ಬೊಮ್ಮಾಯಿ ಸಂಪುಟದಲ್ಲಿ ಮಂಡ್ಯ ಮುಖಂಡಗೆ ಸಚಿವ ಸ್ಥಾನ ಖಚಿತ?

By Kannadaprabha NewsFirst Published Jul 31, 2021, 1:36 PM IST
Highlights
  • ಬಸವರಾಜ  ಬೊಮ್ಮಾಯಿ ನಾಯಕತ್ವದ ನೂತನ ಸರ್ಕಾರದಲ್ಲಿ ಸಂಪುಟ ಕುತೂಹಲ
  • ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಹಲವು ಮುಖಂಡರು
  • ಯಾರಿಗೆ ಒಲಿಯಲಿದೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ 

ವರದಿ : ಮಂಡ್ಯ ಮಂಜುನಾಥ

ಮಂಡ್ಯ (ಜು.31): ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ಪದತ್ಯಾಗಗೊಂಡು ಬಸವರಾಜ  ಬೊಮ್ಮಾಯಿ ನಾಯಕತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನ ಹಿಂದೆಯೇ  ಸಂಪುಟ ಸೇರ್ಪಡೆ  ಕಸರತ್ತು ತೀವ್ರಗೊಂಡಿದೆ.

ಜಿಲ್ಲೆಯ ಉಸ್ತುವಾರಿ ಜೊತೆಗೆ ಕ್ರೀಡೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾದ ಕೆ.ಸಿ ನಾರಾಯಣಗೌಡ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಕುರಿತು  ಚರ್ಚೆಗಳು ಆರಂಭವಾಗಿವೆ. 

ಮೈತ್ರಿ ಸರ್ಕಾರದ ಪತನದ ನಂತರ ಬಿಜೆಪಿ ಸರ್ಕಾರ ರಚನೆಗೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ನಾರಾಯಣಗೌಡಗೆ ಸಚಿವ ಸ್ಥಾನ ಮತ್ತು ಜಿಲ್ಲೆಯ ಉಸ್ತುವಾರಿ ಸಿಗುವುದು ಬಹುತೇಕ ಖಚಿತ ಎಂದು  ಮೇಲ್ನೋಟಕ್ಕೆ ಕಂಡು ಬಂದರೂ ಆಂತರಿಕವಾಗಿ ಪರ ವಿರೋಧಗಳು ನಡೆಯುತ್ತಿವೆ.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಜಿಜ್ಞಾಸೆ : ಹೊಸಬರೋ, ಹಳಬರೋ..?

ಮಂಡ್ಯ ಜಿಲ್ಲೆ ಮೊದಲ ಬಾರಿಗೆ ಕೆಆರ್‌ ಪೇಟೆಯಿಂದ ಗೆಲುವು ಸಾಧಿಸಿ ಬಿಜೆಪಿ ಖಾತೆ ತೆರೆಯಲು ಸಹಕಾರಿಯಾದ ಕೆಸಿ ನಾತಾಯಣ ಗೌಡರಿಗೆ ಜಿಲ್ಲೆಯಲ್ಲಿ ಪಕ್ಷವನ್ನು ಬಲವರ್ಧನೆ ಮಾಡುವ ಉದ್ದೇಶದಿಂದ ಸಂಪುಟದಲ್ಲಿ ಸ್ಐಆನ ನೀಡಬೇಕು ಎನ್ನುವುದು ಬೆಂಬಲಿಗರ  ಒತ್ತಾಯವಾಗಿದೆ. 

ಮಾಜಿ ಸಿಎಂ ಯಡಿಯೂರಪ್ಪ ತವರು ಜಿಲ್ಲೆಯಾದ ಮಂಡ್ಯದಲ್ಲಿ ಕಳೆದ 70 ವರ್ಷಗಳಿಂದಲೂ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಆದರೆ ಕಳೆದ ಎರಡು ವರ್ಷಗಳ ಹಿಂದಿನ ಬೆಳವಣಿಗೆಗೆಳ ನಂತರ ರಾಜಕೀಯ ಬದಲಾವಣೆಗಳಿಂದ ಜೆಡಿಎಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಗೆಲ್ಲಿಸುವಲ್ಲಿ ಯಶಸ್ವಿಯಾದರು. 

ಜಿಲ್ಲೆಯ 6 ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರೇ ಇದ್ದು ಬಹುತೇಕ ಸ್ಥಳೀಯ ಸಂಸ್ಥೆಗಳು ಜೆಡಿಎಸ್ ಮತ್ತು ಕಾಂಗ್ರೆಸ್ ಹಿಡಿತದಲ್ಲೇ ಇರುವಾಗ ಅವೆಲ್ಲವನ್ನು ಮೀಡಿ ಬಿಜೆಪಿ ಬಲವರ್ಧನೆಗೆ ಮುಂದಾಗಿದ್ದರು. ಈ ನಿಟ್ಟಿನಲ್ಲಿ ಸಚಿವ ಸ್ಥಾನ ನೀಡಲಾಗುತ್ತದೆ ಎನ್ನುವ ಮಾತು ಕೇಳಿ ಬರುತ್ತಿದೆ

click me!