ಬೆಂಗಳೂರು: ಒಂದೇ ಸ್ಥಳದಲ್ಲಿ 10 ರಾಜ್ಯಗಳ 21 ಭಾಷಿಕರಿಂದ ಕರ್ನಾಟಕ ರಾಜ್ಯೋತ್ಸವ

By Kannadaprabha NewsFirst Published Nov 2, 2022, 10:00 AM IST
Highlights

ಕನ್ನಡ ಭಾಷೆಯ ಬಗ್ಗೆ ಅಭಿಮಾನವಿಟ್ಟು ಎಲ್ಲಾ ಜನರು ಒಟ್ಟಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟ ದೇಶದ 10 ರಾಜ್ಯಗಳ 21 ಭಾಷೆಗಳ ಜನರು 

ಬೆಂಗಳೂರು(ನ.02): ಪೂರ್ವ ವೆನೀಝೀಯಾ ಅಪಾರ್ಟ್‌ಮೆಂಟ್‌ನಲ್ಲಿ ಕನ್ನಡ ಸಂಘ ಮತ್ತು ಕನ್ನಡೇತರರ ಚಂದನವನ ಬಳಗದಿಂದ 67ನೇ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಿ ಕನ್ನಡ ಅಭಿಮಾನವನ್ನು ತೋರಿಸಿಕೊಟ್ಟರು.

ದೇಶದ 10 ರಾಜ್ಯಗಳ 21 ಭಾಷೆಗಳ ಜನರು ಕನ್ನಡ ಭಾಷೆಯ ಬಗ್ಗೆ ಅಭಿಮಾನವಿಟ್ಟು ಎಲ್ಲಾ ಜನರು ಒಟ್ಟಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಬೇರೆ ಭಾಷೆಗಳ ಜನರು ಕನ್ನಡದ ಹಾಡು ನೃತ್ಯ, ನಾಟಕವನ್ನು ಪ್ರದರ್ಶಿಸಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದು ವಿಶೇಷವಾಗಿತ್ತು.

ಕರ್ನಾಟಕ ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಶುಭಕೋರಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್!

ಅದಮ್ಯ ಚೇತನ ಟ್ರಸ್ಟ್‌ ಸಂಸ್ಥಾಪಕಿ ಡಾ. ತೇಜಸ್ವಿನಿ ಅನಂತಕುಮಾರ್‌ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು. ಬಿಡಿಎ ಅಧ್ಯಕ್ಷ ಮತ್ತು ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.
ಪೂರ್ವ ವೆನೀಝಿಯಾ ನಿವಾಸಿಗಳ ಸಂಘಧ ಆಧ್ಯಕ್ಷ ವಿಶಾಲ್‌ ಗೋಖಲೆ, ಮುಕುಲ್‌ ಪಾಂಡುರಂಗಿ, ಸಾಮಾಜಿಕ ಕಾರ್ಯಕರ್ತ ವಿಶ್ವನಾಥ್‌, ಚಂದನವನ ಬಳಗದ ಶಿವಾ ವೈದ್ಯಮಠ, ಮಹೇಶ್‌, ಪ್ರಮೋದ್‌ ಕಡಕೋಳ್‌, ಸುಂದರೇಶ್‌, ನಮಿತಾ, ಅನಿತಾ, ವೇದಿಕಾ, ಮಮತಾ ಇದ್ದರು.
 

click me!