Hampi| ಮಿನಿಸ್ಟರ್‌ ರಿಯಾಲಿಟಿ ಚೆಕ್‌, ಟೂರಿಸ್ಟ್‌ಗಳ ಸಮಸ್ಯೆ ಆಲಿಸಿದ ಆನಂದ್‌ ಸಿಂಗ್‌..!

By Kannadaprabha NewsFirst Published Nov 10, 2021, 1:33 PM IST
Highlights

*  ಪ್ರವಾಸಿ ತಾಣಗಳಲ್ಲಿ ಸಮೀಕ್ಷೆ ನಡೆಸಿ ಪರಿಹಾರ
*  ಸಚಿವ ಆನಂದ್‌ ಸಿಂಗ್‌ರಿಂದ ಖುದ್ದು ಪರಿಶೀಲನೆ
*  ಹಂಪಿ ಪ್ರವಾಸಿಗರಿಂದ ಫೀಡ್‌ಬ್ಯಾಕ್‌ ಪಡೆದ ಸಚಿವ ಸಿಂಗ್‌
 

ಕೃಷ್ಣ ಎನ್‌. ಲಮಾಣಿ
ಹೊಸಪೇಟೆ(ನ.10): ಪ್ರವಾಸಿ ತಾಣಗಳಲ್ಲಿ(Tourist Spot) ಸ್ವತಃ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌(Anand Singh) ಅವರು ಪ್ರವಾಸಿಗರನ್ನು ನೇರ ಮುಖಾಮುಖಿಯಾಗಿ ಸಮೀಕ್ಷೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಯೋಜನೆಗೆ ಕೈಹಾಕಿದ್ದಾರೆ!.

ಹೌದು, ಪ್ರವಾಸಿ ತಾಣಗಳ ಗ್ರೌಂಡ್‌ ರಿಪೋರ್ಟ್‌(Ground Report) ಹಾಗೂ ರಿಯಾಲಿಟಿ ಚೆಕ್‌ಅನ್ನು(Reality Check) ಸ್ವತಃ ಸಚಿವ ಆನಂದ್‌ ಸಿಂಗ್‌ ಅವರೇ ಮಾಡುತ್ತಿದ್ದಾರೆ. ಅಧಿಕಾರಿಗಳು ನೀಡುವ ಅಂಕಿ- ಅಂಶ ಹಾಗೂ ಕಾರಣಗಳನ್ನು ಪಟ್ಟಿ ಮಾಡಿಕೊಂಡು ಪ್ರವಾಸಿಗರಿಗೆ(Tourists) ಪೂರಕವಾದ ಯೋಜನೆಗಳನ್ನು ರೂಪಿಸಿ ಜಾರಿ ಮಾಡುವುದಕ್ಕಿಂತ ಸ್ವತಃ ಅವರೇ ದೇಶ- ವಿದೇಶಿ ಪ್ರವಾಸಿಗರನ್ನು ನೇರ ಭೇಟಿಯಾಗಿ ಮಾತನಾಡುತ್ತಿದ್ದಾರೆ. ಈ ಮೂಲಕ ನೈಜ ಸಮಸ್ಯೆ ಅರಿತುಕೊಂಡು ವಾಸ್ತವ ಯೋಜನೆ ರೂಪಿಸಿ ಜಾರಿ ಮಾಡುತ್ತ ಹೆಜ್ಜೆ ಹಾಕಿದ್ದಾರೆ.

Vijayanagara| ಈ ವರ್ಷವೂ ‘Hampi Utsav’ ಆಯೋಜಿಸಿ

ಪ್ರವಾಸಿಗರ ಜತೆ ಸಂವಾದ:

