Farmers: ಕಣ್ಣಾಲಿ ಒದ್ದೆಯಾಗಿಸಿದ ಹೋರಾಟದ ದೃಶ್ಯ; ನಡು ಬೀದಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ರೈತರು, ವೈರಲ್‌ ಆದ ವಿಡಿಯೋ!

Published : Oct 17, 2026, 08:50 PM IST
Farmers

ಸಾರಾಂಶ

ಕಬ್ಬು ಬೆಳೆಗಾರರು ತಮ್ಮ ನ್ಯಾಯಯುತ ಹಕ್ಕುಗಳಿಗಾಗಿ ನಡೆಸುತ್ತಿರುವ ಪಾದಯಾತ್ರೆಯಲ್ಲಿ ರೈತರೊಬ್ಬರು ನಡುಬೀದಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಕರುಣಾಜನಕ ದೃಶ್ಯ ವೈರಲ್ ಆಗಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ವಿಆರ್‍‌ ಫಾರ್ಮ್ಸ್ ಫಸ್ಟಲೀ ಆಂಡ್‌ ಲಾಸ್ಟಲೀ ಎನ್ನುವ ದಾಟಿಯಲ್ಲಿ ಕಬ್ಬು ಬೆಳೆಗಾರರ ಹೋರಾಟ ಮುನ್ನಡೆಯುತ್ತಿದೆ. ಅಲ್ಲಿ ನೋವು, ಆಕ್ರೋಶ, ಹತಾಶೆ, ಅಸಾಯಕತೆ ಒಂದೇ ಬಾರಿ ಸ್ಪೋಟಗೊಂಡರೆ ಹೇಗೆ ಇರುತ್ತದೆ ಹೇಳಿ, ಆದರೆ ಈ ಹಂತ ತಲುಪುವ ಹಂತಕ್ಕೆ ರೈತರು ದೂರವಿಲ್ಲ. ಆದರೆ ಸರ್ಕಾರಗಳು ಎಚ್ಚರಗೊಳ್ಳಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ವೈರಲ್‌ ಆದ ಒಂದು ಪೋಟೋ ಅನ್ನದಾತನ, ಹಸಿವು, ಅಸಹಾಯಕತೆ ಮತ್ತು ಹತಾಶೆ ಎದ್ದು ಕಾಣಿಸುತ್ತದೆ, ಎಂಥವರ ಕಣ್ಣನ್ನು ಒದ್ದೆಗೊಳಿಸುತ್ತದೆ.

ಎದೆ ತಟ್ಟುವ ಕರುಣಾಜನಕ ದೃಶ್ಯ!

ರೈತ ಎಂದರೆ, ಕಿಡ್ನಿ, ಜಠರ, ಮತ್ತೊಂದು, ಮಗದೊಂದು ಎಂದು ಎಲ್ಲರನ್ನೂ ಉಬ್ಬಿಸಿಟ್ಟಾರ ಹೊರತೂ, ಅವರಿಗರ ಏನು ಬೇಕು ಎಂದು ಯಾರು ಕೇಳಲಿಲ್ಲ, ಆದ್ದರಿಂದಲೇ, ಇಂದು ಬೀದಿಗೆ ಇಳಿದಿದ್ದಾರೆ. ಕಬ್ಬು ಬೆಳೆಗಾರರ ನ್ಯಾಯಯುತ ಹಕ್ಕುಗಳಿಗಾಗಿ ಹಗಲಿರುಳು ರಸ್ತೆಯಲ್ಲೇ ಪಾದಯಾತ್ರೆ ನಡೆಸುತ್ತಿರುವ ರೈತರ ನೋವು ಈ ಚಿತ್ರದಲ್ಲಿ ಎದ್ದು ಕಾಣುತ್ತಿದೆ. ಹೋರಾಟದ ತೀವ್ರತೆಗೆ ಮನನೊಂದು ರೈತರೊಬ್ಬರು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕುತ್ತಿರುವ ಅತ್ಯಂತ ಕರುಣಾಜನಕ ದೃಶ್ಯ.

ಭುಜಕೊಟ್ಟು ಸಾಂತ್ವನ ಹೇಳಿದ ರೈತ ಬಂಧುಗಳು!

