ಮಂಗಳೂರಿನ ಪ್ರತಿಷ್ಠಿತ ಹೊಟೇಲ್ ಈಜುಕೊಳದಲ್ಲಿ ಬ್ಯಾಂಕ್‌ ಅಧಿಕಾರಿ ಶವವಾಗಿ ಪತ್ತೆ!

By Gowthami K  |  First Published Sep 11, 2023, 10:10 AM IST

ಮಂಗಳೂರಿನ ಪ್ರತಿಷ್ಠಿತ ಮೋತಿ ಮಹಲ್ ಹೊಟೇಲ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಮೃತ ದೇಹ ಪತ್ತೆಯಾಗಿದೆ. ಹೊಟೇಲ್ ನ ಈಜು ಕೊಳದಲ್ಲಿ ಮೃತಪಟ್ಟಿರುವುದು  ಬ್ಯಾಂಕ್‌ ಅಧಿಕಾರಿ ಎಂದು ತಿಳಿದುಬಂದಿದೆ


ಮಂಗಳೂರು (ಸೆ.11): ಮಂಗಳೂರಿನ ಪ್ರತಿಷ್ಠಿತ ಮೋತಿ ಮಹಲ್ ಹೊಟೇಲ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಮೃತ ದೇಹ ಪತ್ತೆಯಾಗಿದೆ. ಹೊಟೇಲ್ ನ ಈಜು ಕೊಳದಲ್ಲಿ ಮೃತಪಟ್ಟಿರುವುದು  ಬ್ಯಾಂಕ್‌ ಅಧಿಕಾರಿ ಎಂದು ತಿಳಿದುಬಂದಿದೆ. ಮೃತ ವ್ಯಕ್ತಿ ಕೇರಳದ ತಿರುವನಂತಪುರಂ ನಿವಾಸಿ ಗೋಪು.ಆರ್.ನಾಯರ್ ಎಂದು ಗುರುತಿಸಲಾಗಿದೆ.  ಮೃತ ನಾಯರ್ ಯೂನಿಯನ್ ಬ್ಯಾಂಕ್ ಅಧಿಕಾರಿಯಾಗಿದ್ದರು ಎಂದು ತಿಳಿದುಬಂದಿದೆ. 

ನಿನ್ನೆ ಮಂಗಳೂರಿಗೆ ಬಂದು ಮೋತಿ ಮಹಲ್ ಹೊಟೇಲ್ ನಲ್ಲಿ ಉಳಿದು ಕೊಂಡಿದ್ದ ಬ್ಯಾಂಕ್ ಅಧಿಕಾರಿ. ಇಂದು ಬೆಳಿಗ್ಗೆ 4 ಗಂಟೆಗೆ  ಹೊಟೇಲ್ ರೂಮ್ ನಿಂದ ಹೊರ ಹೋಗಿದ್ದ.  ಈಜು ಕೊಳಕ್ಕೆ ಇಳಿಯುವ ಮುನ್ನ ಮದ್ಯಪಾನ ಮಾಡಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪಾಂಡೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.  

Tap to resize

Latest Videos

click me!