Dakshina Kannada: ಕಾಸರಗೋಡು ಕರ್ನಾಟಕದೊಂದಿಗೆ ವಿಲೀನಗೊಳ್ಳಲಿ, ಮಂಜೇಶ್ವರದಲ್ಲಿ ರೋಚಕ ಕರೆ

Published : Nov 21, 2026, 10:34 AM IST
Kasaragod district  AI Image

ಸಾರಾಂಶ

ಕಾಸರಗೋಡಿನ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ವಿರೋಧಿಸಿ ಕರ್ನಾಟಕದೊಂದಿಗೆ ವಿಲೀನಗೊಳಿಸುವ ಸದಾಶಯವನ್ನು ಹಿರಿಯ ಸಾಹಿತಿ ಡಾ.ರಮಾನಂದ ಬನಾರಿ ವ್ಯಕ್ತಪಡಿಸಿದರು. ಮಂಗಳೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಂಗಳೂರು: ಕಾಸರಗೋಡು ವಿವಿಧ ವಿಚಾರಗಳಲ್ಲಿ ವಂಚನೆಗೊಳಗಾಗಿದೆ. ಕಾಸರಗೋಡಿನ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಪ್ರತಿಭಟಿಸುವ ಯೋಜನೆಯನ್ನು ರೂಪಿಸಿಕೊಳ್ಳಿ. ಕಾಸರಗೋಡು ಭೌತಿಕವಾಗಿ ನಮ್ಮ ಕರ್ನಾಟಕದೊಂದಿಗೆ ವಿಲೀನಗೊಳ್ಳಲಿ ಎನ್ನುವ ಸದಾಶಯ ನಮ್ಮಲ್ಲಿರಲಿ, ಈಡೇರಲಿ ಎಂದು ಹಿರಿಯ ವಿದ್ವಾಂಸ, ಸಾಹಿತಿ ಡಾ.ರಮಾನಂದ ಬನಾರಿ ಮಂಜೇಶ್ವರ ಹೇಳಿದರು.

ನಾಲ್ವರು ಸಾಧಕರಿಗೆ ಕನ್ನಡ ರಾಜ್ಯೋತ್ಸವ ಗೌರವ ಪ್ರಶಸ್ತಿ

ಅವರು ಶುಕ್ರವಾರ ನಗರದ ಕೋಡಿಯಾಲಬೈಲು ಶಾರದಾ ವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ, ಕಲ್ಕೂರ ಪ್ರತಿಷ್ಠಾನ ಸಹಯೋಗದಲ್ಲಿ ನಡೆದ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯೋತ್ಸವ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯೋತ್ಸವ ಸಂದೇಶ ನೀಡಿದರು.

ಯಕ್ಷಗಾನಕ್ಕೆ ಕಾಸರಗೋಡು ಕೊಡುಗೆ

ಕಾಸರಗೋಡು ಕನ್ನಡನಾಡು ಎಂಬುದಕ್ಕೆ ಸಾಕಷ್ಟು ಪುರಾವೆ ಇದೆ‌. ಯಕ್ಷಗಾನಕ್ಕೆ ಕಾಸರಗೋಡು ಸಾಕಷ್ಟು ಕೊಡುಗೆ ನೀಡಿದೆ. ಕಾಸರಗೋಡು ಕನ್ನಡನಾಡಿನೊಂದಿಗೆ ವಿಲೀನ ಆಗಬೇಕು ಎಂದು ಮಹಾಜನ್‌ ವರದಿ ಹೇಳಿದೆ. ಎಷ್ಟು ಸಂಸದರು ಈ ಬಗ್ಗೆ ಚರ್ಚಿಸಿದ್ದಾರೆ. ಸಂಸದರು, ಸಚಿವರು ಯಾರು ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ದೀಪ ಪ್ರಜ್ವಲನ ಮಾಡಿದರು. ಕರಾವಳಿ ಲೇಖಕಿ ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ವಿ.ಶೆಟ್ಟಿ ಕನ್ನಡ ಧ್ವಜಾರೋಹಣ ನೆರವೇರಿಸಿದರು. ವಿದ್ವಾನ್ ನಾಗೇಶ್ ಎ. ಬಪ್ಪನಾಡು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಶಾರದಾ ವಿದ್ಯಾಲಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಕಿನ್ನಿಗೋಳಿ ಯುಗಪುರುಷದ ಭುವಭಿರಾಮ ಉಡುಪ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಮಂಗಳೂರು ನಾದನಂದಂ ಅಧ್ಯಕ್ಷ ಎಸ್.ಎಲ್.ಭಾರದ್ವಾಜ್, ಮಹಿಳಾ ಸಾಂಸ್ಕೃತಿಕ ಸಂಘಟಕಿ ವಿಜಯಲಕ್ಷ್ಮಿ, ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ಸುಮಾ ಮಾನ್ವಿ, ಮುಖಂಡ ರವೀಂದ್ರ ಉಳಿದೊಟ್ಟು, ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಮತ್ತಿತರರು ಇದ್ದರು.

ರಾಜ್ಯೋತ್ಸವ ಗೌರವ ಪ್ರಶಸ್ತಿ

ಬೃಹತ್ ಸಮಾರಂಭ ಆಯೋಜಕ ಆರ್.ಕೆ.ಭಟ್ ಮೂಡುಬಿದಿರೆ, ಹಿರಿಯ ಯಕ್ಷಗಾನ ಕಲಾವಿದ ನೆಡ್ಲೆ ಗೋವಿಂದ ಭಟ್, ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದೆ ಬೊಳ್ಳಾವ ನಾರಾಯಣೀ, ಸತ್ಯಶಂಕರ ಹಾಗೂ ಸುರೇಖಾ ಯಳವಾರ, ಸೇವಾ ಕ್ಷೇತ್ರ (ವಿಕಲ ಚೇತನರ ಸೇವೆ) ಅವರಿಗೆ ರಾಜ್ಯೋತ್ಸವ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಹಕಾರಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಅವರಿಗೆ ರಾಜ್ಯೋತ್ಸವ ಅಭಿವಂದನಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹೊರನಾಡ ಹಾಗೂ ಗಡಿನಾಡ ಸಾಧಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯೋತ್ಸವ ಸಾಧಕ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿದರು. ಉಮೇಶ್ ಕೆ.ಆರ್. ವಂದಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು.

PREV
Read more Articles on
click me!

Recommended Stories

ಮಲ್ಲೇಶ್ವರಂ ಆನೆ ಪಾರ್ಕ್ ಓಪನ್ ಆಗಿದ್ದೇ ತಡ, ಶುರುವಾಯ್ತು ರಾಜಕೀಯ ಕಾಳಗ! ಮರು ಉದ್ಘಾಟನೆ ವೇಳೆ ನಡೆದಿದ್ದೇನು?
ಒಂದು ಬೆದರಿಕೆ, ಒಂದು ಸಾವು, ಆಮೇಲೆ ನಾಪತ್ತೆ; ವೀರಪ್ಪನ್ ಕಾಡಿನ ಮರೆಯಲಾಗದ ಘಟನೆ ಬಿಚ್ಚಿಟ್ಟ ಮಾಜಿ ಅರಣ್ಯ ಸಿಬ್ಬಂದಿ