9 IAS-KAS ಅಧಿಕಾರಿಗಳ ದಿಢೀರ್ ಟ್ರಾನ್ಸ್ಫರ್; ಯಾರಿಗೆ ಯಾವ ಹುದ್ದೆ? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್

Published : Oct 17, 2026, 07:35 PM IST
IAS_IPS

ಸಾರಾಂಶ

ರಾಜ್ಯ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ 9 ಹಿರಿಯ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಭಾರಿ ಆಡಳಿತಾತ್ಮಕ ಸರ್ಜರಿಯಲ್ಲಿ ಹಲವು ಅಧಿಕಾರಿಗಳಿಗೆ ಹೊಸ ಜವಾಬ್ದಾರಿಗಳನ್ನು ನೀಡಲಾಗಿದೆ.

ರಾಜ್ಯ ಸರ್ಕಾರದಿಂದ ಶನಿವಾರದ ಭಾರಿ ಆಡಳಿತಾತ್ಮಕ ಸರ್ಜರಿಯಾಗಿದೆ. ಕರ್ನಾಟಕದ 9 ಹಿರಿಯ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಹಾಗೂ ಹೊಸ ಹುದ್ದೆಗಳಿಗೆ ನಿಯೋಜಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ವರ್ಗಾವಣೆ ಆದವರು ಯಾರು?

ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಅಕ್ಟೋಬರ್ 17, 2026 ರಂದು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ 9 ಪ್ರಮುಖ ಅಧಿಕಾರಿಗಳ ವರ್ಗಾವಣೆ ಮತ್ತು ಸ್ಥಳನಿಯುಕ್ತಿ ಮಾಡಿದೆ. ಹುದ್ದೆಯ ನಿರೀಕ್ಷೆಯಲ್ಲಿದ್ದ ಶ್ರೀ ಕೃಷ್ಣ ಬಾಜಪೇಯಿ ಅವರನ್ನು ಕರ್ನಾಟಕ ಅಪೀಲು ನ್ಯಾಯಮಂಡಳಿಯ ಸದಸ್ಯರನ್ನಾಗಿ ನೇಮಿಸಲಾಗಿದ್ದು, ಇವರನ್ನು ಭಾರತಿ ಡಿ. ಅವರಿಗೆ ನೀಡಲಾಗಿದ್ದ ಹೆಚ್ಚುವರಿ ಜವಾಬ್ದಾರಿ ಮುಕ್ತಾಯಗೊಳಿಸಲಾಗಿದೆ.

ಲತಾ ಆರ್. ಅವರಿಗೆ ಹೊಸ ಜವಾಬ್ದಾರಿ!

ಬೆಂಗಳೂರು ಉತ್ತರ ನಗರ ನಿಗಮದ ಅಪರ ಕಮಿಷನರ್ ಆಗಿದ್ದ ಲತಾ ಆರ್. ಅವರನ್ನು ಕರ್ನಾಟಕ ವಸತಿ ಮಂಡಳಿಯ ನೂತನ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ. ಅಲ್ಲದೇ ಪೋಸ್ಟಿಂಗ್‌ಗಾಗಿ ಕಾಯುತ್ತಿದ್ದ ಅರ್ಚನಾ ಎಂ.ಎಸ್. ಅವರನ್ನು ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಿ, ಬಸವರಾಜು ಅವರನ್ನು ವರ್ಗಾಯಿಸಲಾಗಿದೆ.

ದಯಾನಂದ ಕೆ.ಎ. ವರ್ಗಾವಣೆ!

ಕರ್ನಾಟಕ ವಸತಿ ಮಂಡಳಿಯ ಕಮಿಷನರ್ ಆಗಿದ್ದ ದಯಾನಂದ ಕೆ.ಎ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಮಿಷನರ್ ಹುದ್ದೆಗೆ ವರ್ಗಾಯಿಸಲಾಗಿದೆ. ಹುದ್ದೆಗಾಗಿ ಕಾಯುತ್ತಿದ್ದ ವೆಂಕಟ್ ರಾಜಾ ಅವರನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನಿಯೋಜಿಸಿ, ಬಸವರಾಜು ಎ.ಬಿ. ಅವರನ್ನು ಹೆಚ್ಚುವರಿ ಪ್ರಭಾರದಿಂದ ಮುಕ್ತಗೊಳಿಸಲಾಗಿದೆ.

