ರಾಜ್ಯದಲ್ಲೇ ಮೊದಲು, ಉಡುಪಿಯಲ್ಲಿ ಸ್ಮಾರ್ಟ್ ಕಮಾಂಡ್ ಸೆಂಟರ್ ‘ದೃಷ್ಟಿ’ ಆರಂಭ

Published : Nov 25, 2026, 01:05 PM IST
Command Center Drishti udupi

ಸಾರಾಂಶ

ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ರಾಜ್ಯದ ಪ್ರಥಮ 24 * 7 ಸ್ಮಾರ್ಟ್ ಅಂಡ್ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ 'ದೃಷ್ಟಿ' ಕಾರ್ಯಾರಂಭಿಸಿದೆ. ರಸ್ತೆ ಸುರಕ್ಷತೆ ಮತ್ತು ಅಪರಾಧ ಪತ್ತೆಗಾಗಿ ಉನ್ನತ ತಂತ್ರಜ್ಞಾನದ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದು ವಾಹನಗಳ ಸಂಚಾರ ಇತಿಹಾಸ ಮತ್ತು ನಿಯಮ ಉಲ್ಲಂಘನೆಯನ್ನು ದಾಖಲಿಸುತ್ತದೆ.

ಉಡುಪಿ: ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಿರ್ಮಿಸಲಾಗಿರುವ ರಾಜ್ಯದ ಪ್ರಥಮ 24 * 7 ಸ್ಮಾರ್ಟ್ ಅಂಡ್ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ - ‘ದೃಷ್ಟಿ’ ಕಮಾಂಡ್ ಸೆಂಟರ್ ಕಾರ್ಯಾಂಭಿಸಿದ್ದು, ಅದನ್ನು ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಮಂಗಳವಾರ ವೀಕ್ಷಿಸಿದರು.

ಉಡುಪಿಯಲ್ಲಿ ರಾಜ್ಯದ ಪ್ರಥಮ ಸ್ಮಾರ್ಟ್ ಟ್ರಾಫಿಕ್ ಸಿಸ್ಟಂ

ಈ ಸಂದರ್ಭ ಮಾತನಾಡಿದ ಅವರು, ಇಡೀ ಜಿಲ್ಲೆಯ ಕಾನೂನು ಸುವ್ಯವಸ್ಥೆ ನಿರ್ವಹಣೆ ಮತ್ತು ಅಪರಾಧ ಪತ್ತೆ ಮಾಡುವ ಸಲುವಾಗಿ ಈ ಇಂಟಗ್ರೆಟೆಡ್ ಕಂಟ್ರೋಲ್ ಸೆಂಟರನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರಲ್ಲಿ ಉನ್ನತ ತಂತ್ರಜ್ಞಾನವನ್ನು ಬಳಸಲಾಗಿದೆ. ಅದರಲ್ಲಿ ಜಿಲ್ಲೆಯ ಪ್ರತೀ ಪಂಚಾಯತ್‌ಗಳ ಪ್ರಮುಖ ಜಂಕ್ಷನ್‌ಗಳು, ಸರ್ಕಲ್‌ಗಳು, ಸೂಕ್ಷ್ಮ ಪ್ರದೇಶಗಳಲ್ಲಿಯೂ ನಿಗಾ ವಹಿಸಲು ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚನೆ ನೀಡಿದ್ದೇನೆ. ಜಿಲ್ಲಾಧಿಕಾರಿ, ಜಿಪಂ ಸಿಇಒ ಮತ್ತು ಪೊಲೀಸ್ ವರಿಷ್ಠಾಧಿಕಾರಿಯವರು ಸಮನ್ವಯ ಯೋಜನೆ ರೂಪಿಸುವಂತೆ ತಿಳಿಸಿದ್ದೇನೆ ಎಂದರು.

ಸ್ಮಾರ್ಟ್ ಅಂಡ್ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ ಕಾರ್ಯಾರಂಭ

ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಇಂತಹ ಉನ್ನತ ತಂತ್ರಜ್ಞಾನದ ಕಮಾಂಡ್ ಸೆಂಟರ್ ಸ್ಥಾಪನೆ ಮಾಡಿದೆ ಎಂಬ ಹೆಮ್ಮೆಯಿದೆ. ಮುಂದೆ ಜಿಲ್ಲೆಯ ಕಾನೂನು ಸುವ್ಯವಸ್ಥೆ ನಿರ್ವಹಣೆ ಮತ್ತು ಅಪರಾಧ ಪತ್ತೆಗೆ ಎಲ್ಲವೂ ಇಲ್ಲಿಂದಲೇ ಮೇಲ್ವಿಚಾರಣೆಯಾಗಬೇಕು ಎಂದರು.

ಕರಾವಳಿ ಅಭಿವೃದ್ಧಿಯ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಪಂ ಸಿಇಓ ಪ್ರತೀಕ್ ಬಾಯಲ್, ಎಸ್ಪಿ ಹರಿರಾಮ್ ಶಂಕರ್, ಮುಖಂಡರಾದ ವಿನಯಕುಮಾರ್ ಸೊರಕೆ ಮತ್ತಿತರರಿದ್ದರು.

