ಕೇರಳ- ಕರ್ನಾಟಕ ಗಡಿ ತೆರವು ಇನ್ನಷ್ಟುವಿಳಂಬ

By Kannadaprabha NewsFirst Published Jun 2, 2020, 7:43 AM IST
Highlights

ದ.ಕ. ತಲಪಾಡಿ ಸಹಿತ ಕೇರಳ ಮತ್ತು ಕರ್ನಾಟಕದ ಗಡಿ ಪ್ರದೇಶಗಳು ಉಭಯ ರಾಜ್ಯಗಳ ಜನರ ಪ್ರಯಾಣಕ್ಕೆ ಮುಕ್ತಗೊಳ್ಳುವ ದಿನ ಇನ್ನಷ್ಟುವಿಳಂಬವಾಗುವ ಸಾಧ್ಯತೆ ಇದೆ.

ಮಂಗಳೂರು(ಜೂ 02): ದ.ಕ. ತಲಪಾಡಿ ಸಹಿತ ಕೇರಳ ಮತ್ತು ಕರ್ನಾಟಕದ ಗಡಿ ಪ್ರದೇಶಗಳು ಉಭಯ ರಾಜ್ಯಗಳ ಜನರ ಪ್ರಯಾಣಕ್ಕೆ ಮುಕ್ತಗೊಳ್ಳುವ ದಿನ ಇನ್ನಷ್ಟುವಿಳಂಬವಾಗುವ ಸಾಧ್ಯತೆ ಇದೆ.

ಗಡಿ ಸಂಚಾರಕ್ಕೆ ಮುಕ್ತಗೊಳಿಸುವ ಅಗತ್ಯ ಕುರಿತು ರಾಜ್ಯ ಮುಖ್ಯ ಕಾರ್ಯದರ್ಶಿ ಯವರಿಗೆ ಮನವಿ ಮಾಡಲಾಗಿದೆ. ಶೀಘ್ರ ತೀರ್ಮಾನ ಹೊರಬೀಳುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದರು.

ಎಚ್ಚರ.. ಸಮುದಾಯಕ್ಕೆ ಹರಡುತ್ತಿದೆ ಕೊರೋನಾ, ನಿಯಂತ್ರಣಕ್ಕೆ 11 ಶಿಫಾರಸು!

ಆದರೆ ಈ ಕುರಿತಂತೆ ಸೋಮವಾರ ರಾತ್ರಿ ವರೆಗೂ ದ.ಕ. ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ. ಬುಧವಾರ ಮೊದಲು ಈ ಬಗ್ಗೆ ತೀರ್ಮಾನ ಹೊರಬೀಳುವುದು ಅನುಮಾನ ಎಂದು ಕಾಸರಗೋಡು ಜಿಲ್ಲಾ​ಧಿಕಾರಿ ಕಚೇರಿ ಮೂಲ ತಿಳಿಸಿದೆ. ಅಲ್ಲದೆ ದಿನಂಪ್ರತಿ ಸಂಚರಿಸುವ ಉದ್ಯೋಗಿಗಳಿಗೆ ಪಾಸ್‌ ವಿತರಣೆ ವಿಷಯ ಕೂಡ ಪರಿಶೀಲನೆಯಲ್ಲಿದೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.

click me!