ಹಂಪಿಯ ಸ್ಮಾರಕಗಳ(Hampi Monuments) ವೀಕ್ಷಣೆಗೆ ಆಗಮಿಸಿರುವ ಪ್ರವಾಸಿಗರನ್ನು ಮಾತನಾಡಿಸಿದ ಸಚಿವ ಆನಂದ್‌ ಸಿಂಗ್‌ ಅವರು ಹಂಪಿಯಲ್ಲಿ(Hampi) ಪ್ರವಾಸಿಗರಿಗೆ ಯಾವ ರೀತಿಯ ಸೌಲಭ್ಯಗಳಿವೆ ಎಂದು ಕೇಳಿದರು.
ಮುಂಬಯಿ(Mumbai) ಮೂಲದ ಪ್ರವಾಸಿಗರು ಹಂಪಿಯ ಸ್ಮಾರಕಗಳನ್ನು ನೋಡುವುದೇ ಖುಷಿಯಾಗುತ್ತದೆ. ಆದರೆ, ಕೆಲ ಮೂಲ ಸೌಕರ್ಯಗಳನ್ನು ಪ್ರವಾಸಿಗರಿಗೆ ಒದಗಿಸಬೇಕು. ಅದರಲ್ಲೂ ರಸ್ತೆಬದಿಯಲ್ಲಿ ನೀರಿನ ಬಾಟಲ್‌ಗಳು ಮತ್ತು ಸ್ಥಳೀಯ ತಿಂಡಿ ತಿನಿಸುಗಳು, ಹಣ್ಣುಗಳು ದೊರೆಯುವಂತಾಗಬೇಕು. ಹಂಪಿಯಲ್ಲಿ ಬಿಸಿಲು ಜಾಸ್ತಿ. ಹಾಗಾಗಿ ಪ್ರವಾಸಿಗರಿಗೆ ಪೂರಕ ಸೌಲಭ್ಯಗಳು ಲಭ್ಯ ದೊರೆಯಬೇಕು ಎಂದರು.

ಸೌಲಭ್ಯಕ್ಕೆ ಸಮೀಕ್ಷೆ:

ಹಂಪಿ, ಮೈಸೂರು(Mysuru) ಸೇರಿ ಕರ್ನಾಟಕದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಮೂಲ ಸೌಲಭ್ಯ(Basic Facility) ಒದಗಿಸುವುದಕ್ಕಾಗಿಯೇ ಸ್ವತಃ ನಾನೇ ಟೂರಿಸಂ ಮಿನಿಸ್ಟರ್‌(Tourism Minister) ಆಗಿ ಸಮೀಕ್ಷೆ ನಡೆಸುತ್ತಿರುವೆ. ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಖಂಡಿತ ಎಲ್ಲ ಬಗೆಯ ಸೌಲಭ್ಯಗಳು ಹಂಪಿ ಸೇರಿ ಕರ್ನಾಟಕದ ಎಲ್ಲ ಪ್ರವಾಸಿ ತಾಣಗಳಲ್ಲಿ ದೊರೆಯಲಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಉತ್ತರಿಸಿದರು.

ಸ್ಮಾರಕಗಳ ವೀಕ್ಷಣೆಗೆ ನಾಲ್ಕು ದಿನ:

ಹಂಪಿ ಪ್ರದೇಶದ ಸ್ಮಾರಕಗಳ ವೀಕ್ಷಣೆಗೆ ನಾಲ್ಕು ದಿನಗಳು ಬೇಕಾಗಲಿವೆ. ಅದರಲ್ಲೂ ಹಂಪಿಯ ಸ್ಮಾರಕಗಳನ್ನು ನಡೆದುಕೊಂಡೇ ನೋಡಬೇಕು. ಕೊಪ್ಪಳ(Koppal) ಭಾಗದ ಆನೆಗೊಂದಿಯ(Anegondi) ಅಂಜನಾದ್ರಿ ಪರ್ವತವೂ(Anjanadri Hill)ಫೇಮಸ್‌ ಆಗಿದೆ. ಸ್ಥಳೀಯ ಗೈಡ್‌ಗಳನ್ನು ನೇಮಿಸಿಕೊಂಡರೆ ನಿಮಗೂ ಸ್ಮಾರಕಗಳ ಬಗ್ಗೆ ತಿಳಿಯಲಿದೆ. ಒಮ್ಮೆ ಮಾತ್ರ ಬಂದು ಹೋಗಬೇಡಿ. ಪ್ರತಿವರ್ಷ ಬನ್ನಿ ಎಂದು ಅಸ್ಸಾಂ ಮತ್ತು ಮಹಾರಾಷ್ಟ್ರದ ಪ್ರವಾಸಿಗರಿಗೆ ಸಚಿವ ಆನಂದ್‌ ಸಿಂಗ್‌ ಅವರು ಆಹ್ವಾನ ನೀಡಿದರು.