ಕಣ್ಣೀರಾದ ರೈತನನ್ನು ಚೂನಪ್ಪ ಪೂಜಾರಿ ಭುಜದ ಮೇಲೆ ತಲೆ ಇಟ್ಟುಕೊಂಡು ತಬ್ಬಿ ಸಾಂತ್ವನ ಹೇಳುತ್ತಿದ್ದರೆ, ಸುತ್ತಲೂ ನೆರೆದಿರುವ ಸಹೋದರ ರೈತರ ಕಣ್ಣುಗಳೂ ಕೂಡ ಒದ್ದೆಯಾಗಿವೆ. ಕಣ್ಣಲ್ಲಿ ನೀರಿದ್ದರೂ ಕೈಯಲ್ಲಿ ಹಸಿರು ಶಾಲುಗಳನ್ನು ಬೀಸುತ್ತಾ, ನಮ್ಮ ಪ್ರಾಣ ಹೋದರೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂಬ ಛಲ ನೆರೆದಿದ್ದ ರೈತರ ಮುಖದಲ್ಲಿ ಎದ್ದುಕಾಣುತ್ತಿತ್ತು. ಚಿತ್ರದಲ್ಲಿರುವ "ಪಾದಯಾತ್ರೆಯಲ್ಲಿ ಕಣ್ಣೀರು ಹಾಕಿದ ರೈತರು" ಎಂಬ ಸಾಲುಗಳು, ಈ ಪ್ರತಿಭಟನೆ ಕೇವಲ ಹಠದ್ದಲ್ಲ, ಬದಲಿಗೆ ಹೊಟ್ಟೆಪಾಡಿಗಾಗಿ ಬಿಸಿಲು-ಮಳೆ ಲೆಕ್ಕಿಸದೆ ನಡೆಸುತ್ತಿರುವ ಜೀವನ್ಮರಣದ ಹೋರಾಟ ಎಂಬುದನ್ನು ಬಿಂಬಿಸುತ್ತವೆ.

ಸರ್ಕಾರಗಳಿಗೆ ನೇರ ಎಚ್ಚರಿಕೆ!

ಈ ಕಣ್ಣೀರಿನ ದೃಶ್ಯ ಕೇವಲ ರೈತರ ನೋವನ್ನಷ್ಟೇ ತೋರಿಸುತ್ತಿಲ್ಲ, ಬದಲಿಗೆ ಅನ್ನದಾತನನ್ನು ಬೀದಿಗೆ ತಂದು ನಿಲ್ಲಿಸಿರುವ ಇಡೀ ವ್ಯವಸ್ಥೆ ಹಾಗೂ ಸರ್ಕಾರದ ವಿರುದ್ಧದ ತೀವ್ರ ಆಕ್ರೋಶ ಜಾಗೃತಗೊಳಿಸುವಂತಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗದೆ, ಸಾಲದ ಸುಳಿಗೆ ಸಿಲುಕಿ ದೇಶಕ್ಕೆ ಅನ್ನ ನೀಡುವ ಅನ್ನದಾತನೇ ಇಂದು ಬೀದಿಯಲ್ಲಿ ನಿಂತು ಕಣ್ಣೀರು ಹಾಕುವಂತಾಗಿರುವ ಅಸಹಾಯಕ ಪರಿಸ್ಥಿತಿ ಈ ದೃಶ್ಯವು ಎದೆಗೊಡುವಂತೆ ನೆನಪಿಸುತ್ತಿದೆ. ಸೋತು ಕಣ್ಣೀರಿಟ್ಟ ರೈತನಿಗೆಧೈರ್ಯ ತುಂಬುತ್ತಿರುವ ಈ ಚಿತ್ರ, ಹೋರಾಟದ ಹಾದಿಯಲ್ಲಿ ಒಬ್ಬ ರೈತ ಕಣ್ಣೀರು ಹಾಕಿದರೂ, ಇಡೀ ರೈತ ಸಮುದಾಯವೇ ಅವನ ಬೆನ್ನಿಗೆ ಕಾವಲಾಗಿ ನಿಲ್ಲುತ್ತದೆ ಎಂಬ ಒಗ್ಗಟ್ಟಿನ ಮಹಾನ್ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾರುತ್ತಿದೆ.

ರೈತರನ್ನು ಬೀದಿಗೆ ತಂದು ನಿಲ್ಲಿಸಿದ ವ್ಯವಸ್ಥೆ!

ಹೌದು, ರೈತರನ್ನು ಇವತ್ತು ರಸ್ತೆಗೆ ತಂದು ನಿಲ್ಲಿಸಿದ ವ್ಯವಸ್ಥೆ ತನ್ನನ್ನು ತಾನೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವರ ಹಿತ ಕಾಪಾಡಿದ್ದೇ ಆದರೆ, ರೈತರು ಇವತ್ತು ಬೀದಿಗಳಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತಾ ಎನ್ನುವುದನ್ನು. ಆದ್ದರಿಂದ ಇನ್ನಾದರೂ ಅವರ ಅವರ ಹೋರಾಟಕ್ಕೆ ನ್ಯಾಯಯುತ ಹೋರಾಟ ಸಿಗುತ್ತಾಎನ್ನುವುದನ್ನು ಕಾದು ನೋಡಬೇಕಿದೆ.

PREV
Read more Articles on
click me!

Recommended Stories

ಎರಡು ಕಾರಣಕ್ಕೆ ಬೆಂಗಳೂರಿನ IND vs WI ಪಂದ್ಯಕ್ಕೆ ಕಾದು ಕುಳಿತ ಆರ್‌ಸಿಬಿ ಫ್ಯಾನ್ಸ್, ಮಳೆಯಿಂದ ನಿರಾಸೆ
ಸಿಜೆಪಿ ಮಕ್ಕಳ ಬಿಡಿಸಲು ಲಾಯರ್ ಫೀಸ್ ಕೊಟ್ಟರೆ ಫಂಡಿಂಗಾ? HDK ಆರೋಪಕ್ಕೆ ಬಿಕೆ ಹರಿಪ್ರಸಾದ್ ತಿರುಗೇಟು