ಅತ್ತಿಬೆಲೆಯಲ್ಲಿ ಸಂಭವಿಸಿದ ಪಟಾಕಿ ದುರಂತ ಘಟನೆ ಹಿನ್ನಲೆಯಲ್ಲಿ ಎಚ್ಚೆತ್ತ ಕೆಜಿಎಫ್ ತಾಲೂಕು ಅಧಿಕಾರಿಗಳು ಕೆಜಿಎಫ್ ತಹಸೀಲ್ದಾರ್ ನಾಗವೇಣಿ ನೇತೃತ್ವದ ತಂಡ ನಗರದಲ್ಲಿ ಅನಧಿಕೃತ ಪಟಾಕಿ ಅಂಗಡಿ ಮಳಿಗೆಗಳ ಮೇಲೆ ದಾಳಿ ನಡೆಸಿ ೧೩ ಲಕ್ಷ ರೂ.ಗಳ ಪಟಾಕಿಗಳನ್ನು ಸ್ವೀಜ್ ಮಾಡಿದ್ದಾರೆ.
ಕೆಜಿಎಫ್ : ಅತ್ತಿಬೆಲೆಯಲ್ಲಿ ಸಂಭವಿಸಿದ ಪಟಾಕಿ ದುರಂತ ಘಟನೆ ಹಿನ್ನಲೆಯಲ್ಲಿ ಎಚ್ಚೆತ್ತ ಕೆಜಿಎಫ್ ತಾಲೂಕು ಅಧಿಕಾರಿಗಳು ಕೆಜಿಎಫ್ ತಹಸೀಲ್ದಾರ್ ನಾಗವೇಣಿ ನೇತೃತ್ವದ ತಂಡ ನಗರದಲ್ಲಿ ಅನಧಿಕೃತ ಪಟಾಕಿ ಅಂಗಡಿ ಮಳಿಗೆಗಳ ಮೇಲೆ ದಾಳಿ ನಡೆಸಿ 13 ಲಕ್ಷ ರೂ.ಗಳ ಪಟಾಕಿಗಳನ್ನು ಸ್ವೀಜ್ ಮಾಡಿದ್ದಾರೆ.
ಕ್ಯಾಸಂಬಳ್ಳಿ ಹೋಬಳಿಯ ಜೆ.ಕೆ.ಪುರಂನ ಗೋದಾಮಿನಲ್ಲಿ ಇಟ್ಟಿದ್ದ 5 ಲಕ್ಷ ರೂ.ಗಳ ಪಟಾಕಿ ಸ್ವೀಜ್ ಮಾಡಿ ಗೋದಾಮಿಗೆ ಬೀಗ ಜಡಿಯಲಾಗಿದೆ. ಕೋಟಿಲಿಂಗೇಶ್ವರದ ಐಶ್ವರ್ಯ ವಸತಿ ಗೃಹದ ಮೇಲೆ ದಾಳಿ ನಡೆಸಿ ೮ ಲಕ್ಷ ರು.ಗಳ ಮೌಲ್ಯದ ಪಟಾಕಿಯನ್ನು ವಶಪಡಿಸಿಕೊಂಡು ಕೋಟಿಲಿಂಗೇಶ್ವರದ ಪ್ರಶಾಂತ್ ಮತ್ತು ಜೆ.ಕೆ.ಪುರಂನ ಕೃಷ್ಣಯ್ಯಶೆಟ್ಟಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಅಪಾಯಕಾರಿ ಪಟಾಕಿಗಳ ವಿರುದ್ದ ಸಮರ ಸಾರಲು ಜಿಲ್ಲಾಧಿಕಾರಿ ಅಕ್ರಂಪಾಷ ತಹಸೀಲ್ದಾರ್ ನಾಗವೇಣಿ ನೇತೃತ್ವದ ತಂಡ ರಚಿಸಿದ್ದಾರೆ, ತಂಡವು ನಗರಸಭೆ ವ್ಯಾಪ್ತಿಯ ಎಂ.ಜಿ ಮಾರುಕಟ್ಟೆ ಹಲವು ಪಟಾಕಿ ರವಾನಗಿ ಪಡೆದಿದ್ದ ಅಂಗಡಿಗಳಲ್ಲಿ ದಾಸ್ತಾನು ತಪಾಸಣೆ ನಡೆಸಿದ ಅಧಿಕಾರಿಗಳು ನಗರದಲ್ಲಿ ಯಾವುದೇ ಅಕ್ರಮವಾಗಿ ಪಟಾಕಿ ಮಾರಾಟ ಕಂಡು ಬಂದಿಲ್ಲ, ದಾಳಿಯಲ್ಲಿ ಪೌರಾಯುಕ್ತ ಪವನ್‌ಕುಮಾರ್, ಕಂದಾಯ ಅಧಿಕಾರಿ ಮುನಿವೆಂಕಟಸ್ವಾಮಿ, ವೃತ್ತ ನೀರಿಕ್ಷಕ ಮಾರ್ಕಂಡಯ್ಯ ಇದ್ದರು.
