ಕೆಎಂಎಫ್ ಇದೀಗ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಕೆಎಂ ಎಫ್ ನೀಡಿದ ಆ ಸುದ್ದಿ ಏನು..?
ಬೆಂಗಳೂರು (ಜ.16): ಕರ್ನಾಟಕ ಹಾಲು ಮಹಾಮಂಡಳಿಯು (ಕೆಎಂಎಫ್) ನಂದಿನಿ ಬ್ರ್ಯಾಂಡ್‌ನಡಿ ‘ಗುಡ್ ಲೈಫ್ ಬ್ರೆಡ್’ ಹೆಸರಿನಲ್ಲಿ ವಿವಿಧ ಮಾದರಿಯ ಬ್ರೆಡ್‌ಗಳನ್ನು ಗ್ರಾಹಕರ ಕೈಗೆಟಕುವ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈಗಾಗಲೇ ನಂದಿನಿ ಬ್ರ್ಯಾಂಡ್ ಅಡಿ 170ಕ್ಕೂ ಹೆಚ್ಚು ಹಾಲು ಹಾಗೂ ಹಾಲಿನ ಉತ್ಪನ್ನಗಳು ಮಾರುಕಟೆಯಲ್ಲಿ ಲಭ್ಯವಿವೆ. ಪ್ರಸಕ್ತ ವರ್ಷದಲ್ಲೂ ಹಲವು ಹೊಸ ಉತ್ಪನ್ನಗಳನ್ನು ಕೆಎಂಎಫ್ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ಜ.15 ರಂದು ಶುಕ್ರವಾರ ಆರೋಗ್ಯಕರ ಮತ್ತು ಪೌಷ್ಟಿಕವಾದ 4 ಮಾದರಿಯ ನಂದಿನಿ ಗುಡ್‌ಲೈಫ್ ಬ್ರೆಡ್‌ಗಳನ್ನು ಮೊದಲ ಹಂತದಲ್ಲಿ ಬೆಂಗಳೂರು ಮಾರುಕಟ್ಟೆಪ್ರದೇಶದಲ್ಲಿ ಮಾತ್ರ ಲಭ್ಯವಾಗುವಂತೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಹಾಲು ರೈತಗೆ ಕೆಎಂಎಫ್ 530 ಕೋಟಿ ರೂ. ಪ್ರೋತ್ಸಾಹ ಧನ! ..
ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಅವರು ಶುಕ್ರವಾರ 200 ಗ್ರಾಂ ಹಾಗೂ 400 ಗ್ರಾಂ ಬ್ರೆಡ್ ಪ್ಯಾಕ್‌ಗಳನ್ನು ಸಾಂಕೇತಿಕವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಉತ್ಕೃಷ್ಟಗುಣಮಟ್ಟದ ಬ್ರೆಡ್ ಅನ್ನು ನೀಡುತ್ತಿದ್ದೇವೆ. ಪ್ರಸ್ತುತ ಈ ಬ್ರೆಡ್‌ಗಳು ಬೆಂಗಳೂರು ನಗರ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಾಗಲಿವೆ ಎಂದು ಮಾಹಿತಿ ನೀಡಿದರು.
ಮಾರಾಟ ಬೆಲೆ: ನಂದಿನಿ ಬ್ರೆಡ್ ಮಾದರಿ 200 ಗ್ರಾಂ. ಪ್ಯಾಕ್ ಎಂಆರ್‌ಪಿ ದರ 400 ಗ್ರಾಂ ಪ್ಯಾಕ್ ಎಂಆರ್‌ಪಿ ದರ
ಗುಡ್‌ಲೈಫ್ ಮಿಲ್ಕ್ ಬ್ರೆಡ್ 22 ರು. 40 ರು.
ಗುಡ್‌ಲೈಫ್ ಸ್ಯಾಂಡ್‌ವಿಚ್ ಬ್ರೆಡ್ 22ರು. 40 ರು.
ಗುಡ್‌ಲೈಫ್ ವೋಲ್ ವ್ಹೀಟ್ ಬ್ರೆಡ್ 25 ರು. 45 ರು.
ಗುಡ್‌ಲೈಫ್ ಮಲ್ಟಿಗ್ರೈನ್ ಬ್ರೆಡ್ 30 50 ರು.