ಮಳೆ ಕೊರತೆ ಉಡುಪಿಗೆ ಇನ್ನು ಐದು ದಿನಗಳಿಗೊಮ್ಮೆ ನೀರು ಪೂರೈಕೆ!

By Kannadaprabha News  |  First Published Jun 9, 2023, 4:29 AM IST

ಕರಾವಳಿಯಲ್ಲಿ ಮುಂಗಾರು ಮಳೆ ದೂರ ಹಿನ್ನೆಲೆಯಲ್ಲಿ ನೀರಿನ ಅಭಾವ ಹಾಗೆಯೇ ಮುಂದುವರಿದಿದೆ. ಇನ್ನೂ ಮಳೆಗಾಲ ಆರಂಭವಾಗಿರದೆ ಇರುವುದರಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಲ್ಬಣವಾಗಿದೆ.


ಮಂಗಳೂರು/ಉಡುಪಿ (ಜೂ.9) ಕರಾವಳಿಯಲ್ಲಿ ಮುಂಗಾರು ಮಳೆ ದೂರ ಹಿನ್ನೆಲೆಯಲ್ಲಿ ನೀರಿನ ಅಭಾವ ಹಾಗೆಯೇ ಮುಂದುವರಿದಿದೆ. ಇನ್ನೂ ಮಳೆಗಾಲ ಆರಂಭವಾಗಿರದೆ ಇರುವುದರಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಲ್ಬಣವಾಗಿದೆ. ಮೇ ಆರಂಭದಲ್ಲಿ 2 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿತ್ತು, ನೀರಿನ ಕೊರತೆ ಹೆಚ್ಚಾಗುತ್ತಿದ್ದಂತೆ ಜೂನ್‌ ಆರಂಭದಲ್ಲಿ 3 ದಿನಕ್ಕೊಮ್ಮೆ ಪೂರೈಸಲಾಯಿತು, ಇದೀಗ 5 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತದೆ ಎಂದು ನಗರಸಭಾ ಆಯುಕ್ತರು ತಿಳಿಸಿದ್ದಾರೆ.

ಉಡುಪಿ(Udupi)ಗೆ ನೀರು ತರಲಾಗುವ ಸ್ಪರ್ಣಾ ನದಿಯ ಬಜೆ ಅಣೆಕಟ್ಟೆಯಲ್ಲಿ ನೀರಿನ ಶೇಖರಣೆ ತೀರಾ ಕಡಿಮೆ ಇರುವುದರಿಂದ ಅನಿವಾರ್ಯವಾಗಿ ನೀರಿನ ರೇಶನಿಂಗ್‌ 3 ದಿನಗಳಿಂದ 5 ದಿನ ಮಾಡಲಾಗಿದೆ. ಸ್ವರ್ಣಾನದಿಯ ಪಾತ್ರದ ಹೊಂಡಗಳಲ್ಲಿರುವ ನೀರನ್ನು ಪಂಪುಗಳ ಮೂಲಕ ಬಜೆ ಅಣೆಕಟ್ಟೆಗೆ ಹರಿಸಿ, ಅಲ್ಲಿಂದ ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ. ಈ ನೀರು ಕಲುಷಿತವಾಗಿರಲಿದ್ದು, ಜನರು ನೀರನ್ನು ಕುದಿಸಿ ಕುಡಿಯುವಂತೆ ಆಯುಕ್ತರು ತಿಳಿಸಿದ್ದಾರೆ.

Latest Videos

undefined

ದ.ಕ., ಉಡುಪಿ: ಮಳೆ ಕಡಿಮೆ, ಇಂದು ಆರೆಂಜ್‌ ಅಲರ್ಟ್

ಮಂಗಳೂರು ವರದಿ: ಮಂಗಳೂರಿನ ಎಂಸಿಎಫ್‌ (ಮಂಗಳೂರು ಕೆಮಿಕಲ್‌ ಅಂಡ್‌ ಫರ್ಟಿಲೈಸರ್ಸ್‌ ಲಿಮಿಟೆಡ್‌) ರಸಗೊಬ್ಬರ ಕಾರ್ಖಾನೆಗೆ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಆದರೂ ರಸಗೊಬ್ಬರ ಉತ್ಪಾದನೆಯನ್ನು ತೊಂದರೆಯಾಗದಂತೆ ನಿಭಾಯಿಸುತ್ತಿದೆ.

ಗುರುವಾರ ಕೇರಳಕ್ಕೆ ಮುಂಗಾರು ಪ್ರವೇಶಿಸಿದ್ದು, ಮೂರು ದಿನಗಳಲ್ಲಿ ಇಲ್ಲಿನ ಕರಾವಳಿಯಲ್ಲಿ ಮಳೆಯಾಗುವ ನಿರೀಕ್ಷೆಯನ್ನು ಹವಾಮಾನ ಇಲಾಖೆ ಹೇಳಿದೆ. ಜಿಲ್ಲೆಯ ಪ್ರಸಿದ್ಧ ಕ್ಷೇತ್ರಗಳಾದ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ಸದ್ಯಕ್ಕೆ ನೀರಿನ ಕೊರತೆಯಿಂದ ಬಚಾವ್‌ ಆಗಿದೆ. ಘಾಟ್‌ ಪ್ರದೇಶದಲ್ಲಿ ಮಳೆ ಬಂದ ಕಾರಣ ಧರ್ಮಸ್ಥಳ ಸ್ನಾನಘಾಟ್‌ ಬಳಿಯ ಅಣೆಕಟ್ಟೆಯ ಒಂದು ಗೇಟ್‌ ತೆರೆಯಲಾಗಿದೆ. ಇದರಿಂದಾಗಿ ಯಾರ್ತಾರ್ಥಿಗಳಿಗೆ ಅನುಕೂಲವಾಗಿದೆ. ಕಳೆದ ಒಂದು ವಾರ ಘಾಟ್‌ ಪ್ರದೇಶದಲ್ಲಿ ಮಳೆ ಇಲ್ಲದೆ ಇಲ್ಲಿನ ಸ್ನಾನಘಾಟ್‌ನಲ್ಲಿ ನೀರಿಗೆ ಕೊರತೆಯಾಗಿತ್ತು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಘಟ್ಟಪ್ರದೇಶದ ಮಳೆ ನೀರು ಆಸರೆ ನೀಡಿದೆ.