ಇನ್ನು ಮುಂದೆ ರಾಜಕೀಯ ಸಮಾವೇಶ, ಮದುವೆ, ಹಬ್ಬ, ಶುಭ ಸಮಾರಂಭಗಳಲ್ಲೂ ಅಪಾಯಕಾರಿ ಪಟಾಕಿಗಳ ಬದಲು ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ, ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ, ಅಕ್ರಮವಾಗಿ ಪಟಾಕಿ ಮಾರಾಟ ಮಾಡಿದರೆ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಆಂಧ್ರ ಗಡಿಭಾಗದ ಜೆ.ಕೆ.ಪುರಂನಲ್ಲಿ ಅಕ್ರಮವಾಗಿ ೫ ಲಕ್ಷ ರೂ.ಗಳ ಪಟಾಕಿಯನ್ನು ಸೀಜ್ ಮಾಡಿದ ನಂತರ ಗಡಿಭಾಗವಾದ ವಿಕೋಟ, ರಾಜಪೇಟೆರಸ್ತೆ, ಕೆಂಪಾಪುರ ಗಡಿಭಾಗದ ಎಲ್ಲ ಪಟಾಕಿ ಮಳಿಗೆಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಇದರ ಸುರಕ್ಷತೆ ತಪಾಸಣೆ ಮಾಡಿದ ನಂತರ ಪರವಾನಗಿ ನೀಡಲು ಜಿಲ್ಲಾಧಿಕಾರಿ ಕ್ರಮಕ್ಕೆ ನೀಡಲಾಗುವುದು ಎಂದು ತಿಳಿಸಿದರು.
ಪಟಾಕಿ ಬ್ಯಾನ್
ಬೆಂಗಳೂರು (ಅ.10): ರಾಜ್ಯದಲ್ಲಿ ಇನ್ನುಮುಂದೆ ಮದುವೆ, ಗಣೇಶ ಉತ್ಸವ ಹಾಗೂ ರಾಜಕೀಯ ಸಂಬಂಧಿತ ಕಾರ್ಯಕ್ರಮಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅತ್ತಿಬೆಲೆ ಪಟಾಕಿ ಮಳಿಗೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಹಸಿರು ಪಟಾಕಿ ನಿಯಾಮವಳಿಗಳಿಗೆ ವಿರುದ್ಧವಾಗಿ ಅಂಗಡಿಗಳು ಇದ್ದರೆ ಕ್ರಮ ಕೈಗೊಳ್ಳಬೇಕು. ಇನ್ನುಮುಂದೆ ಅನಧಿಕೃತ ಮಳಿಗೆಗಳು ಕಂಡುಬಂದಲ್ಲಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇವೆ. ಇನ್ಮುಂದೆ ಪಟಾಕಿ ಅಂಗಡಿಗಳಿಗೆ ಲೆಸೆನ್ಸ್ ಗಳಿಗೆ ಸುಪ್ರೀಂಕೋರ್ಟ್ ಆದೇಶದ ಪ್ರಕಾರವೇ ಲೆಸೆನ್ಸ್ ಕಡ್ಡಾಯ ನೀಡುವಂತೆ ಸೂಚಿಸಲಾಗಿದೆ ಎಂದರು.
