ಕಸ್ತೂರಿರಂಗನ್‌ ವರದಿ ಅವೈಜ್ಞಾನಿಕ, ಮರುಪರಿಶೀಲನೆ ಅಗತ್ಯ: ಸಂಸದೆ

By Kannadaprabha NewsFirst Published Oct 6, 2019, 11:51 AM IST
Highlights

ಕಸ್ತೂರಿ ರಂಗನ್‌ ವರದಿ ಅವೈಜ್ಞಾನಿಕವಾಗಿದೆ. ಅದನ್ನು ಮರು ಪರಿಶೀನಲನೆ ಮಾಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಸ್ಯಾಟ್‌ಲೈಟ್‌ ಮೂಲಕ ಸರ್ವೆ ನಡೆಸಿ ಸಿದ್ಧಪಡಿಸಿದ ವರದಿಯಾಗಿದ್ದು ಲ್ಯಾಂಡ್‌ಸ್ಕೇಪ್‌ ಮೂಲಕ ಸರ್ವೆಯಾಗಿಲ್ಲ. ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದಿದ್ದಾರೆ.

ಕಾರ್ಕಳ(ಅ.06): ಕಸ್ತೂರಿ ರಂಗನ್‌ ವರದಿ ಅವೈಜ್ಞಾನಿಕವಾಗಿದೆ. ಸ್ಯಾಟ್‌ಲೈಟ್‌ ಮೂಲಕ ಸರ್ವೆ ನಡೆಸಿ ಸಿದ್ಧಪಡಿಸಿದ ವರದಿಯಾಗಿದ್ದು ಲ್ಯಾಂಡ್‌ಸ್ಕೇಪ್‌ ಮೂಲಕ ಸರ್ವೆಯಾಗಿಲ್ಲ. ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ. ಆದ್ದರಿಂದ ಕಸ್ತೂರಿ ರಂಗನ್‌ ವರದಿ ಮರುಪರಿಶೀಲನೆಯಾಗಬೇಕು ಎಂದು ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದಾಜ್ಲೆ ಹೇಳಿದ್ದಾರೆ.

ಅವರು ಶನಿವಾರ ಗ್ಯಾಲಕ್ಸಿ ವಿವಿಧೋದ್ದೇಶ ಸಭಾಭವನದಲ್ಲಿ ಅರಣ್ಯ ಇಲಾಖೆ ಕುದುರೆಮುಖ ವನ್ಯಜೀವಿ ವಿಭಾಗದ ವತಿಯಿಂದ ಆಯೋಜಿಸಲಾಗಿರುವ 65ನೇ ವನ್ಯಜೀವಿ ಸಪ್ತಾಹ 2019 ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಸಿಡಿಲಿಗೆ ಬೆಳ್ತಂಗಡಿಯಲ್ಲಿ ಭೂಕಂಪನ ಅನುಭವ

ಕಸ್ತೂರಿ ರಂಗನ್‌ ವರದಿಯಲ್ಲಿ ನಮ್ಮ ಕಾಫಿ, ತೆಂಗಿನ ತೋಟ, ಅಡಕೆ, ರಬ್ಬರ್‌ ಬೆಳೆಗಳು ವರದಿಯಲ್ಲಿ ಸೇರ್ಪಡೆಯಾಗಿದೆ. ಇದೇ ವಿಚಾರಕ್ಕಾಗಿ ಸುಪ್ರೀಂಕೋರ್ಟ್‌ನಲ್ಲಿ ಹಲವು ಬಾರಿ ಚರ್ಚೆಯೂ ಅಗಿದೆ. ಲ್ಯಾಂಡ್‌ ಸ್ಕೇಪ್‌, ನ್ಯಾಚುರಲ್‌ ಲ್ಯಾಂಡ್‌ಸ್ಕೇಪ್‌ ಹಾಗೂ ಕಲ್ಚರಲ್‌ ಲ್ಯಾಂಡ್‌ ಸ್ಕೇಪ್‌ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದರೂ ಈವರೆಗೂ ಈ ಬಗ್ಗೆ ಸರ್ವೆ ಕಾರ್ಯ ಮುಗಿಯದೇ ಇರುವುದು ಖೇದಕರ. ಕೇರಳ ವರದಿ ಹೊರತು ಪಡಿಸಿ ಬೇರೆ ಯಾವ ರಾಜ್ಯದಲ್ಲಿಯೂ ವರದಿ ಮನ್ನಣೆ ಮಾಡಿಲ್ಲ ಅನ್ನುವುದು ಸ್ಪಷ್ಟವಾಗಿದೆ ಎಂದರು.

