ಮಠಗಳ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ

By Kannadaprabha News  |  First Published Nov 10, 2021, 12:54 PM IST

*  ಹಾಳಕೆರೆ ಶ್ರೀಗಳ ಗುರುವಂದನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
*  ರೈತರ ಮಕ್ಕಳ ಸಮಗ್ರ ಅಭಿವೃದ್ಧಿಯೇ ಸರ್ಕಾರದ ಗುರಿ
*  ರೈತ ಮಹಿಳೆಯರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ 
 


ಗದಗ(ನ.10):  ರಾಜ್ಯದಲ್ಲಿ(Karnataka) ಹಲವಾರು ದಶಕಗಳಿಂದ ಅನ್ನ, ಅಕ್ಷರ, ಸಮಾಜದಲ್ಲಿ ಶಾಂತಿ ಹೀಗೆ ಸಮಾಜದ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿರುವ ಮಠಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. 

ಗಜೇಂದ್ರಗಡ ತಾಲೂಕಿನ ಹಾಲಕೆರೆ ಗ್ರಾಮದಲ್ಲಿ ಮಂಗಳವಾರ ಅಭಿನವ ಅನ್ನದಾನ ಶಿವಯೋಗಿಗಳವರ ಗುರುವಂದನೆ ಹಾಗೂ ಮುಪ್ಪಿನ ಬಸವಲಿಂಗ ದೇವರ ನಿರಂಜನ ಚರ ಪಟ್ಟಾಧಿಕಾರ ಮಹೋತ್ಸವದಲ್ಲಿ ಹಾಲಕೆರೆಯ ಬೆಳದಿಂಗಳು ಚಿತ್ರ ಸಂಪುಟವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

Tap to resize

Latest Videos

ನಾಡಿನಲ್ಲಿ ಈ ಹಿಂದೆ ಬರಗಾಲ ಸೇರಿದಂತೆ ಜನ ಸಂಕಷ್ಟಕ್ಕೆ ತುತ್ತಾದ ಸಂದರ್ಭದಲ್ಲಿ ಅನ್ನದಾಸೋಹದ ಮೂಲಕ ತೊಂದರೆಯಾದವರಿಗೆ ಆಸರೆಯಾಗಿ, ಸ್ವಾತಂತ್ರ್ಯಾ ನಂತರ ಶೈಕ್ಷಣಿಕವಾಗಿ ಹಿಂದುಳಿದ ಭಾಗದಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಪ್ರಾರಂಭಿಸಿ ಮಕ್ಕಳಿಗೆ ಶಿಕ್ಷಣ ದಾಸೋಹವನ್ನು ನೀಡಿದ ಕೀರ್ತಿಗೆ ನಮ್ಮ ಮಠಗಳು(Matha) ಪಾತ್ರವಾಗಿವೆ. ಅವುಗಳ ಸಾಲಿನಲ್ಲಿ ಹಾಲಕೆರೆ ಅನ್ನದಾನ ಮಠವೂ(Annadana Matha) ಮುಂಚೂಣಿಯಲ್ಲಿ ನಿಲ್ಲುತ್ತದೆ. ಈ ಮಠದೊಂದಿಗೆ ನಾನು ಮೊದಲ ಬಾರಿಗೆ ವಿಧಾನಪರಿಷತ್‌(Vidhan Parishat) ಸದಸ್ಯನಾದಾಗಿನಿಂದ ಇಲ್ಲಿಯ ವರೆಗೂ ನಿರಂತರ ಸಂಪರ್ಕದಲ್ಲಿದ್ದು, ಶ್ರೀಮಠದ ಆಶೀರ್ವಾದ ನನ್ನ ಮೇಲಿದೆ. ಆ ಭಾವನೆಯಿಂದಲೇ ಒತ್ತಡದ ಕಾರ್ಯದ ಮಧ್ಯೆಯೂ ನೇರವಾಗಿ ಇದೇ ಕಾರ್ಯಕ್ರಮಕ್ಕಾಗಿಯೇ ಆಗಮಿಸಿದ್ದೇನೆ ಎಂದರು.

Bagalkot| ಪಂಚ​ಮ​ಸಾಲಿ ಶ್ರೀಗಳ ಟ್ರಸ್ಟ್‌ ರಚನೆ: 3ನೇ ಪೀಠಕ್ಕೆ ಮುನ್ನುಡಿ?

