ಬಿಲ್ ಕೇಳಿದರೆ ಆಸ್ಪತ್ರೆಯನ್ನೇ ಉಡಾಯಿಸುವುದಾಗಿ ಬೆದರಿಕೆ ಹಾಕಿದ್ದ ಕಿಗೇಡಿಗಳನ್ನು ಬಂಧಿಸಲಾಗಿದೆ.
ವರದಿ : ಚೇತನ್ ಮಹಾದೇವ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಜೂ.3): ಬಿಲ್ ಕೇಳಿದರೆ ಆಸ್ಪತ್ರೆಯನ್ನೇ (Hospital) ಉಡಾಯಿಸುವುದಾಗಿ ಬೆದರಿಸಿ ವೈದ್ಯಕೀಯ ಸಿಬ್ಬಂದಿಯನ್ನು (Medical staff) ಹೆದರಿಸಿ ವೈದ್ಯರ ಅನುಮತಿವಿಲ್ಲದೆ ಗುಣಮುಖರಾಗಿದ್ದ ರೋಗಿಯನ್ನು ಕರೆದುಕೊಂಡು ಹೋಗಿದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕಾಡುಗೊಂಡನಹಳ್ಳಿ ಪೊಲೀಸರು ನಾಲ್ವರನ್ನು ಹೆಡೆಮುರಿಕಟ್ಟಿದ್ದಾರೆ.
ಖಾಸಗಿ ಆಸ್ಪತ್ರೆ ಮಾಲೀಕರು ದೂರು ನೀಡಿದ ಮೇರೆಗೆ ವೆಂಕಟೇಶ್ ಪುರ ನಿವಾಸಿಯಾದ ನವಾಜ್, ಹುಸೇನ್, ಸೈಯ್ಯದ್ ಅಬ್ಬಾಸ್ ಹಾಗೂ ಸಗೀರ್ ಪಾಷ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಆಸ್ಗರ್ ಅವರನ್ನು ಮಗ ಸಯ್ಯದ್ ಶರೀಫ್ ಕಳೆದ ತಿಂಗಳು ಮೇ 18ರಂದು ಕೆ.ಜಿ.ಹಳ್ಳಿ (KG Halli) ಠಾಣೆ ಮುಂಭಾಗ ರಫೀ ಆಸ್ಪತ್ರೆಗೆ ದಾಖಲಿಸಿದ್ದ. ತಪಾಸಣೆ ನಡೆಸಿದ ವೈದ್ಯರು ಶ್ವಾಸಕೋಶದಲ್ಲಿ ನೀರಿನಾಂಶವಿದ್ದು ಹೊರ ತೆಗೆಯಬೇಕಾಗಿದೆ. ಇದಕ್ಕೆ ಚಿಕಿತ್ಸಾ ವೆಚ್ಚ ಹೆಚ್ಚಾಗಲಿದೆ ಎಂದು ಹೇಳಿದ್ದರು.
ರಾಜಕೀಯ ವಿದ್ಯಮಾನಗಳ ಬಗ್ಗೆ ಟ್ವೀಟ್, KSRDPRU GUEST FACULTY ಅಮಾನತಿಗೆ ಆಗ್ರಹ
ಸಯ್ಯದ್ ಸಮ್ಮತಿ ಮೇರೆಗೆ ಕಳೆದ 15 ದಿನಗಳ ಕಾಲ ಆಸ್ಗರ್ ಅವರಿಗೆ ವೈದ್ಯರು (Doctor) ಚಿಕಿತ್ಸೆ ನೀಡಿದ ಪರಿಣಾಮ ಗುಣಮುಖರಾಗಿದ್ದರು. ಚಿಕಿತ್ಸಾ ವೆಚ್ಚ 2.09 ಲಕ್ಷ ರೂಪಾಯಿವಾಗಿತ್ತು. ಸಯ್ಯದ್ ಮುಂಗಡವಾಗಿ 41 ಸಾವಿರ ರೂಪಾಯಿ ಪಾವತಿಸಿ ಉಳಿದ 1.78 ಲಕ್ಷ ರೂಪಾಯಿ ಭರಿಸಲು ನಿರಾಕರಿಸಿದ್ದ.