ಮರಿ ವೀರಪ್ಪನ್‌ಗಳಿದ್ದಾರೆ:

ಸರ್ಕಾರ ಹಾಗೂ ಕಾನೂನು, ಕಾಡು ಪ್ರಾಣಿ, ಅರಣ್ಯ ಸಂಪತ್ತು ರಕ್ಷಣೆ ಬಗ್ಗೆ ವಿಶೇಷ ಆಸಕ್ತಿ ವಹಿಸಿದೆ. ಎಲ್ಲ ಸಂಘರ್ಷಗಳನ್ನು ಎದುರಿಸಿ ಅರಣ್ಯ ಸಿಬ್ಬಂದಿ ಕೆಲಸ ನಡೆಸುತ್ತಿದ್ದಾರೆ. ಅಕ್ರಮಗಳಿಗೆ ನಾವು ಎಂದಿಗೂ ಬೆಂಬಲ ಸೂಚಿಸುವುದಿಲ್ಲ. ಅರಣ್ಯ ಹಾಗೂ ಮನುಷ್ಯರ ನಡುವೆ ಪೂರಕ ಬದಕು ರೂಪಿಸುವಂತಾಗಬೇಕು. ವನ್ಯಜೀವಿ ರಕ್ಷಣೆ ಮಾಡುವ ಜತೆಗೆ ಕಾಡಿನ ಸಂಪತ್ತು ರಕ್ಷಣೆ ಮಾಡಬೇಕು. ಕಾಡಿನ ಸುತ್ತ ಮರಿ ವೀರಪ್ಪನ್‌ಗಳು ಇದ್ದಾರೆ ಎಂದರು.

ಸಿಯಾಳ ಕದ್ದ ಕರ್ಣ: ಪೊಲೀಸರಿಂದ ಎಚ್ಚರಿಕೆ

ಕಾಡನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮರಗಿಡ, ಕಾಡಿನ ರಕ್ಷಣೆ ಮಾಡಿದರೆ ಸಾಲದು. ಕಾಡಿನ ಪರಿಸರ, ನದಿಮೂಲ ಹೀಗೆ ಹಲವಾರು ನೈಸರ್ಗಿಕ ಸಂಪತ್ತು ರಕ್ಷಣೆಯ ಕಾರ್ಯವಾಗಬೇಕು. ಅರಣ್ಯ ಬಿಟ್ಟು ಬದುಕುವ ಸ್ಥಿತಿಯಲ್ಲಿ ಅರಣ್ಯವಾಸಿಗಳು ಇಲ್ಲ. ಶತಮಾನಗಳಿಂದ ತಮ್ಮ ಹಿರಿಯರ ಕಾಲದಿಂದ ಅರಣ್ಯದಲ್ಲಿ ಬದುಕು ಸಾಗಿಸುವ ಅನೇಕ ಮಂದಿ ಅರಣ್ಯವನ್ನೇ ನಂಬಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಸ್ಥಳೀಯರು, ಜನಪತ್ರಿನಿಧಿ, ಅಧಿಕಾರಿಗಳಿಂದ ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆ ಮಾಡುವಂತಹ ಕೆಲಸ ನಡೆಯಬೇಕಾಗಿದೆ. ಕಾಡು ನಾಶ ಪಡಿಸಿ ಪ್ರಾಣಿ ಬೇಟೆಯಾಡುವ ಮಂದಿ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಕಂಡಕ್ಟರ್ ಟಿಕೆಟ್ ಕೊಡಲ್ವಾ..? ಹಾಗಾದ್ರೆ ಉಚಿತವಾಗಿ ಪ್ರಯಾಣಿಸಿ

