ರಾಮ ಮಂದಿರ ಲೋಕಾರ್ಪಣೆ: ಇಂದು ಜಗತ್ತೇ ಭಾರತದತ್ತ ನೋಡುತ್ತಿದೆ, ಬಾಲಚಂದ್ರ ಜಾರಕಿಹೊಳಿ

By Kannadaprabha News  |  First Published Jan 23, 2024, 11:45 AM IST

ಭಾರತದ ಚರಿತ್ರೆಯಲ್ಲಿಯೇ ಈ ದಿನ ಸುವರ್ಣಾಕ್ಷರಗಳಿಂದ ಬರೆದಿಡುವ ಐತಿಹಾಸಿಕ ದಿನವಾಗಿದೆ. ಇದು ನಮ್ಮ ದೇಶದ ಇತಿಹಾಸದಲ್ಲಿ ಅತೀ ಮಹತ್ವದ ಭಕ್ತಿ ಭಾವದ ದಿವಸ. ಹೊಸ ಇತಿಹಾಸ ಸೃಷ್ಟಿಯಾಗಿರುವ ಐತಿಹಾಸಿಕ ಕ್ಷಣವಾಗಿದೆ ಎಂದ ಬಾಲಚಂದ್ರ ಜಾರಕಿಹೊಳಿ


ಮೂಡಲಗಿ(ಜ.23):  ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಯಾಗಿದ್ದು, ಸತತ 500 ವರ್ಷಗಳ ಹೋರಾಟದ ನಂತರ ಭವ್ಯ ರಾಮ ಮಂದಿರದಲ್ಲಿ ಶ್ರೀ ರಾಮನು ವಿರಾಜಮಾನನಾಗಿದ್ದಾನೆ ಎಂದು ಶಾಸಕ ಹಾಗೂ ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಸೋಮವಾರ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ರಾಮ ಮಂದಿರ ಮತ್ತು ಮಾರುತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಅವರು, ಭಾರತದ ಚರಿತ್ರೆಯಲ್ಲಿಯೇ ಈ ದಿನ ಸುವರ್ಣಾಕ್ಷರಗಳಿಂದ ಬರೆದಿಡುವ ಐತಿಹಾಸಿಕ ದಿನವಾಗಿದೆ. ಇದು ನಮ್ಮ ದೇಶದ ಇತಿಹಾಸದಲ್ಲಿ ಅತೀ ಮಹತ್ವದ ಭಕ್ತಿ ಭಾವದ ದಿವಸ. ಹೊಸ ಇತಿಹಾಸ ಸೃಷ್ಟಿಯಾಗಿರುವ ಐತಿಹಾಸಿಕ ಕ್ಷಣವಾಗಿದೆ ಎಂದರು.

Tap to resize

Latest Videos

ಸಾಕಾರವಾಯ್ತು ಮಂದಿರ್ ವಹೀ ಬನಾಯೇಂಗೇ ಉದ್ಘೋಷ : ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಡೆದಿದ್ದು ಹೀಗೆ

ಶ್ರದ್ಧಾ ಭಕ್ತಿಯಿಂದ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಶ್ರೀ ರಾಮನ ವಿಗ್ರಹ ಪ್ರಾಣ ಪ್ರತಿಷ್ಠಾನ ಆಗಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ಹಲವು ಮಹನೀಯರು ತ್ಯಾಗ, ಹೋರಾಟಗಳನ್ನು ಮಾಡಿದ್ದಾರೆ. ಕೋಟ್ಯಂತರ ರಾಮಭಕ್ತರ ಕನಸು ಇಂದು, ಅಯೋಧ್ಯೆಯಲ್ಲಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮೂಲಕ ಈಡೇರಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪ ಜಗತ್ತಿನಾದ್ಯಂತ ಜನರು ಕಣ್ತುಂಬಿ ಸಂಭ್ರಮಿಸುತ್ತಿದ್ದಾರೆ ಎಂದರು. ಇಡೀ ಜಗತ್ತೇ ನಮ್ಮ ಭಾರತದತ್ತ ಮುಖ ಮಾಡಿದೆ. ಇಡೀ ದೇಶವೇ ಹೆಮ್ಮೆಪಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ದೀಪಾವಳಿ ಹಬ್ಬದಂತೆ ದೇಶದ ಜನರು ಶ್ರೀರಾಮನ ಉತ್ಸವ ಅತೀ ವಿಜೃಂಭಣೆಯಿಂದ ಮಾಡುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಸೋಮವಾರ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆ, ಹಾಗೂ ಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಾಲೂಕಿನ ಸಂಗನಕೇರಿ ಪಟ್ಟಣದ ಬಲಭೀಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ರಾಮ ಭಕ್ತರಿಂದ ಜಯ ಶ್ರೀ ರಾಮ ಘೋಷಣೆಗಳು ಮೊಳಗಿದವು. ನಂತರ ಕಲ್ಲೋಳಿ ಪಟ್ಟಣದ ಮಾರುತಿ ದೇವಸ್ಥಾನಕ್ಕೆ ತೆರಳಿದ ಅವರು, ಬಸ್ ನಿಲ್ದಾಣದ ಹತ್ತಿರ ಅಯೋಧ್ಯೆ ಮಾದರಿಯಲ್ಲಿ ನಿರ್ಮಿಸಲಾಗಿರುವ ರಾಮನ ಮಂಟಪಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ರಾಮ ಮಂದಿರಕ್ಕೆ ತೆರಳಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಮಾಜ ಬಾಂಧವರಿಂದ ಸತ್ಕಾರ ಸ್ವೀಕರಿಸಿದರು.

ಈ ವೇಳೆ ಲೆಕ್ಕಪರಿಶೋಧಕ ಸೈದಪ್ಪ ಗದಾಡಿ, ಸುಭಾಸ ಕುರಬೇಟ, ಬಸವಂತ ದಾಸನವರ, ಮಲ್ಲಪ್ಪ ಹೆಬ್ಬಾಳ, ವಸಂತ ತಹಶೀಲ್ದಾರ, ಸದಾಶಿವ ಕಲಾಲ, ದತ್ತು ಕಲಾಲ, ಮನೋಹರ ಕಲಾಲ, ಮಹಾದೇವ ಮದಭಾವಿ, ರಾಮಣ್ಣ ಹಡಗಿನಾಳ, ಭೀಮಶಿ ಗೋರೋಶಿ, ರಮೇಶ ಕಲಾಲ, ಸಿದ್ದು ಉಳ್ಳಾಗಡ್ಡಿ, ಶ್ರೀಕಾಂತ ಸವಸುದ್ದಿ, ಆನಂದ ಕಲಾಲ, ಮೋಹನ ಗಾಡಿವಡ್ಡರ, ಅಶೋಕ ಮಕ್ಕಳಗೇರಿ, ಬಸವರಾಜ ಮಾಳೆದವರ, ಭೀಮಶಿ ಮಾಳೇದವರ, ರಮೇಶ ಸಂಪಗಾಂವಿ, ಹಣಮಂತ ಚಿಪ್ಪಲಕಟ್ಟಿ, ನಾರಾಯಣ ಉಪ್ಪಾರಟ್ಟಿ, ಲೋಹಿತ ಕಲಾಲ, ಸುರೇಶ ಕಬ್ಬೂರ, ಪಟ್ಟಣ ಪಂಚಾಯತಿ ಸದಸ್ಯರು, ಪ್ರಮುಖರು, ಸಂಘ ಪರಿವಾರದ ಸದಸ್ಯರು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಅನೇಕರು ಇದ್ದರು.

click me!