ನನ್ನ ಪಾಲಿಗೆ ಇದು ಅದೃ​ಷ್ಟ​ದ ಭೂಮಿ​ - ಇಲ್ಲಿ ತಂದೆ-ತಾಯಿ ಹೆಸರಲ್ಲಿ ವೃದ್ಧಾ​ಶ್ರಮ

By Kannadaprabha NewsFirst Published Oct 5, 2021, 3:54 PM IST
Highlights
  • ನನ್ನ ಪಾಲಿಗೆ ಅದೃ​ಷ್ಟ​ದ ಭೂಮಿ​ಯಾ​ಗಿ​ರುವ ಕೇತ​ಗಾ​ನ​ಹ​ಳ್ಳಿ - ಎಚ್ ಡಿ ಕುಮಾರಸ್ವಾಮಿ
  • ಕೇತ​ಗಾ​ನ​ಹ​ಳ್ಳಿಯಲ್ಲಿ ತಂದೆ, ತಾಯಿ ಹೆಸ​ರಿ​ನಲ್ಲಿ ವೃದ್ಧಾ​ಶ್ರಮ ನಿರ್ಮಾಣ

 ರಾಮ​ನ​ಗರ (ಅ.05): ನನ್ನ ಪಾಲಿಗೆ ಅದೃ​ಷ್ಟ​ದ ಭೂಮಿ​ಯಾ​ಗಿ​ರುವ ಕೇತ​ಗಾ​ನ​ಹ​ಳ್ಳಿಯಲ್ಲಿ (Kethaganahalli) ತಂದೆ, ತಾಯಿ ಹೆಸ​ರಿ​ನಲ್ಲಿ ವೃದ್ಧಾ​ಶ್ರಮ ನಿರ್ಮಿ​ಸು​ವು​ದಾಗಿ ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾ​ರ​ಸ್ವಾಮಿ  (HD Kumaraswamy) ತಿಳಿಸಿ​ದರು.

ಬಿಡದಿ ಸಮೀ​ಪದ ಕೇತ​ಗಾ​ನ​ಹಳ್ಳಿ ತೋಟದಲ್ಲಿ ಜನತಾ ಪರ್ವ 1.0 ಹಾಗೂ ಜೆಡಿ​ಎಸ್‌ ಮಿಷನ್‌ 123 ಕಾರ್ಯಾಗಾರದಲ್ಲಿ ಆರನೇ ದಿನವಾದ ಸೋಮವಾರ ಮಾತ​ನಾ​ಡಿದರು. ಕೇತಗಾನಹಳ್ಳಿ ತೋಟದ ಎರಡ್ಮೂರು ಎಕ​ರೆ​ಯಲ್ಲಿ ವೃದ್ಧಾ​ಶ್ರ​ಮದ (Old Age Home) ಜತೆಗೆ ಅನಾಥ ಮಕ್ಕ​ಳಿಗೆ ಜೀವನ ಕೊಡುವ ಕಾರ್ಯ​ಕ್ರಮಕ್ಕಾಗಿ ಸಭಾಂಗ​ಣ, ಪಕ್ಷದ ಕಾರ್ಯ​ಕ​ರ್ತ​ರಿ​ಗಾಗಿ ತರ​ಬೇತಿ ಕೇಂದ್ರ ಹಾಗೂ ದೇವ​ಸ್ಥಾನ ನಿರ್ಮಿ​ಸುವ ಚಿಂತನೆ ಮಾಡಿ​ದ್ದೇನೆ ಎಂದ​ರು.

ಜೆಡಿಎಸ್‌ನಿಂದ ಮಾಸ್ಟರ್ ಪ್ಲಾನ್ : ಈಗ ನಿಖಿಲ್-ಪ್ರಜ್ವಲ್ ಜಂಟಿ ನಾಯಕತ್ವ

ನಾನು ರಾಜ​ಕೀ​ಯಕ್ಕೆ ಬರುವ ಮುನ್ನವೇ 1983ರಲ್ಲಿ ಕೇತ​ಗಾ​ನ​ಹ​ಳ್ಳಿ​ಯಲ್ಲಿ ಭೂಮಿ ಖರೀ​ದಿ​ಸಿದೆ. ಈ ಮಣ್ಣಿನ ಪ್ರಭಾ​ವ​ದಿಂದಲೇ ರಾಜ​ಕೀ​ಯಕ್ಕೆ ಬಂದೆ. ಪಕ್ಷ ಸಂಘ​ಟ​ನೆ​ಗಾಗಿ ರಾಜ​ಕೀ​ಯಕ್ಕೆ ಬಂದ​ವನೇ ಹೊರತು ಅಧಿ​ಕಾ​ರ​ಕ್ಕಾಗಿ ಅಲ್ಲ. ಆದರೂ ನಾನು ಮುಖ್ಯ​ಮಂತ್ರಿ ಹುದ್ದೆ ಅಲಂಕ​ರಿ​ಸಿದ್ದು ಈ ಮಣ್ಣಿನ ಮಹಿ​ಮೆ​ಯಿಂದಲೇ ಎಂದು ತಿಳಿ​ಸಿ​ದ​ರು.

