ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ಇಲಾಖೆ, ಅರ್ಜಿ ಸಲ್ಲಿಗೆ ಕೊನೆ ದಿನಾಂಕ ಯಾವಾಗ?

Published : Sep 07, 2026, 08:10 PM IST
Karnataka teachers recruitment

ಸಾರಾಂಶ

ಶಿಕ್ಷಕರ ನೇಮಕಾತಿಗೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್. ಶಾಲಾ ಶಿಕ್ಷಣ ಇಲಾಖೆ ಮಹತ್ವದ ಪ್ರಕಟಣೆ ಹೊರಡಿಸಿದೆ. ವಿವಿಧ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಜಿಲ್ಲಾ, ವಿಭಾಗವಾರು ಅಧಿಸೂಚನೆ ಹೊಡಿಸಲಾಗಿದೆ. ಅರ್ಜಿ ಸಲ್ಲಿಕೆ, ಶುಲ್ಕ ಪಾವತಿ ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು (ಸೆ.07) ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಅಧಿಸೂಚನೆ ಹೊರಡಿಸಿದೆ. ವಿವಿಧ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಜಿಲ್ಲಾವಾರು, ವಿಭಾಗವಾರು ಅಧಿಸೂಚನೆ ಹೊರಡಿಸಲಾಗಿದೆ. ವಿಶೇಷ ಅಂದರೆ ಈ ಹಿಂದಿನ ಅರ್ಜಿಗಳಲ್ಲಿನ ಮಾಹಿತಿಯನ್ನು ತಿದ್ದುಪಡಿ ಮಾಡಲು ಅಭ್ಯರ್ಥಿಗಳಿಗೆ ಎಡಿಟ್ ಅವಕಾಶವನ್ನು ನೀಡಲಾಗಿದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆ ಸಲ್ಲಿಕೆಗೆ ಸೂಚನೆ ನೀಡಲಾಗಿದೆ.

ಶಿಕ್ಷಕರ ನೇಮಕಾತಿ ಪ್ರಕ್ರಿಯೆ

ಶಿಕ್ಷಣ ಇಲಾಖೆ ಹೊರಡಿಸಿ ಅಧಿಸೂಚನೆಯಲ್ಲಿ PST ಸಾಮಾನ್ಯ ಶಿಕ್ಷಕ, 1ರಿಂದ 5ನೇ ತರಗತಿ ಹುದ್ದೆಗಳಿಗೆ ನೇಮಕಾತಿ, PE ಗ್ರೇಡ್–1, 1ರಿಂದ 8ನೇ ತರಗತಿ ಹುದ್ದೆಗಳ ನೇಮಕಾತಿಗೂ ಸೂಚನೆ ಹೊರಡಿಸಲಾಗಿದೆ. ಇನ್ನು GPT 6ರಿಂದ 8ನೇ ತರಗತಿ ಹಾಗೂ CST 1ರಿಂದ 8ನೇ ತರಗತಿ ಶಿಕ್ಷಕರ ಹುದ್ದೆಗಳ ನೇಮಕಾತಿಗೂ ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆಗಳಲ್ಲಿ II(a), II(b), III(a), III(b) ವರ್ಗಗಳಿಗೆ ಸೇರಿದ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ನಡೆಯಲಿದೆ. ಹೀಗಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆ ಸಲ್ಲಿಕೆಗೆ ಸೂಚನೆ ನೀಡಲಾಗಿದೆ.

ವಿವಾಹಿತ ಮಹಿಳೆ/ಪುರುಷ ಅಭ್ಯರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಆಯಾ ಜಿಲ್ಲೆವಾರುಸ ವಿಭಾಗವಾರು ಅಧಿಸೂಚನೆಗಳಲ್ಲಿ ಸೂಚಿಸಿರುವ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಹಿಂದಿನ ಅರ್ಜಿಗಳಲ್ಲಿನ ಮಾಹಿತಿಯನ್ನು ತಿದ್ದುಪಡಿ ಮಾಡಲು ಅಭ್ಯರ್ಥಿಗಳಿಗೆ Edit ಅವಕಾಶ ನೀಡಲಾಗಿದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಹೊಸದಾಗಿ Upload ಮಾಡಲು ಅವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಕೆಗೆ ಸೆ.25 ಕೊನೆಯ ದಿನಾಂಕ

ಆನ್‌ಲೈನ್ ಅರ್ಜಿಯಲ್ಲಿ ಎಡಿಟ್ ಹಾಗೂ ದಾಖಲೆ ಅಪ್ಲೋಡ್ ಮಾಡಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 25,2026 ಕೊನೆಯ ದಿನಾಂಕವಾಗಿದೆ. ಶುಲ್ಕ ಪಾವತಿ, ದಾಖಲೆ ಪರಿಶೀಲನೆ, ಸಲ್ಲಿಕೆಗೆ ಕೊನೆಯ ದಿನಾಂಕ ಸೆಪ್ಟೆಂಬರ್ 28, 2026.

ಎಡಿಟ್ ಆಯ್ಕೆ ಬಳಸಿಕೊಂಡು ಅಗತ್ಯ ದಾಖಲೆ ಅಪ್ಲೋಡ್ ಮಾಡುವಂತೆ ಅಭ್ಯರ್ಥಿಗಳಿಗೆ ಶಿಕ್ಷಣ ಇಲಾಖೆ ತನ್ನ ಅಧಿಸೂಚನೆಯಲ್ಲಿ ಹೇಳಿದೆ. ಸೆಪ್ಟೆಂಬರ್ 25ರೊಳಗೆ ಅರ್ಜಿ ಸಲ್ಲಿಸಬೇಕು. ಅವಧಿ ಮೀರಿದರೆ ಅರ್ಜಿ ಪರಿಗಣಿಸುವುದಿಲ್ಲ ಎಂದು ಇಲಾಖೆ ಹೇಳಿದೆ. ಅರ್ಜಿ ಸಲ್ಲಿಕೆ ಹಾಗೂ ಇತರ ಮಾಹಿತಿಗಾಗಿ ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಅಧಿಸೂಚನೆ ಪರಿಶೀಲಿಸುವಂತೆ ಶಿಕ್ಷಣ ಇಲಾಖೆ ಹೇಳಿದೆ.

PREV
Read more Articles on
click me!

Recommended Stories

ತೀವ್ರ ಬಿಸಿಲಿನಿಂದ ಬೆಂಗಳೂರು ಸೇರಿ ರಾಜ್ಯದಲ್ಲಿ 5 ಡಿಗ್ರಿ ತಾಪಮಾನ ಏರಿಕೆ, ಮುಂದಿನ ವಾರ 37° ಡಿಗ್ರಿ
​Karnataka school: ಮಕ್ಕಳೋ ಅಥವಾ ಕೊಟ್ಟಿಗೆಯ ದನಗಳೋ? ಹಾಸನದ ವಸತಿ ಶಾಲೆಯ ಕರಾಳ ಮುಖ ಬಯಲು