ಜನ್ಮದಿನಕ್ಕೆ ಕೇಕ್‌ ಬೇಡ, ಗಿಡ ಕೊಡಿ: ಸಚಿವ ಶಿವರಾಜ ತಂಗಡಗಿ

By Kannadaprabha News  |  First Published Jun 9, 2023, 1:00 AM IST

ನನ್ನ ಜನ್ಮ ದಿನಾಚರಣೆಯನ್ನು ಫೋಟೋ ಇಟ್ಟು, ಕೇಕ್‌ ಕತ್ತರಿಸಿ, ಸಂಭ್ರಮಿಸುವ ಬದಲು ಗಿಡ ನೆಟ್ಟು ಆಚರಿಸಿ. ಈ ಕುರಿತು ವಾಟ್ಸ್‌ ಆ್ಯಪ್‌ ಪ್ರತ್ಯೇಕ ಗ್ರೂಪ್‌ಗೆ ಅಪ್‌ಲೋಡ್‌ ಮಾಡಿ ಎಂದ ಸಚಿವ ಶಿವರಾಜ ತಂಗಡಗಿ 


ಕೊಪ್ಪಳ(ಜೂ.09):  ಜನ್ಮ ದಿನಾಚರಣೆ ಹೆಸರಿನಲ್ಲಿ ಮೋಜು-ಮಸ್ತಿ ಬೇಡ, ಹಾರ-ತುರಾಯಿ ತಂದು, ಕೇಕ್‌ ಕತ್ತರಿಸುವುದೂ ಬೇಡ. ಸಾಧ್ಯವಾದರೆ ಗಿಡ ನೆಡಿ, ಇಲ್ಲವೇ ನನಗೆ ತಂದುಕೊಡಿ, ಆರೋಗ್ಯವಂತರು ರಕ್ತದಾನ ಮಾಡಿ, ಜೀವ ಉಳಿಸುವ ಕೆಲಸ ಮಾಡಿ, ಇಲ್ಲವಾದರೆ ಪುಸ್ತಕ, ಪೆನ್ನು, ನೋಟ್‌ಬುಕ್ಕನ್ನಾದರೂ ನೀಡಿ. ಇದು, ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ತಮ್ಮ ಅಭಿಮಾನಿಗಳಿಗೆ ಜೂ.10ರಂದು ಇರುವ ಜನ್ಮದಿನ ಆಚರಣೆ ಕುರಿತು ಮಾಡಿಕೊಂಡಿರುವ ಮನವಿ. 

ನನ್ನ ಜನ್ಮ ದಿನಾಚರಣೆಯನ್ನು ಫೋಟೋ ಇಟ್ಟು, ಕೇಕ್‌ ಕತ್ತರಿಸಿ, ಸಂಭ್ರಮಿಸುವ ಬದಲು ಗಿಡ ನೆಟ್ಟು ಆಚರಿಸಿ. ಈ ಕುರಿತು ವಾಟ್ಸ್‌ ಆ್ಯಪ್‌ ಪ್ರತ್ಯೇಕ ಗ್ರೂಪ್‌ಗೆ ಅಪ್‌ಲೋಡ್‌ ಮಾಡಿ ಎಂದಿದ್ದಾರೆ. 

Tap to resize

Latest Videos

undefined

ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಬಿಜೆಪಿಗೆ ಆತಂಕ: ಸಚಿವ ಶಿವರಾಜ ತಂಗಡಗಿ

ಪುಸ್ತಕಗಳನ್ನು ಖರೀದಿಸಿ ನೀಡಿ, ನೋಟ್‌ಬುಕ್‌, ಪೆನ್‌ ಸಹ ನೀಡಬಹುದು. ಇವುಗಳನ್ನು ನಾನು ಸರ್ಕಾರಿ ಶಾಲೆಯಲ್ಲಿ ಓದುವ ಬಡ ವಿದ್ಯಾರ್ಥಿಗಳಿಗೆ ವಿತರಣೆ ಮಾಡುತ್ತೇನೆ, ಗ್ರಂಥಾಲಯಕ್ಕೆ ನೀಡುತ್ತೇನೆ ಎಂದಿದ್ದಾರೆ.

click me!