ಬೆಂಗಳೂರು ಹಿಂದೂಗಳಿಗೆ ಶಾಕಿಂಗ್ ನ್ಯೂಸ್: ಗಣೇಶ ಮೆರವಣಿಗೆ ನಿಷೇಧಿಸಿದ ಪೊಲೀಸ್ ಇಲಾಖೆ
ಇನ್ನುಮುಂದೆ ರಾಜಕೀಯ ಕಾರ್ಯಕ್ರಮ , ಮದುವೆ ಕಾರ್ಯಕ್ರಮ, ಗಣೇಶ ಉತ್ಸವ ಸೇರಿದಂತೆ ವಿವಿಧ ಸಂಭ್ರಮಾಚರಣೆಗಳ ವೇಳೆ ಪಟಾಕಿ ಸಿಡಿಸುವುದನ್ನು ಬ್ಯಾನ್ ಮಾಡಲಾಗುತ್ತಿದೆ. ದೀಪಾವಳಿ ವೇಳೆ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಲಾಗುವುದು. ಪಟಾಕಿ ಮಾರಾಟ ಹಾಗೂ ಸಂಗ್ರಹಣೆ ಪರವಾನಗಿ ಪರಿಷ್ಕರಿಣೆ ಮಾಡಲು ಸೂಚನೆ ನೀಡಲಾಗಿದೆ. ಪ್ರಸ್ತುತ 5 ವರ್ಷಗಳವರೆಗೆ ಇದ್ದ ಪರವಾನಗಿ ಅವಧಿಯನ್ನು1 ವರ್ಷಕ್ಕೆ ತಗ್ಗಿಸಿ ಪರಿಷ್ಕೃರಣೆ ಮಾಡಲು ತೀರ್ಮಾನಿಸಲಾಗಿದೆ. ಪ್ರತಿ ವರ್ಷವೂ ಪರಿಷ್ಕರಣೆ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಎಕ್ಸ್‌ಪ್ಲೋಸಿವ್ ಆಕ್ಟ್ ಲೈಸೆನ್ಸ್ ನೀಡುವ ಡಿಸಿ ಪರಿಶೀಲಿಸಬೇಕು: ಎಕ್ಸ್‌ಪ್ಲೋಸಿವ್ ಆಕ್ಟ್ ನಲ್ಲಿ ಲೈಸೆನ್ಸ್ ಕೊಡುವಾಗ ನೀವು ಎಚ್ಚರಿಕೆ ವಹಿಸಬೇಕು. 14 ಜನರ ಜೀವಕ್ಕೆ ಯಾರು ಹೊಣೆಗಾರರು. ಕಾಯ್ದೆ ಓದಿದ್ದೀರಾ? ಅವರು ಅದರಲ್ಲಿರುವ ಎಲ್ಲ ಮಾನದಂಡಗಳನ್ನು ಪೂರೈಸಿದ್ದಾರೆಯೇ ಎಂದು ನೋಡಬೇಕು. ತಳಹಂತದ ಅಧಿಕಾರಿಗಳು ಸಲ್ಲಿಸಿದ ವರದಿ ಸರಿಯಿದೆಯೇ ಎಂದು ಜಿಲ್ಲಾಧಿಕಾರಿ ಪರಿಶೀಲಿಸುವಂತೆ ಸೂಚಿಸಲಾಗಿದೆ. ಅಲ್ಲಿರುವ ಎಲ್ಲ ಮಳಿಗೆಗಳ ಸುರಕ್ಷತೆಯನ್ನೂ ತಪಾಸಣೆ ಮಾಡಬೇಕು. ಇನ್ನು ಮುಂದೆ ಲೈಸನ್ಸ್ ನೀಡುವಾಗ ಜಿಲ್ಲಾಧಿಕಾರಿಗಳು, ಪೊಲೀಸ್ ಅಧೀಕ್ಷಕರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.