ್ದಾರೆ.

"

click me!