ನಮ್ಮದು ಭಕ್ತಿ ಪ್ರಧಾನ ದೇಶವಾಗಿದ್ದು, ಇಲ್ಲಿ ನಡೆದಷ್ಟು ಭಕ್ತಿಯ ಚಳವಳಿ ಬೇರಾವ ದೇಶದಲ್ಲೂ ನಡೆದಿಲ್ಲ. ಆ ಭಕ್ತಿಯ ಆಧಾರದಲ್ಲಿಯೇ ನಮ್ಮಲ್ಲಿ ಇಂದಿಗೂ ಸುಸಂಸ್ಕೃತ ಹಾಗೂ ನೆಮ್ಮದಿಯಿಂದ ಎಲ್ಲರೂ ಬದುಕುವಂತಾಗಿದೆ. ಬದುಕಲು ವಿದ್ಯೆ, ಮುಕ್ತಿಗೆ ಧ್ಯಾನ ಇವೆರಡನ್ನೂ ಪರಿಗಣಿಸುವುದು ಕರ್ನಾಟಕ ಮಠಗಳ ಪರಂಪರೆಯಾಗಿದೆ ಎಂದು ತಮ್ಮ ಸುದೀರ್ಘ ಭಾಷಣದುದ್ದಕ್ಕೂ ಗುರುಪರಂಪರೆ, ಭಕ್ತಿಯ ಮಾರ್ಗ, ಶ್ರದ್ಧೆ ಕುರಿತು ಮಾತನಾಡಿದರು.
ಶ್ರೀಶೈಲ ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿದರು. ರೋಣ ಶಾಸಕ ಕಳಕಪ್ಪ ಬಂಡಿ(Kalakappa Bandi0 ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಾಡಿನ ವಿವಿಧ ಭಾಗಗಳಿಂದ ಭಕ್ತರು(Devotees) ಪಾಲ್ಗೊಂಡಿದ್ದರು.

ನೊಣವಿಕೆರೆ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶ್ರೀಗಳು, ಅಭಿನವ ಅನ್ನದಾನ ಶ್ರೀಗಳು, ಮುಪ್ಪಿನ ಬಸಲಿಂಗ ದೇವರು ಸೇರಿದಂತೆ ನಾಡಿನ 20ಕ್ಕೂ ಹೆಚ್ಚು ಮಠಾಧೀಶರು(Swamijis) ಪಾಲ್ಗೊಂಡಿದ್ದರು. ವಿಪ ಸಭಾಪತಿ ಬಸವರಾಜ ಹೊರಟ್ಟಿ(Basavarah Horatti), ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೊಳ(Govind Karjol), ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ(CC Patil), ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಜಿ.ಎಸ್‌. ಪಾಟೀಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ವಿಶೇಷ ಕಾರ್ಯಪಡೆ

ಈಗಾಗಲೇ ಘೋಷಣೆ ಮಾಡಿರುವ ‘ಕಿತ್ತೂರು ಕರ್ನಾಟಕ’(Kittur Karnataka) ಭಾಗದ ಸಮಗ್ರ ಅಭಿವೃದ್ಧಿಗೆ ವಿಶೇಷ ಕಾರ್ಯಪಡೆ(Special Task Force) ಹಾಗೂ ಪ್ಯಾಕೇಜ್‌(Package) ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಗಜೇಂದ್ರಗಡ ತಾಲೂಕಿನ ಹಾಳಕೇರಿ ಗ್ರಾಮದಲ್ಲಿ ಮಂಗಳವಾರ ಅಭಿನವ ಅನ್ನದಾನ ಶಿವಯೋಗಿಗಳ ಗುರುವಂದನೆ ಹಾಗೂ ಮುಪ್ಪಿನ ಬಸವಲಿಂಗ ದೇವರ ನಿರಂಜನ ಚರ ಪಟ್ಟಾಧಿಕಾರಿ ಕಾರ್ಯಕ್ರಮದಲ್ಲಿ ‘ಹಾಳಕೆರೆಯ ಬೆಳದಿಂಗಳು ಚಿತ್ರ ಸಂಪುಟ’ವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕನಕಗಿರಿ: ಸಚ್ಚಿದಾನಂದ ಅವಧೂತರ ದರ್ಶನ ಪಡೆದ ಬಾಬಾ ರಾಮದೇವ್‌