ಶಾಸಕ ವಿ. ಸುನಿಲ್‌ ಕುಮಾರ್‌ ಮಾತನಾಡಿ, ಈ ಭೂಮಿ ಮೇಲೆ ಮನುಷ್ಯನಿಗೆ ಬದುಕಲು ಎಷ್ಟುಹಕ್ಕಿದೆಯೋ, ಅಷ್ಟೇ ವನ್ಯಜೀವಿಗಳಿಗೂ ಇದೆ. ನಶಿಸಿ ಹೋಗುವ ಕಾಡು, ಕಾಡುಪ್ರಾಣಿಗಳ ರಕ್ಷಣೆ ಬಗ್ಗೆ ನಾವು ಇಂದು ಚಿಂತಿಸಬೇಕಾಗಿದ್ದು, ಮನುಷ್ಯ ಸಂಕುಲ ಉಳಿಯುವ ಅಳಿಯುವ ಕೊಂಡಿಯಾಗಿ ಈ ವನ್ಯ ಜೀವಿಗಳು ಸಹಕಾರಿಯಾಗಿವೆ. ಸಮಾಜ ಜಗತ್ತು ಬೆಳೆಯುವ ಸಂದರ್ಭದಲ್ಲಿ ಮನುಷ್ಯನಿಗೆ ಮೂಲಭೂತ ಸೌಕರ್ಯ ಒದಗಿಸಬೇಕಾಗಿದೆ. ಇದರ ನಡುವೆ ಸೌಹಾರ್ದತೆಯ ಪರಿಹಾರ ಕಂಡುಕೊಳ್ಳುತ್ತಾ ಮನುಷ್ಯ ಬದುಕಿನ ಜೊತೆಗೆ ಪರಿಸರ ಹಾಗೂ ಕಾಡುಪ್ರಾಣಿಗಳನ್ನು ಉಳಿಸುವ ಕೆಲಸವಾಗಬೇಕು ಎಂದರು.

ಮೋದಿಯದ್ದು ಹಿಟ್ಲರ್ ಆಡಳಿತ: ಸಿದ್ದರಾಮಯ್ಯ ವಾಗ್ದಾಳಿ

ಮಂಗಳೂರು ವೃತ್ತದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನೋಡಲ್‌ ಅಧಿಕಾರಿಗಳಾದ ಪುನೀತ್‌ ಪಾಠಕ್‌ ಮಾತನಾಡಿ, ಅರಣ್ಯ ಸಂಪತ್ತಿನ ರಕ್ಷಣೆ ಮತ್ತು ಅವುಗಳನ್ನು ಉಳಿಸುವ ಮಹತ್ವದ ಜವಾಬ್ದಾರಿ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪೂರಕವಾಗಿ ಈ ಕಾರ್ಯಕ್ರಮ ನಡೆದಿದೆ ಎಂದರು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಸದಸ್ಯರಾದ ಸೌಭಾಗ್ಯ ಮಡಿವಾಳ, ಮಂಜುಳಾ, ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್‌ ಎಸ್‌. ನೆಟಾಲ್ಕರ್‌, ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಲನ್‌, ಕುಂದಾಪುರ ವಿಭಾಗದ ಉಪ ಸಂರಕ್ಷಣಾಧಿಕಾರಿ ಕಮಲ ಕರಿಕಲನ್‌, ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೆನ್‌ ಪಿ., ಅರಣ್ಯಾಧಿಕಾರಿಗಳಾದ ಬಾಲಕೃಷ್ಣ ಮತ್ತು ಬಾಲಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ಸಾಂಪ್ರದಾಯಿಕ ವರ್ಸಸ್‌ ಪ್ರವಾಸೋದ್ಯಮ ದಸರಾ

ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ತಾಂತ್ರಿಕ ಸಹಾಯಕ ಡಾ. ಬಸವರಾಜ ಕೆ.ಎನ್‌. ಸ್ವಾಗತಿಸಿದರು, ನಾಗರಾಜ ಪಟ್ವಾಲ್‌ ಕಾರ್ಯಕ್ರಮ ನಿರೂಪಿಸಿದರು. ವನ್ಯಜೀವಿ ಉಪ ವಿಭಾಗ ಸಿದ್ದಾಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಗವಾನ್‌ದಾಸ್‌ ವಂದಿಸಿದರು.

ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ವತಿಯಿಂದ ಶನಿವಾರ ನಡೆದ 65ನೇ ವನ್ಯಜೀವಿ ಸಪ್ತಾಹಕ್ಕೆ ಸಂಸದೆ ಶೋಭ ಕರಂದ್ಲಾಜೆ ಚಾಲನೆ ನೀಡಿದರು.

click me!