ಪ್ರವಾಸಿ ಗೈಡ್‌ಗಳಿಗೆ ಗುರುತಿನ ಚೀಟಿ - ಆನಂದ್‌ಸಿಂಗ್‌

ಆಗ ಪ್ರವಾಸಿಗರು, ಹಂಪಿ ಸ್ಮಾರಕಗಳ ವೀಕ್ಷಣೆಗೆ ನಾವು ಕೂಡ ಖುಷಿಯಿಂದ ಬಂದಿದ್ದೇವೆ. ಗೈಡ್‌ಗಳನ್ನು ನೇಮಿಸಿಕೊಂಡಿದ್ದೇವೆ. ಆನೆಗೊಂದಿಯ ಅಂಜನಾದ್ರಿ ಪರ್ವತಕ್ಕೆ ಖಂಡಿತ ಭೇಟಿ ನೀಡುತ್ತೇವೆ ಎಂದು ಸಚಿವರಿಗೆ ಉತ್ತರಿಸಿದರು.
ಹಂಪಿ ಪ್ರವಾಸಿಗರಿಂದ ಫೀಡ್‌ಬ್ಯಾಕ್‌(Feedback) ಪಡೆದ ಸಚಿವರು, ಹಂಪಿ ಸೇರಿದಂತೆ ರಾಜ್ಯದ(Karnataka) ಪ್ರಮುಖ ಪ್ರವಾಸಿ ತಾಣಗಳಲ್ಲಿ ಸೌಲಭ್ಯಗಳನ್ನು ಒದಗಿಸಲು ಕ್ರಮವಹಿಸಲಾಗಿದೆ ಎಂದು ತಮ್ಮ ಜತೆಗಿದ್ದ ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ(Y Devendrappa) ಅವರಿಗೆ ಹೇಳಿದರು. ಆಗ ದೇವೇಂದ್ರಪ್ಪನವರು ನಿಮಗೆ ಯಾವ ಖಾತೆ ನೀಡಿದರೂ ನಿಭಾಯಿಸಬಲ್ಲಿರಿ ಎಂದು ಶಹಬ್ಬಾಸ್‌ಗಿರಿ ನೀಡಿದರು.

ವಿಜಯನಗರ(Vijayanagara) ಜಿಲ್ಲಾ ಉತ್ಸವ ನಡೆದ ಹಿನ್ನೆಲೆ ಈ ಬಾರಿ ಹಂಪಿ ಉತ್ಸವ(Hampi Utsav) ನಡೆಸಲು ವಿಜಯನಗರ ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ. ಉತ್ಸವ ನಡೆಸದಿದ್ದರೆ, ಸ್ಥಳೀಯ ಕಲಾವಿದರಿಗೆ ತೊಂದರೆಯಾಗಲಿದ್ದು, ಉತ್ಸವ ನಡೆಯಲಿ ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ.

ಬರಗಾಲ(Drought), ಉಪಚುನಾವಣೆ(Byelection) ಕೊರೋನಾ(Coronavirus) ನೆಪದಲ್ಲಿ ಕಳೆದ ಎರಡು ಮೂರು ವರ್ಷದಿಂದ ಸರಿಯಾಗಿ ಉತ್ಸವ ಮಾಡಿಲ್ಲ. ಈ ಸಲ ಸರ್ಕಾರ ಉತ್ಸವಕ್ಕಾಗಿ ಐದು ಕೋಟಿ ರು. ಮಂಜೂರು ಕೂಡ ಮಾಡಿದೆ. ಹಾಗಿದ್ದರೂ ಉತ್ಸವ ನಡೆಸಲು ಜಿಲ್ಲಾಡಳಿತ(District Administration)ಮೀನಮೇಷ ಎಣಿಸುತ್ತಿದೆ.
 

click me!