ಕಾರ್ಯಾ​ಗಾ​ರ​ವನ್ನು ಪಕ್ಷದ ಕಚೇರಿ, ರೆಸಾರ್ಟ್‌ ಅಥವಾ ಸಭಾಂಗ​ಣ​ದಲ್ಲಿ ಮಾಡ​ಲಿಲ್ಲ. ಈ ಭೂಮಿ​ಯಿಂದ ಕಾರ್ಯಾ​ಗಾ​ರಕ್ಕೆ ಚಾಲನೆ ನೀಡಿ ಪಕ್ಷ ಸಂಘ​ಟ​ನೆ ಮಾಡಿ​ದರೆ 2023ಕ್ಕೆ ಅಧಿ​ಕಾ​ರಕ್ಕೆ ಬರ​ಬ​ಹುದು ಎಂಬ ಆತ್ಮ​ವಿ​ಶ್ವಾಸ ಇದೆ ಎಂದು ಕುಮಾ​ರ​ಸ್ವಾಮಿ ಹೇಳಿ​ದ​ರು.

ಅ.16ರಿಂದ ಜೆಡಿ​ಎಸ್‌ ‘ಜನತಾ ಸಂಗಮ: ಎಚ್‌ಡಿಕೆ

 ಮುಂಬರುವ ಚುನಾವಣೆಗೆ ಪಕ್ಷ ಸಂಘಟನೆ ಉದ್ದೇಶದಿಂದ ಆರಂಭಿಸಿರುವ ಜನತಾ ಪರ್ವ 1.0 ಕಾರ್ಯಗಾರದ 2ನೇ ಹಂತವಾಗಿ ‘ಜನತಾ ಸಂಗಮ’ (Janatha Sangam) ಕಾರ್ಯಕ್ರಮಕ್ಕೆ ಅ.16ರಿಂದ ಚಾಲನೆ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

 ಇದು ಪ್ರತಿ ತಾಲೂಕಿನಲ್ಲಿ ಎಲ್ಲರ ಜೊತೆಗೂಡಿ ನಡೆಯುವ ಕಾರ್ಯಕ್ರಮ. ಜೆಡಿಎಸ್‌ ಕಾರ್ಯಕರ್ತರನ್ನು ನೇರವಾಗಿ ಭೇಟಿಯಾಗುವ ಹಾಗೂ ತಳಹಂತದಲ್ಲಿ ಪಕ್ಷವನ್ನು ಬಲಪಡಿಸುವುದು ಇದರ ಉದ್ದೇಶ​ವಾ​ಗಿದೆ ಎಂದರು.

ನಾನು ಮತ್ತೆ ಸಿಎಂ ಆಗಬೇಕು ಅಂದ್ರೆ ನಿಮ್ಮ ದುಡಿಮೆ ಮುಖ್ಯ: ಎಚ್‌.ಡಿ. ಕುಮಾರಸ್ವಾಮಿ

ಜನತಾ ಸಂಗಮದ ಮೂಲಕ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಲಾಗುವುದು. ಜತೆಗೆ, ಕಾರ್ಯಾಗಾರಕ್ಕೆ ಹಾಜರಾಗಿರುವ ಪ್ರತಿಯೊಬ್ಬರ ಮಾಹಿತಿಯನ್ನೂ ಪಡೆದುಕೊಳ್ಳಲಾಗುವುದು. ಪಕ್ಷದ ಕಚೇರಿ ಹಾಗೂ ಕಾರ್ಯಕರ್ತರ ನಡುವೆ ಯಾವುದೇ ಸಂವಹನ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗಿದ್ದು, ಆ ನಿಟ್ಟಿನಲ್ಲಿ ತಂತ್ರಜ್ಞಾನ ಬಳಸಿಕೊಂಡು ಪಕ್ಷ ಸಂಘಟಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

click me!