ಮಂಗ್ಳೂರಲ್ಲಿ ನೀರಿಗೆ ಬರ:

ಮಂಗಳೂರಲ್ಲಿ ನೀರಿಗೆ ಹಾಹಾಕಾರ ಮುಂದುವರಿದಿದ್ದು, ಸುರತ್ಕಲ್‌ನ ಎತ್ತರ ಪ್ರದೇಶಗಳಿಗೆ ಇನ್ನೂ ನೀರು ಪೂರೈಕೆಯಾಗುತ್ತಿಲ್ಲ. ಇಲ್ಲಿಗೆ ಟ್ಯಾಂಕರ್‌ ನೀರೇ ಗತಿಯಾಗಿದೆ. ಲ್ಯಾಂಡ್‌ಲಿಂಕ್ಸ್‌ ಮತ್ತಿತರ ಪ್ರದೇಶಗಳಲ್ಲೂ ಕುಡಿಯುವ ನೀರಿಗೆ ಟ್ಯಾಂಕರ್‌ಗೆ ಕಾಯುವ ಪರಿಸ್ಥಿತಿ ಉಂಟಾಗಿದೆ.

ನಗರದ ಹೊರವಲಯದ ಪಿಲಿಕುಳ ನಿಸರ್ಗಧಾಮಕ್ಕೆ ಒಂದು ವಾರಕ್ಕೆ ನೀರಿಗೆ ತೊಂದರೆ ಇಲ್ಲ, ಅಲ್ಲಿಗೆ ಫಲ್ಗುಣಿ ನದಿಯಿಂದ ನೀರು ಬಳಸಲಾಗುತ್ತಿದೆ. ಮಳೆಯಾಗದಿದ್ದರೆ ಪಿಲಿಕುಳದಲ್ಲೂ ಪ್ರಾಣಿ, ಪಕ್ಷಿಗಳಿಗೆ ನೀರಿಗೆ ತೊಂದರೆ ಉಂಟಾಗಲಿದೆ.

ಮಹಾನಗರ ಪಾಲಿಕೆಯಲ್ಲಿ ಕಳೆದ ಮೂರು ದಿನಗಳ ಕಾಲ ಪೈಪ್‌ಲೈನ್‌ ದುರಸ್ತಿ ಕಾರಣ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಒಂದು ದಿನ ವಿಳಂಬದ ಬಳಿಕ ಅದು ಸರಿಯಾಗಿದ್ದು, ನೀರು ಪೂರೈಕೆ ಮತ್ತೆ ಸಹಜ ಸ್ಥಿತಿಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಹಂಪನಕಟ್ಟೆವಿವಿ ಕಾಲೇಜು ಆನ್‌ಲೈನ್‌ ಪಾಠ ಬಿಟ್ಟು ಗುರುವಾರದಿಂದ ತರಗತಿ ಆರಂಭಿಸಿದೆ.

ತುಂಬೆ ನೀರಿನ ಮಟ್ಟಏರಿಕೆ

ಮಂಗಳೂರು(Mangaluru) ಮಹಾನಗರಕ್ಕೆ ನೀರು ಪೂರೈಸುವ ತುಂಬೆ ನೇತ್ರಾವತಿ ಡ್ಯಾಂನಲ್ಲಿ ಗುರುವಾರ ನೀರಿನ ಮಟ್ಟ4.20 ಮೀಟರ್‌ಗೆ ಏರಿಕೆಯಾಗಿದೆ. ಮೇಲ್ಭಾಗದಿಂದ ಎಎಂಆರ್‌ ಡ್ಯಾಂನಿಂದ ತುಂಬೆ ಡ್ಯಾಂಗೆ ಜಿಲ್ಲಾಡಳಿತದ ಆದೇಶದಂತೆ ಕಳೆದ ಎರಡು ದಿನಗಳಿಂದ ನೀರು ಬಿಡಲಾಗುತ್ತಿದೆ. ಉಳಿದಂತೆ ನೀರು ಎಎಂಆರ್‌ ಡ್ಯಾಂನಿಂದ ಎಂಆರ್‌ಪಿಎಲ್‌ ಮುಂತಾದ ಬೃಹತ್‌ ಕೈಗಾರಿಕೆಗಳಿಗೆ ಪೂರೈಕೆಯಾಗುತ್ತಿದೆ. ಎಎಂಆರ್‌ನಲ್ಲಿ 17.80 ಮೀಟರ್‌ ನೀರು ಸಂಗ್ರಹವಿದೆ.

ತುಂಬೆ ಡ್ಯಾಂನಲ್ಲಿ 4 ಮೀಟರ್‌ಗಿಂತ ಕೆಳಗೆ ಇಳಿದ ನೀರು; ಮಂಗಳೂರಿಗೆ ಅಭಾವ ಸಾಧ್ಯತೆ !

click me!