ಮಡಿಕೇರಿ (ಜೂ.13): ಶಾಸಕರು ಮನವೊಲಿಕೆ ಬಳಿಕ ಆದಿವಾಸಿಗಳು ಕೋವಿಡ್ ಲಸಿಕೆ ಪಡೆದಿರುವ ಘಟನೆ ಜಿಲ್ಲೆಯಲ್ಲಿ ಎರಡನೇ ಬಾರಿ ನಡೆದಿದೆ.
ಕೆಲ ದಿನಗಳ ಹಿಂದಷ್ಟೇ ವಿರಾಜಪೇಟೆ ಬಳಿಕ ಚಂದನಕೆರೆಯಲ್ಲಿ ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿದ್ದ ಆದಿವಾಸಿಗಳನ್ನು ಶಾಸಕ ಅಪ್ಪಚ್ಚು ರಂಜನ್ ಮನವೊಲಿಸಿದ್ದರು.
ಬಳ್ಳಾರಿ: ಮಂಗಳಮುಖಿಯರಿಗೆ ಕೋವಿಡ್ ಲಸಿಕೆ
ಶನಿವಾರದಂದು ಕೆ .ಜಿ. ಬೋಪಯ್ಯ, ಪಶ್ಚಿಮಘಟ್ಟಕಾರ್ಯಪಡೆಯ ಅಧ್ಯಕ್ಷರಾದ ಶಾಂತೆಯಂಡ ರವಿ ಕುಶಾಲಪ್ಪ, ರಮೇಶ್ ಹೊಳ್ಳ, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಜಿಲ್ಲೆಯ ಮಾಲ್ದಾರೆ ಮತ್ತು ಚೆನ್ನಯ್ಯನಕೋಟೆ ಗ್ರಾ. ಪಂ. ವ್ಯಾಪ್ತಿಯ ಆದಿವಾಸಿ ಹಾಡಿಗಳಿಗೆ ಶನಿವಾರ ಭೇಟಿ ನೀಡಿ ಕೋವಿಡ್ ನಿರೋಧಕ ಲಸಿಕೆ ಪಡೆಯುವಂತೆ ಮನವೊಲಿಸಿದರು.
ಆ ಬಳಿಕ ಹಾಡಿಯ ಜನರು ಉತ್ಸಾಹದಿಂದ ಲಸಿಕೆ ಪಡದುಕೊಂಡರು.