ಮಹಾರಾಷ್ಟ್ರ(Maharashtra) ಗಡಿ ವಿವಾದ(Border Dispute) ಇತ್ಯರ್ಥವಾಗಿದ್ದರೂ ಮಹಾರಾಷ್ಟ್ರದ ಜನರು ನಿತ್ಯವೂ ಅದನ್ನು ಕೆಣಕುತ್ತಲೇ ಇರುವ ಈ ಸಂದರ್ಭದಲ್ಲಿ ಈ ಭಾಗವನ್ನು ಮುಂಬೈ ಕರ್ನಾಟಕ(Mumbai Karnataka) ಎಂದು ಕರೆಯುವುದು ಸೂಕ್ತವಲ್ಲ ಎನ್ನುವ ಹಲವು ಹಿರಿಯರ ಮಹಾದಾಸೆಯಂತೆ ಕಿತ್ತೂರು ಕರ್ನಾಟಕ ಎಂದು ಹೆಸರು ಘೋಷಣೆ ಮಾಡಲಾಗಿದೆ. ನಮ್ಮ ಸರ್ಕಾರ ಈ ಹಿಂದೆ ಕಲ್ಯಾಣ ಕರ್ನಾಟಕ(Kalyana Karnataka) ಎಂದು ಹೈದರಾಬಾದ್‌ ಕರ್ನಾಟಕಕ್ಕೆ(Hyderabad Karnataka) ಘೋಷಿಸಿ ಅಲ್ಲಿನ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್‌ ನೀಡಿದಂತೆ, ಕಿತ್ತೂರು ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

ಮುಖ್ಯಮಂತ್ರಿಯಾದ ಒಂದು ಗಂಟೆಯಲ್ಲೇ ರೈತರ(Farmers) ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ(Higher Education)ವಿದ್ಯಾರ್ಥಿ ವೇತನ(Scholarship) ಮಂಜೂರು ಮಾಡಿದ್ದು, ಇದಕ್ಕಾಗಿ ಸಾವಿರ ಕೋಟಿ ರುಪಾಯಿ ಮೀಸಲಿಟ್ಟಿದ್ದೇನೆ. ಉತ್ತರ ಕರ್ನಾಟಕ(North Karnataka) ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಾವಿರಾರು ಕುಟುಂಬಗಳು ಇಂದಿಗೂ ಕೃಷಿಯನ್ನೇ ಕುಟುಂಬದ ಆದಾಯದ ಮೂಲವಾಗಿಸಿದ್ದು, ಈ ರೀತಿ ಕೃಷಿ ಕುಟುಂಬಗಳು ಹಾಗೂ ಕೃಷಿಯನ್ನೇ ನಂಬಿರುವ ರೈತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ನಮ್ಮ ಸರ್ಕಾರದ ಗುರಿ ಎಂದು ಹೇಳಿದರು.

ರಾಜ್ಯದ ತಲಾವಾರು ಆದಾಯ ಇಂದಿಗೂ ಶೇ. 35 ರಷ್ಟು ಜನರ ಆದಾಯದ ಆಧಾರದಲ್ಲೇ ನಿರ್ಧಾರವಾಗುತ್ತಿದ್ದು, ಅದರಲ್ಲಿಯೂ ಮುಖ್ಯವಾಗಿ ರೈತ ಮಹಿಳೆಯರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಗಮನ ನೀಡಿದೆ. ರೈತರ ಮನೆಯಲ್ಲಿ ಯಾರಾದರೊಬ್ಬರು ಕೃಷಿಯೊಂದಿಗೆ ಅನ್ಯ ಉದ್ಯೋಗ(Job) ಪಡೆದಲ್ಲಿ ಅವರು ಆರ್ಥಿಕವಾಗಿ ಚೇತರಿಕೆಯಾಗುವುದನ್ನು ನಾನು ಗಮನಿಸಿದ್ದು, ಅದಕ್ಕಾಗಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ವಿಶೇಷ ಗಮನ ನೀಡಲಾಗುತ್ತಿದೆ ಎಂದರು.
 

click me!