ಮಂಗಳೂರಲ್ಲಿ ಹೆಚ್ಚುತ್ತಿದೆ ಡ್ರಗ್ ದಂಧೆ : 10 ದಿನದಲ್ಲೇ 2 ಕೇಸ್ ಪತ್ತೆ

By Suvarna NewsFirst Published Jun 12, 2021, 1:36 PM IST
Highlights
  • ಮಂಗಳೂರಲ್ಲಿ ಹೆಚ್ಚಾಗುತ್ತಿದೆ ಡ್ರಗ್ಸ್ ದಂಧೆ
  • ಐಷಾರಾಮಿ ವ್ಯಕ್ತಿಗಳಿಗೆ ಡ್ರಗ್ಸ್ ಮಾರುತ್ತಿದ್ದ ವ್ಯಕ್ತಿ ಅರೆಸ್ಟ್ 
  • ವಾರದದಲ್ಲೇ ಎರಡನೇ ಪ್ರಕರಣ ಬೆಳಕಿಗೆ

ಮಂಗಳೂರು (ಜೂ.12): ವೇಗವಾಗಿ ಬೆಳೆಯುತ್ತಿರವ ಕಡಲನಗರಿ ಮಂಗಳೂರಲ್ಲಿ    ಡ್ರಗ್ಸ್ ದಂಧೆಯೂ ಜೋರಾಗಿದೆ. ಒಂದೇ ವಾರದಲ್ಲಿ ಸಿಸಿಬಿ ಪೊಲೀಸರು ಎರಡು ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ. ಲಕ್ಷಾಂತರ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. 

ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಐಷಾರಾಮಿ ವ್ಯಕ್ತಿಗಳಿಗೆ ಡ್ರಗ್ಸ್ ಮಾರುತ್ತಿದ್ದ ವ್ಯಕ್ತಿಯನ್ನು ಶುಕ್ರವಾರ ಬಂಧಿಸಲಾಗಿದೆ. ಈ ಮೂಲದೇ ಒಂದೇ ವಾರದಲ್ಲಿ ಎರಡು ಪ್ರಕರಣ ಬೆಳಕಿಗೆ ಬಂದಂತಾಗಿದೆ. 

ಮಂಗಳೂರಲ್ಲಿ 38 ಮಂದಿ ಶ್ರೀಲಂಕಾ ಪ್ರಜೆಗಳ ಬಂಧನ ..

ನಿಷೇಧಿತ ಮಾದಕವಸ್ತು ಎಲ್.ಎಸ್.ಡಿ ಮಾರಾಟ ಮಾಡುತ್ತಿದ್ದ ಕೇರಳದ ಕ್ಯಾಲಿಕಟ್ ನ ಮೊಹಮ್ಮದ್ ಅಜಿನಾಸ್(25) ಎಂಬಾತನನ್ನು ಬಂಧಿಸಲಾಗಿದೆ. ಬಂಧಿತನಿಂದ 16.80 ಸಾವಿರ ಮೌಲ್ಯದ ಎಲ್.ಎಸ್.ಡಿ ಸ್ಟಾಂಪ್ ಡ್ರಗ್ ವಶಪಡಿಸಿಕೊಳ್ಳಲಾಗಿದೆ. 

ಶಿವನ ಚಿತ್ರದ ಎಲ್.ಎಸ್.ಡಿ ಸ್ಟಾಂಪ್ ಡ್ರಗ್ ಇಟ್ಟುಕೊಂಡಿದ್ದ ಆರೋಪಿ ನಗರದ ಕದ್ರಿ ಮೈದಾನದಲ್ಲಿ ಗ್ರಾಹಕರ ಬರುವಿಕೆಗಾಗಿ ಕಾಯುತ್ತಿದ್ದ ವೇಳೆ ಡಿ.ಸಿ.ಪಿ ಹರಿರಾಂ ಶಂಕರ್ ನೇತೃತ್ವದ ತಂಡ ದಾಳಿ ನಡೆಸಿದ್ದಾರೆ. ಈ ವೇಳೆ ಸಿಕ್ಕಿ ಬಿದ್ದ ಅಜಿನಾಸ್ ಹಲವು ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ. ಆರೋಪಿಗೆ ಮಂಗಳೂರು ಮಾತ್ರವಲ್ಲದೆ ಕಾಸರಗೋಡು, ಗೋವಾದಲ್ಲೂ ಜಾಲವಿರುವ ಮಾಹಿತಿ ಲಭ್ಯವಾಗಿದೆ.  

ಎನ್.ಡಿ.ಪಿ.ಎಸ್ ಕಾಯ್ದೆಯಡಿ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕಳೆದ ಹತ್ತು ದಿನಗಳಲ್ಲಿ ಮಂಗಳೂರು ಪೊಲೀಸರು ಎರಡು ಬೃಹತ್ ಡ್ರಗ್ ಜಾಲಗಳನ್ನು ಭೇದಿಸಿದ್ದು, ಎರಡು ಪ್ರಕರಣದಲ್ಲಿ ಒಟ್ಟು 27,35,500 ರು. ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. 

ಪ್ರಕರಣ ಭೇದಿಸಿದ ಡಿ.ಸಿ.ಪಿ ಹರಿರಾಂ ಶಂಕರ್ ನೇತೃತ್ವದ ತನಿಖಾ ತಂಡಕ್ಕೆ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್  ಅಭಿನಂದಿಸಿದ್ದು ಜೊತೆಗೆ 10 ಸಾವಿರ ರು. ಪುರಸ್ಕಾರ ನೀಡಿದ್ದಾರೆ.

click me!