ಕಳೆದ 20 ವರ್ಷಗಳಿಂದ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬೇಕಾಗಿದ್ದ ಭೂಗತವಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ಅಂಗಡಿ ಸುರೇಶ್ ಅವರನ್ನು ಕಾಡಾನೆ ಹಿಡಿದುಕೊಟ್ಟಿದೆ.
ಚಿಕ್ಕಮಗಳೂರು (ಫೆ.17): ಕಳೆದ 20 ವರ್ಷಗಳಿಂದ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬೇಕಾಗಿದ್ದ ಭೂಗತವಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ಅಂಗಡಿ ಸುರೇಶ್ ಅವರನ್ನು ಕಾಡಾನೆ ಹಿಡಿದುಕೊಟ್ಟಿದೆ.
ಚಿಕ್ಕಮಗಳೂರಿನ ಕಾಡಂಚಿನ ಜನರ ಮೇಲೆ ಆಗಾಗ ದಾಳಿ ಮಾಡುತ್ತಿದ್ದ ಕಾಡಾನೆ ಈಗ ಪೊಲೀಸರಿಗೆ ಹಾಗೂ ನಾಡಿಗೆ ಒಳಿತಾಗುವ ಕಾರ್ಯವನ್ನು ಮಾಡಿದೆ. ಅದೇನೆಂದರೆ, ಕಳೆದ 20 ವರ್ಷಗಳಿಂದ ಪೊಲೀಸ್ ಇಲಾಖೆಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್‌ನನ್ನು ಸೆರೆ ಹಿಡಿಯಲು ಸಹಾಯ ಮಾಡಿದೆ. ಕರ್ನಾಟಕದ ಮೋಸ್ಟ್ ವಾಂಟೆಡ್ ಭೂಗತ ನಕ್ಸಲ್ ಅಂಗಡಿ ಸುರೇಶ್‌ನನ್ನು ಕೇರಳದ ಕಣ್ಣೂರು ಸರ್ಕಾರಿ ಆಸ್ಪತ್ರೆಯಲ್ಲಿ ಕರ್ನಾಟಕ ಪೊಲೀಸರು ಬಂಧನ ಮಾಡಿದ್ದಾರೆ.
ಎಂಥಾ.. ಮಕ್ಕಳನ್ನ ಹೆತ್ತುಬಿಟ್ಟೆ ಪಂಕಜಾಕ್ಷೀ; ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟ ಮಕ್ಕಳು
ಪೊಲೀಸರಿಗೆ ಆನೆ ಸಹಾಯ ಮಾಡಿದ್ಹೇಗೆ?
ಕರ್ನಾಟಕಕ್ಕೆ ಬೇಕಾಗಿದ್ದ ನಕ್ಸಲ್ ಅಂಗಡಿ ಸುರೇಶ್ ಕಳೆದ 20 ವರ್ಷಗಳಿಂದ ಭೂಗತನಾಗಿದ್ದನು. ಈಗಲೂ ಕೂಡ ಕೇರಳದ ಕಾಡಿನಲ್ಲಿವೇ ವಾಸವಾಗಿದ್ದನು. ಆದರೆ, ಕಣ್ಣೂರು ಅರಣ್ಯದ ನಕ್ಸಲ್ ಕ್ಯಾಂಪ್ ಮೇಲೆ ಕಾಡಾನೆ ದಾಳಿ ಮಾಡಿದೆ. ಕಾಡಾನೆ ದಾಳಿಯಿಂದ ನಕ್ಸಲ್ ಸುರೇಶ್‌ನ ಕಾಲು ಮುರಿದಿದೆ. ನಂತರ, ನಕ್ಸಲರು ಸುರೇಶ್‌ನನ್ನು ಕಾಡಂಚಿನ ಗ್ರಾಮದ ಬಳಿ ಬಿಟ್ಟು ಹೋದಾಗ ಆತನ ನೋವನ್ನು ನೋಡಿ ಸ್ಥಳೀಯರು ಕೇರಳದ ಕಣ್ಣೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಸ್ಪತ್ರೆಗೆ ದಾಖಲಾದ ಸುರೇಶ್ ನಕ್ಸಲ್ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ನಕ್ಸಲ್ ಸುರೇಶ್ ಸುಳಿವು ಕೊಟ್ಟವರಿಗೆ 5 ಲಕ್ಷ ರೂ. ಬಹುಮಾನ: ಬಂಧಿತ ಸುರೇಶ್ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವರಾಗಿದ್ದಾರೆ. ಕಳೆದ 20 ವರ್ಷಗಳಿಂದ ಭೂಗತನಾಗಿದ್ದನು. ಇನ್ನು ರಾಜ್ಯದಲ್ಲಿ ನಕ್ಸಲ್ ನಿಗ್ರಹ ಮಾಡಿದ ನಂತರ ಅಂಗಡಿ ಸುರೇಶನಿಗಾಗಿ ಎಲ್ಲೆಡೆ ಪತ್ತೆ ಮಾಡಲಾಗಿದೆ. ಎಲ್ಲಿಯೂ ಸಿಗದ ಹಿನ್ನೆಲೆಯಲ್ಲಿ ಸುರೇಶ್ ಸುಳಿವು ನೀಡಿದವರಿಗೆ 5 ಲಕ್ಷ ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಘೋಷಣೆಯನ್ನೂ ಮಾಡಿತ್ತು. ಇನ್ನು ಕೇರಳ-ಕರ್ನಾಟಕ ಗಡಿ ಪ್ರದೇಶದ ಅರಣ್ಯದಲ್ಲಿ ಸುರೇಶ್ ಅಡಗಿದ್ದನು.
ಅಯೋಧ್ಯಾ ರಾಮಲಲ್ಲಾ 5 ವರ್ಷದ ಮಗು,ನಿದ್ದೆ ಮಾಡಲೆಂದು ನಿತ್ಯ 1 ಗಂಟೆ ರಾಮಮಂದಿರ ಕ್ಲೋಸ್!
ಅಂಗಡಿ ಸುರೇಶ್ ವಿರುದ್ಧ ಚಿಕ್ಕಮಗಳೂರು, ಉಡುಪಿಯ, ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಕರಣಗಳಿವೆ. 10ಕ್ಕೂ ಅಧಿಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದನು. ಈಗ 20 ವರ್ಷಗಳ ನಂತರ ಸುರೇಶ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.