ಸಿಎಂ ವೈಮಾನಿಕ ಸಮೀಕ್ಷೆಗೆ ಸಿದ್ದು ಕಿಡಿ: 'ನಾನು ಕಾರ್‌ನಲ್ಲೇ ಪ್ರವಾಸ ಮಾಡಿ ನೊಂದವರ ಅಳಲು ಕೇಳ್ತೇನೆ'

By Suvarna NewsFirst Published Oct 21, 2020, 2:40 PM IST
Highlights

ನಾನು ದೇವೇಗೌಡರ ಕುಟುಂಬಕ್ಕೆ ಕಿರುಕುಳ ನೀಡಿದ್ದರೆ ಅದನ್ನು ದೇವೇಗೌಡರು ಹೇಳಲಿ ನಳೀನ್‌ ಕುಮಾರ ಕಟೀಲ್ ಯಾರ್ರಿ ಅದನ್ನಾ ಕೇಳೋಕೆ?| ಕಟೀಲ್‌ ಹುಟ್ಟುವ ಮುನ್ನವೇ ದೇವೇಗೌಡರು ರಾಜಕೀಯ ಮಾಡುತ್ತಿದ್ದಾರೆ ಎಂದು ಕಟೀಲ್‌ ವಿರುದ್ಧ ಕಿಡಿ ಕಾರಿದ ಸಿದ್ದರಾಮಯ್ಯ| 

ಹುಬ್ಬಳ್ಳಿ(ಅ.21):  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ಮಾಡುವುದದು ಸರಿಯಲ್ಲ. ಸಿಎಂ ನೊಂದವರ ಬಳಿ ಹೋಗಿ ಗೋಳುಗಳನ್ನ ಕೇಳಬೇಕು. ನಾನು ಸಹ ನೆರೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಮಾಡುತ್ತೇನೆ. ಇದೇ ಅ.24 ಹಾಗೂ 25 ರಂದು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಂಕಷ್ಟಗಳನ್ನ ಆಲಿಸಲಿದ್ದೇನೆ. ನಾನು ಅವರ ಹಾಗೆ ವೈಮಾನಿಕ ಸಮೀಕ್ಷೆ ಮಾಡುವುದಿಲ್ಲ. ಕಾರಿನಲ್ಲೇ ಪ್ರವಾಸ ಮಾಡಿ ನೊಂದವರ ಅಳಲನ್ನ ಕೇಳುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಿಎಂ‌ ಬಿಎಸ್‌ವೈ ನಡೆಸಿದ ವೈಮಾನಿಕ ಸಮೀಕ್ಷೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ನಳೀನ್ ಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ದೇವೇಗೌಡರ ಕುಟುಂಬಕ್ಕೆ ಕಿರುಕುಳ ನೀಡಿದ್ದರೆ ಅದನ್ನು ದೇವೇಗೌಡರು ಹೇಳಲಿ. ನಳೀನ್‌ ಕುಮಾರ ಕಟೀಲ್ ಯಾರ್ರಿ ಅದನ್ನಾ ಕೇಳೋಕೆ. ಕಟೀಲ್‌ ಹುಟ್ಟುವ ಮುನ್ನವೇ ದೇವೇಗೌಡರು ರಾಜಕೀಯ ಮಾಡುತ್ತಿದ್ದಾರೆ ಎಂದು ಕಟೀಲ್‌ ವಿರುದ್ಧ ಕಿಡಿ ಕಾರಿದ್ದಾರೆ.

ಇಬ್ಬರು ಕಾಂಗ್ರೆಸ್ ಮಾಜಿ ಸಚಿವರು ಬಿಜೆಪಿ ಸೇರ್ಪಡೆ..?

ಡಿಸಿಎಂ ಅಶ್ವತ್ಥ ನಾರಾಯಣ ಇಷ್ಟು ದಿನ ಯಾಕೆ ಬಾಯಿ ಮುಚ್ಕೊಂಡಿದ್ರು?, ಚುನಾವಣೆಗಾಗಿ ಎಲ್ಲರೂ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಕುಮಾರಸ್ವಾಮಿಗೆ ಕಿರುಕುಳ ಕೊಟ್ಟಿದ್ರೆ ಆಗಲೇ ಹೇಳಬೇಕಿತ್ತು. ಅಧಿಕಾರದಿಂದ ಕೆಳಗಿಳಿದು ಇಷ್ಟು ತಿಂಗಳ ನಂತರ ಹೇಳುತ್ತಿದ್ದಾರೆ. ಅದಕ್ಕೇ ಹೇಳಿದ್ದು‌ ಕುಣಿಯಲು ಬಾರದವರು ನೆಲ‌ ಡೊಂಕು ಅಂದ್ರಂತೆ. ನಾನು ಮುಂದಿನ ಮುಖ್ಯಮಂತ್ರಿ ಅನ್ನೋದನ್ನು ಜಮೀರ್‌ ಅಹ್ಮದ್ ಒಬ್ಬರೇ ನಿರ್ಧರಿಸಲ್ಲ. ಪಕ್ಷದ ಶಾಸಕರು, ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತೆ ಎಂದು ಹೇಳಿದ್ದಾರೆ. 
 

click me!