Chikkaballapura; ಗುಡಿಬಂಡೆ ಜನತೆಗೆ ಮತ್ತೆ ಜಲದಿಗ್ಬಂಧನದ ಭೀತಿ

By Kannadaprabha News  |  First Published Oct 15, 2022, 4:00 PM IST

ಗುಡಿಬಂಡೆ ಜನತೆಗೆ ಮತ್ತೆ ಜಲದಿಗ್ಬಂಧನದ ಭೀತಿ. ಮಳೆಯಿಂದಾಗಿ ಅಮಾನಿ ಬೈರಸಾಗರ ಕೋಡಿ ಹರಿದ ಪರಿಣಾಮ. ಜನ ಸಂಚಾರಕ್ಕೆ ನಿಷೇಧ.


ಗುಡಿಬಂಡೆ (ಅ.15): ಪಟ್ಟಣದ ಹೊರವಲಯದ ಅಮಾನಿ ಬೈರಸಾಗರ ಕೆರೆ ಸುಮಾರು ಎರಡು ತಿಂಗಳಿನಿಂದ ತುಂಬಿ ಹರಿಯುತ್ತಲೇ ಇದೆ. ಮಳೆ ಕಡಿಮೆಯಾದಾಗ ಹರಿವು ನಿಲ್ಲುತ್ತದೆ. ಗುರುವಾರ ರಾತ್ರಿ ಬಿದ್ದ ಭಾರಿ ಮಳೆಗೆ ಕೆರೆಯ ಕೋಡಿ ಬೋರ್ಗರೆದು ಹರಿಯುತ್ತಿದ್ದು, ಜಲದಿಗ್ಬಂಧನದ ಭೀತಿಯನ್ನು ಸಾರ್ವಜನಿಕರು ಎದುರಿಸುವಂತಾಗಿದೆ. ಜೊತೆಗೆ ದಿನನಿತ್ಯ ಕೆಲಸ ಕಾರ್ಯಗಳಿಗೆ ತೆರಳುವವರು ಪರದಾಡುವಂತಾಗಿತ್ತು. ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಗುಡಿಬಂಡೆಯ ಕೆರೆ ಕಾಲುವೆಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಬೀಚಗಾನಹಳ್ಳಿ, ವರ್ಲಕೊಂಡ, ದಪ್ಪರ್ತಿ ಗ್ರಾಮಗಳಿಂದ ಗುಡಿಬಂಡೆಗೆ ಪಟ್ಟಣಕ್ಕೆ ಆಸ್ಪತ್ರೆ, ಸರ್ಕಾರಿ ಕೆಲಸಗಳ ನಿಮಿತ್ತ ಬರುವಂತಹ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಗುಡಿಬಂಡೆ-ಹಂಪಸಂದ್ರ-ಬಾಗೇಪಲ್ಲಿ ಮಾರ್ಗ ಸಹ ಇದೆ ರೀತಿಯ ತೊಂದರೆಯಾಗಿದ್ದು, ಈ ಮಾರ್ಗದಲ್ಲಿ ಸಂಚಾರ ದುಸ್ತರವಾಗಿದೆ. ಈ ಕುರಿತು ತಹಸೀಲ್ದಾರ್‌ ಸಿಗ್ಬತ್ತುಲ್ಲಾ ಮಾತನಾಡಿ, ಅ.13ರಂದು ಗುಡಿಬಂಡೆಯಲ್ಲಿ ಸುಮಾರು 150 ಮಿ.ಮೀ ಮಳೆಯಾಗಿದೆ. ಇದರಿಂದಾಗಿ ಬಹುತೇಕ ಎಲ್ಲಾ ಕಾಲುವೆ ಕುಂಟೆಗಳು ತುಂಬಿ ಹರಿಯುತ್ತಿವೆ. ಕೆರೆ ಕೋಡಿಗಳು ತುಂಬಿ ಹರಿಯುತ್ತಿವೆ. ಕೋಡಿ ಹರಿಯುವಂತಹ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಹಾಗೂ ಕೆಲ ವಾಹನಗಳಿಗೆ ನಿಷೇಧ ಹೇರಲಾಗಿದೆ. ಸಾರ್ವಜನಿಕರು ಸಹ ಅಧಿಕಾರಿಗಳೊಂದಿಗೆ ಸಹಕರಿಸಬೇಕು. ಯಾರೂ ಸಹ ನೀರಿನಲ್ಲಿ ಇಳಿಯುವಂತಹ ಸಾಹಸ ಮಾಡಬಾರದೆಂದು ಮನವಿ ಮಾಡಿದರು.

ಭಾರಿ ಮಳೆಯಿಂದಾಗಿ ಮತ್ತೊಮ್ಮೆ ಜಲದಿಗ್ಬಂಧನದ ಭೀತಿ ಎದುರಾಗಿದೆ. ಗುಡಿಬಂಡೆಯ ಕೆರೆ ಕೋಡಿಯ ಮೇಲೆ ಮೇಲ್ಸುತೇವೆ ನಿರ್ಮಾಣ ಆಗದ ಹೊರತು ಸಮಸ್ಯೆ ಮಾತ್ರ ಬಗೆಹರಿಯುವುದಿಲ್ಲ. ಜೊತೆಗೆ ಕೋಡಿ ಮೇಲಿನ ರಸ್ತೆ ಸಹ ತುಂಬಾ ಗುಂಡಿಗಳಿಂದ ಕೂಡಿದ್ದು, ನೀರು ಕಡಿಮೆ ಪ್ರಮಾಣದಲ್ಲಿ ಹರಿದರೂ ಸಹ ಅಪಘಾತಗಳಾಗುವ ಸಂಭವ ಹೆಚ್ಚಾಗಿದೆ.

Tap to resize

Latest Videos

Heavy rains Hubballi: ಮಳೆ ಬಂದರೆ ಹೊಳೆಯಾಗುವ ಹು-ಧಾ ರಸ್ತೆ

ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ: ಇನ್ನೂ ಸ್ಥಳಕ್ಕೆ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಾದ್ಯಂತ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಾರ್ವಜನಿಕರು ಪರದಾಡುಂತಾಗಿದೆ. ಅನೇಕ ಗ್ರಾಮಗಳಿಗೆ ಹೋಗುವ ರಸ್ತೆ ಬಂದ್‌ ಆಗಿದೆ.

ಮಳೆಹಾನಿ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ ನೀಡಿ; ಶಾಸಕ ಅಮೃತ ದೇಸಾಯಿ ಸೂಚನೆ

ಜನರಿಗೆ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸ್ಥಳೀಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಈಗಾಗಲೇ ಗುಡಿಬಂಡೆ ಕೆರೆಯ ಕೋಡಿಯ ಬಳಿ ಮೇಲ್ಸುತೆವೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಹ ಸಲ್ಲಿಸಿದ್ದೇನೆ. ಶೀಘ್ರದಲ್ಲೇ ಈ ಮೇಲ್ಸುತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.

click me!