ವೆಂಕಟೇಶ್ ಟಿ. ಗೆ ತೋಟಗಾರಿಕೆ ಇಲಾಖೆ!

ಪೋಸ್ಟಿಂಗ್ ನಿರೀಕ್ಷೆಯಲ್ಲಿದ್ದ ವೆಂಕಟೇಶ್ ಟಿ. ಅವರನ್ನು ತೋಟಗಾರಿಕೆ ಇಲಾಖೆ ಮತ್ತು ರಾಷ್ಟ್ರೀಯ ತೋಟಗಾರಿಕಾ ಮಿಷನ್‌ನ ನೂತನ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ತೋಟಗಾರಿಕೆ ಇಲಾಖೆಯ ನಿರ್ದೇಶಕರಾಗಿದ್ದ ಇಬ್ರಾಹಿಂ ಮೈಗೂರ್ ಅವರನ್ನು ಕಬ್ಬು ಅಭಿವೃದ್ಧಿ ಕಮಿಷನರ್ ಮತ್ತು ಸಕ್ಕರೆ ನಿರ್ದೇಶಕರ ಖಾಲಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಹುದ್ದೆಯ ನಿರೀಕ್ಷೆಯಲ್ಲಿದ್ದ ಮೋನಾ ರೋತ್ ಅವರನ್ನು ಶ್ರೀಮತಿ ಲತಾ ಆರ್. ಅವರ ವರ್ಗಾವಣೆಯಿಂದ ತೆರವಾಗಿದ್ದ ಬೆಂಗಳೂರು ಉತ್ತರ ನಗರ ನಿಗಮದ ಅಪರ ಕಮಿಷನರ್ (ಅಭಿವೃದ್ಧಿ) ಹುದ್ದೆಗೆ ನಿಯೋಜಿಸಲಾಗಿದೆ.

ಸಯೀದಾ ಆಯಿಷಾ ವರ್ಗಾವಣೆಗೆ ಇಸಿಐ ಷರತ್ತು!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಸಯೀದಾ ಆಯಿಷಾ ಅವರನ್ನು ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಎಂಡಿ ಆಗಿ ವರ್ಗಾಯಿಸಲಾಗಿದ್ದು, ಸದ್ಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಈ ಆದೇಶವು ಭಾರತೀಯ ಚುನಾವಣಾ ಆಯೋಗದ ಅನುಮೋದನೆಗೆ ಒಳಪಟ್ಟಿರುತ್ತದೆ. ಕರ್ನಾಟಕ ಅಪೀಲು ನ್ಯಾಯಮಂಡಳಿ ಸದಸ್ಯ ಹುದ್ದೆಯನ್ನು ಸರ್ಕಾರದ ಕಾರ್ಯದರ್ಶಿ ದರ್ಜೆಗೆ ಹಾಗೂ ಕೈಮಗ್ಗ ನಿಗಮದ ಎಂಡಿ, ಸಕ್ಕರೆ ನಿರ್ದೇಶಕರು ಮತ್ತು ಬೆಂಗಳೂರು ಉತ್ತರ ನಿಗಮದ ಅಪರ ಕಮಿಷನರ್ ಹುದ್ದೆಗಳನ್ನು ಮುನ್ಸಿಪಲ್ ಆಡಳಿತ ನಿರ್ದೇಶಕರ ದರ್ಜೆಗೆ ಸಮಾನ ಎಂದು ಈ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

PREV
Read more Articles on
click me!

Recommended Stories

ಕುಮಾರಸ್ವಾಮಿ ಹೋರಾಟದಿಂದ ಸಂಕಷ್ಟಕ್ಕೆ ಸಿಲುಕಿದ ಸರ್ಕಾರ, ಡಿಜಿ ಕಚೇರಿ ಮುಂದೆ ಭಾರಿ ಪ್ರತಿಭಟನೆ
ಜಾಗದ ಮಾಲೀಕರಿಗೆ ಬಿಗ್ ರಿಲೀಫ್, ಇ-ಆಸ್ತಿ 2.0 ಜಾರಿ, ಆಸ್ತಿ ವಿಂಗಡಣೆ ಮತ್ತು ಲೇಔಟ್ ನಿಯಮ ಸರಳ