ಅನಗತ್ಯವಾಗಿ ಬಿಲ್ ಏರಿಸಿದ ಆರೋಪ: ಚಿಕಿತ್ಸೆ ನೀಡುವ ನೆಪದಲ್ಲಿ ಅನಗತ್ಯವಾಗಿ 2 ಲಕ್ಷ ರೂಪಾಯಿಗೆ ಆಸ್ಪತ್ರೆಯವರು ಏರಿಸಿದ್ದಾರೆ. ಸಣ್ಣ-ಪುಟ್ಟ ಚಿಕಿತ್ಸೆ ನೀಡಿ ಲಕ್ಷಾಂತರ ರೂಪಾಯಿ ಬಿಲ್ ಮಾಡಿದ್ದಾರೆ ಎಂದು ಆಸ್ಪತ್ರೆಯಲ್ಲಿ ಸಯ್ಯದ್ ಕಿಡಿಕಾರಿದ್ದ. ಆಸ್ಪತ್ರೆಯ ಹೊರಬಂದು ಕೂಗಾಡಿದ್ದ. ಈ ವೇಳೆ ರೋಗಿ ಅಳಿಯ ನವಾಜ್, ಸಂಬಂಧಿಕ ಸಗೀರ್ ಪಾಷಾ ಕೈ ಜೋಡಿಸಿದ್ದರು.
Hijab Row; ಎರಡು ದಿನ ಗಡುವು, ಸಮನ್ವಯ ಸಮಿತಿ ಹೆಸರಲ್ಲಿ ಫೀಲ್ಡಿಗಿಳಿತಾ ಸಿಎಫ್ ಐ?
ಅದೇ ದಿನ ರಾತ್ರಿ ಬಂಧಿತರು ಸೇರಿ ಸುಮಾರು 8 ಜನರು ಅತಿಕ್ರಮವಾಗಿ ಆಸ್ಪತ್ರೆಗೆ ನುಗ್ಗಿದ್ದಾರೆ. ಅಲ್ಲೇ ಇದ್ದ ಅರೆ ವೈದ್ಯಕೀಯ ಸಿಬ್ಬಂದಿಯನ್ನು ಬೆದರಿಸಿದ್ದಾರೆ. ವೈದ್ಯರ ಅನುಮತಿವಿಲ್ಲದೆ ಸ್ವಯಂಪ್ರೇರಿತವಾಗಿ ಡಿಸ್ ಚಾರ್ಜ್ ಮಾಡಿಕೊಂಡಿದ್ದಾರೆ. ಸಿಬ್ಬಂದಿ ಪ್ರಶ್ನಿಸಿದಕ್ಕೆ ಬಿಲ್ ಕೇಳಿದರೆ ಆಸ್ಪತ್ರೆಯನ್ನು ಉಡಾಯಿಸುತ್ತೇವೆ ಎಂದು ಹೆದರಿಸಿದ್ದಾರೆ. ತಡೆಯಲು ಬಂದ ಸೆಕ್ಯೂರಿಟಿ ಗಾರ್ಡ್ ಮೇಲೆ ಕೈ ಮಾಡಿ ರೋಗಿಯನ್ನು ಕರೆದುಕೊಂಡು ಎಸ್ಕೇಪ್ ಆಗಿದ್ದಾರೆ.
Chikkamagaluru; ಸೋರುತ್ತಿರುವ ಶಾಲೆ, ಒದ್ದೆ ಪುಸ್ತಕವನ್ನು ಬಿಸಿಲಲ್ಲಿ ಒಣಗಿಸುವ ಮಕ್ಕಳು!
ಈ ಸಂಬಂಧ ಆಸ್ಪತ್ರೆ ಮಾಲೀಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಇನ್ ಸ್ಪೆಕ್ಟರ್ ರೋಹಿತ್ ನೇತೃತ್ವದ ತಂಡ ಸೆರೆಯಾಗಿದ್ದ ಆಸ್ಪತ್ರೆಯ ಸಿಸಿಟಿವಿ ಆಧರಿಸಿ ನಾಲ್ವರನ್ನು ಬಂಧಿಸಿದ್ದಾರೆ. ಕೃತ್ಯದಲ್ಲಿ ಇನ್ನೂ ನಾಲ್ಕು ಮಂದಿ ಭಾಗಿಯಾಗಿದ್ದು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.