ಸಾಹಿತಿ ಡಾ. ಸಿದ್ದಲಿಂಗಯ್ಯ ಅವರಿಗೂ ಬೆಡ್ ಸಿಗದ ಸ್ಥಿತಿ!

By Suvarna NewsFirst Published May 3, 2021, 6:08 PM IST
Highlights

ಸಾಹಿತಿ ಡಾ ಸಿದ್ದಲಿಂಗಯ್ಯ ರಿಗೂ ಸಿಗ್ಯಿಲ್ವಾಲ್ಲ ಐಸಿಯು ಬೆಡ್/  ಆಸ್ಪತ್ರೆಗಳ ಸುತ್ತಿದ್ದರೂ ಸಿಗ್ತಿಲ್ಲ ಐಸಿಯು ಬೆಡ್/ 67 ವರ್ಷ ವಯಸ್ಸಿನ ಡಾ. ಸಿದ್ದಲಿಂಗಯ್ಯ ನವರಿಗೆ ಉಸಿರಾಟದ ತೊಂದರೆ/ ಕೆಮ್ಮು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಸಾಹಿತಿ/ ಡಿಸಿಎಂ ಅಶ್ವಥ್ ನಾರಾಯಣ ಹಾಗೂ ಸಿಎಂ ಕಚೇರಿಯಿಂದ ಫೋನ್ ಕರೆ ನಂತರ ಸಿಕ್ತು ಬೆಡ್

ಬೆಂಗಳೂರು(ಮೇ 03) ಕೊರೋನಾ  ಎಲ್ಲರ ಬದುಕಿನ ಮೇಲೆ ಕರಿನೆರಳು ಬೀರುತ್ತಲೇ ಇದೆ.   ಹಿರಿಯ ಸಾಹಿತಿ ಡಾ. ಸಿದ್ದಲಿಂಗಯ್ಯ  ಸಹ ಬೆಡ್ ಗಾಗಿ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.  ದಲಿತ ಕವಿಗೂ ಕೊರೊನಾ ಪಾಸಿಟಿವ್ ದೃಢವಾಗಿತ್ತು  ಭಾನುವಾರದಿಂದ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರೂ ಐಸಿಯು ಬೆಡ್ ಸಿಗಲಿಲ್ಲ.

67 ವರ್ಷ ವಯಸ್ಸಿನ ಡಾ ಸಿದ್ದಲಿಂಗಯ್ಯ ನವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಕೆಮ್ಮು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಸಾಹಿತಿ. ನಿನ್ನಯಿಂದ ರಂಗದೊರೆ ಆಸ್ಪತ್ರೆ, ಅಪೋಲೋ ಆಸ್ಪತ್ರೆ ಅಲೆದಾಡಿದರೂ ಸಿಗದ ಬೆಡ್ ಸಿಕ್ಕಿಲ್ಲ. ಅಂತೂ ದಲಿತ ಕವಿಗೆ ಕೊನೆಗೂ ಬೆಡ್ ಸಿಕ್ಕಿದೆ.

ಆಕ್ಸಿಜನ್ ಸಿಗದೆ ಚಾಮರಾಜನಗರದಲ್ಲಿ ರೋಗಿಗಳ ಸಾವು..ಯಾರು ಹೊಣೆ?

ಡಿಸಿಎಂ ಅಶ್ವಥ್ ನಾರಾಯಣ ಹಾಗೂ ಸಿಎಂ ಕಚೇರಿಯಿಂದ ಫೋನ್ ಕರೆ ನಂತರ ಬೆಡ್ ಸಿಕ್ಕಿದೆ.  ಈ ವಿಚಾರ ಮಾಧ್ಯಮಗಳ ಗಮನಕ್ಕೆ ತಂದ ನಂತರ ಐಸಿಯು ಸಿಕ್ಕಿದೆ. ಇದೀಗ ರಂಗದೊರೈ ಆಸ್ಪತ್ರೆಯಲ್ಲಿ  ಕವಿ ಸಿದ್ದಲಿಂಗಯ್ಯ ದಾಖಲಾಗಿದ್ದಾರೆ. 

"

click me!