ರಾಜ್ಯದ ಪ್ರಥಮ ಸೆಂಟರ್

ಉಡುಪಿ ಜಿಲ್ಲೆಯಲ್ಲಿ 2025ರಲ್ಲಿ 266 ಮತ್ತು 2026ರಲ್ಲಿ 224 ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆ ನಿಯಮ ಪಾಲನೆ ಮತ್ತು ಸುರಕ್ಷತೆಗಾಗಿಯೇ ಸುಮಾರು 8 ಕೋಟಿ ರು. ವೆಚ್ಚದಲ್ಲಿ ಈ ದೃಷ್ಟಿ ಯೋಜನೆ ಸಿದ್ಧಗೊಳ್ಳುತ್ತಿದೆ. ಜಿಲ್ಲೆಯ ಗಡಿಭಾಗ ಮತ್ತು ಪ್ರಮುಖ ಜಂಕ್ಷನ್ ಗಳಲ್ಲಿ ಈಗಾಗಲೇ 200 ಹೈ ರೆಸಲ್ಯೂಷನ್ ಕ್ಯಾಮರಗಳನ್ನು ಅಳವಡಿಸಲಾಗಿದೆ, ಇನ್ನೂ 200 ಕ್ಯಾಮರ ಅಳ‍‍ವಡಿಕೆಗೆ ಸ್ಥಳ ಗುರುತಿಸಲಾಗುತ್ತಿದೆ.

ಜಿಲ್ಲೆಯ 8 ಆಯಕಟ್ಟಿನ ಜಂಕ್ಷನ್‌ಗಳಲ್ಲಿ 32 ಅತ್ಯಾಧುನಿಕ ಕ್ಯಾಮರಗಳನ್ನು ಸುಮಾರು 1.45 ಕೋಟಿ ರು. ವೆಚ್ಚದಲ್ಲಿ ಅಳ‍ವಡಿಸಲಾಗಿದೆ. ಜಿಲ್ಲೆಯ 6 ಪ್ರಮುಖ ರಸ್ತೆಗಳಲ್ಲಿ ವಾಹನಗಳ ವೇಗ ಮತ್ತು ನಂಬರ್ ಪ್ಲೇಟ್ ದಾಖಲಿಸುವ 60 ಲಕ್ಷ ರು. ವೆಚ್ಚದಲ್ಲಿ ಸ್ವೀಡ್ ರಾಡಾರ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಈ ಎಲ್ಲಾ ಕ್ಯಾಮರಗಳು ಎಲ್ಲಾ ಬಗೆಯ ರಸ್ತೆ ನಿಯಮ ಉಲ್ಲಂಘನೆಯನ್ನು ತಕ್ಷಣ ಗುರುಸಿ, ಕಮಾಂಡ್ ಸೆಂಟರ್ ಮೂಲಕ ವಾಹನ ಮಾಲಕರಿಗೆ ಫೋಟೋ ಸಹಿತ ನೊಟೀಸ್ ಜಾರಿಗೊಳಿಸುತ್ತವೆ.

ಈ ಕಮಾಂಡ್ ಸೆಂಟರ್‌ನಲ್ಲಿ ಜಿಲ್ಲೆಯಲ್ಲಿ ಓಡಾಡುವ ಎಲ್ಲ ವಾಹನಗಳ‍ ಸಂಚಾರ ಇತಿಹಾಸವನ್ನು ದಾಖಲಿಸಿಕೊಳ್ಳುತ್ತವೆ, ವಾಹನ ಎಲ್ಲಿದೆ, ಎಷ್ಟು ಬಾರಿ ಒಂದು ರಸ್ತೆಯಲ್ಲಿ ಸಂಚರಿಸಿದೆ, ಯಾವೆಲ್ಲಾ ನಿಯಮಗಳನ್ನು ಉಲ್ಲಂಘಿಸಿದೆ ಇತ್ಯಾದಿ ವಿವರಗಳು ದಾಖಲಾಗುತ್ತವೆ.

PREV
Read more Articles on
click me!

Recommended Stories

ಮೂಡಿಗೆರೆ ಕಡೆಗೆ ಓಡಿಸುತ್ತಿದ್ದ ಕಾಡಾನೆಗಳು ದಿಢೀರ್ ಯು-ಟರ್ನ್; ಮತ್ತೆ ಬೇಲೂರಿನಲ್ಲಿ ಅತಂಕ ಶುರು!
ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿಗೆ ಸ್ಯಾಂಡಲ್‌ವುಡ್ ಸಾಥ್: ಸಚಿವ ಖಾದರ್ ಮುಂದೆ ಬೇಡಿಕೆ ಸಲ್ಲಿಸಿದ ನಟಿ ಕಾರುಣ್ಯ ರಾಮ್!