ತುಮಕೂರು; ರಾಷ್ಟ್ರೀಯ ಹೆದ್ದಾರಿ ಬಳಿ ಕಿಲೋಮೀಟರ್ ಉದ್ದಕ್ಕೆ ಕಾಂಡೋಮ್ ರಾಶಿ!

By Suvarna News  |  First Published Sep 8, 2021, 4:16 PM IST

* ತುಮಕೂರು ಹೆದ್ದಾರಿಯಲ್ಲಿ ಕಾಂಡೋಮ್ ರಾಶಿ ರಾಶಿ
* ಕಂಪನಿಗೆ ಶಿಫ್ಟ್ ಮಾಡುವ ವೇಳೆ ಬಿದ್ದವೋ?
* ಉದ್ದೇಶಪೂರ್ವಕವಾಗಿ ಯಾರಾದರೂ ಎಸೆದು ಹೋದರೋ!
* ದಾರಿಹೋಕರಿಗೆ ಮುಜುಗರ ತಂದ ಕಾಂಡೋಮ್ ರಾಶಿ ರಾಶಿ


ತುಮಕೂರು(ಸೆ. 08)   ತುಮಕೂರು ಹೊರವಲಯದ ಹೆದ್ದಾರಿಯಲ್ಲಿ ಕಿಲೋಮೀಟರ್ ಗಳಷ್ಟೂ ದೂರ ಕಾಂಡೋಮ್ ಸಿಕ್ಕಿದ್ದು ಏನು? ಏತ್ತ? ಹೇಗೆ? ಎನ್ನುವ ಪ್ರಶ್ನೆ ಮನೆಮಾಡಿದೆ.  ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಶಿರಾಶಿ ಕಾಂಡೋಮ್​​ಗಳನ್ನು ಎಸೆದು ಹೋಗಲಾಗಿದೆ.

"

Tap to resize

Latest Videos

undefined

ಕಾಂಡೋಮ್ 'ಅಲಂಕಾರ' ಕಂಡು ವಾಹನ ಸವಾರರು ದಂಗಾಗಿದ್ದಾರೆ.  ಕ್ಯಾತ್ಸಂದ್ರದಿಂದ ಬಟವಾಡಿ ಬಳಿಯ ಶ್ರೀರಾಜ್ ಚಿತ್ರಮಂದಿರದ ಎದುರು ಇರುವ ಫ್ಲೈಓವರ್ ಮೇಲೆ ಕಿಲೋಮೀಟರ್​​ಗಟ್ಟಲೆ ಕಾಂಡೋಮ್​​​​ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇವುಗಳನ್ನು ಇಲ್ಲಿ ಎಸೆದವರು ಯಾರು ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ.

ಸೆಕ್ಸ್ ಮಾಡುವ ವೇಳೆ ಕಾಂಡೋಮ್ ಸಿಕ್ಕಿಲ್ಲ ಎಂದು ಗಮ್ ಸವರಿಕೊಂಡ!

ಇದು ರಾಷ್ಟ್ರೀಯ ಹೆದ್ದಾರಿ ಆಗಿರುವ ಕಾರಣ ಸಹಜವಾಗಿ ವಾಹನಗಳು ಸಂಚರಿಸುವ ವೇಳೆ ಅಚಾನಕ್ಕಾಗಿ ಬಿದ್ದಿವೆಯೋ ಅಥವಾ ಉದ್ದೇಶಪೂರ್ವಕವಾಗಿ ಯಾರಾದರೂ ರಸ್ತೆ ಪಕ್ಕದಲ್ಲಿ ಹಾಕಿದ್ದಾರೋ ಎಂಬ ಸಂಶಯವೂ ಕಾಡುತ್ತಿದೆ. ಅರ್ಧದಷ್ಟು ಕಾಂಡೋಮ್ ಬಳಕೆ ಮಾಡಿದ್ದರೆ ಇನ್ನರ್ಧ ಪ್ಯಾಕೇಟ್ ನಲ್ಲೇ ಇವೆ. ಕಂಪನಿಗೆ ಸಾಗಾಟ ಮಾಡುವ ವೇಳೆ ಬಿದ್ದಿದೆಯೋ ಅಥವಾ ಯಾರಾದರೂ ಉದ್ದೇಶ ಪೂರ್ವಕವಾಗಿ ಮಾಡಿದ್ದಾರೋ ಗೊತ್ತಿಲ್ಲ. 

 

click me!