ಜಾತಿ, ಆದಾಯ ಪ್ರಮಾಣಪತ್ರಕ್ಕೂ ಸಚಿವರ ಅನುಮತಿ ಬೇಕಂತೆ! ಇದು ಅಧಿಕಾರಿಗಳ ರೂಲ್ಸ್‌..

By Sathish Kumar KHFirst Published Jul 13, 2023, 8:37 PM IST
Highlights

ಧಾರವಾಡ ತಹಶೀಲ್ದಾರ್‌ ಕಚೇರಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರದ ಅರ್ಜಿ ತಿರಸ್ಕರಿಸುತ್ತಿರುವ ಅಧಿಕಾರಿಗಳು, ಜಿಲ್ಲಾ ಉಸ್ತವಾರಿ ಸಚಿವರ ತರಾಟೆ ನಂತರ ಪ್ರಮಾಣಪತ್ರ ಕೊಡಲು ಒಪ್ಪಿಕೊಂಡಿದ್ದಾರೆ. 

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಜು.13): ಜಾತಿ ಮತ್ತು ಆದಾಯ ಪ್ರಮಾಣಪತ್ರ ಅರ್ಜಿಗೆ ಎಲ್ಲ ದಾಖಲಾತಿಗಳು ಸರಿ ಇದ್ದರೂ ತಹಶಿಲ್ದಾರ ಕಚೇರಿಯ ಅಧಿಕಾರಿಗಳು ಕಾರಣವಿಲ್ಲದೆ ಅರ್ಜಿಗಳನ್ನ ರಿಜೆಕ್ಟ್‌ ಮಾಡುತ್ತಿದ್ದರು. ಈ ಬಗ್ಗೆ ಸಹನೆ ಕಳೆದುಕೊಂಡಿದ್ದ ಯುವಕ ಒಂದು ಪ್ರಮಾಣಪತ್ರಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ಲಾಡ್‌ಗೆ ಕರೆ ಮಾಡಿ ದೂರು ನೀಡಿದ್ದಾರೆ. ಇದಾದ ನಂತರ ಅಧಿಕಾರಿಗಳು ಪ್ರಮಾಣಪತ್ರ ಕೊಡಲು ಒಪ್ಪಿಕೊಂಡಿದ್ದಾರೆ.

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕ್ಷೇತ್ರದ 50 ಜನರು ಧಾರವಾಡ ತಹಶಿಲ್ದಾರ  ಕಚೇರಿಗೆ ಬಂದು ಅಧಿಕಾರಿಗೆ ಪುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಳ್ನಾವರ ತಾಲೂಕಿನ ಹೊಲ್ತಿಕೋಟಿ ಗ್ರಾಮದ ಫಾರುಕ್ ಎಂಬುವರು ಕಳೆದ ಮಾರ್ಚ 11 ರಂದು ಅರ್ಜಿ ಹಾಕಿದ್ದರು ಅರ್ಜಿ ಹಾಕಿದ್ದರು ಮೂರು ತಿಂಗಳ‌ವರೆಗೆ ತಹಶಿಲ್ದಾರ ಕಚೇರಿಗೆ ಅಲೆದಾಡಿದ್ದಾರೆ ಅಲ್ಲಿಂದ ಇಲ್ಲಿಯವರೆಗೆ ತಲೆ‌ಕೆಡಸಿಕ್ಕೊಳ್ಳದ ಗ್ರೇಡ್ 2 ಹಣುಮಂತ ಕೊಚ್ಚರಗಿ   ಕೋಠಡಿಗೆ ಬಂದು ಅರ್ಜಿದಾರರು ಅಧಿಕಾರಿಗೆ ಪುಲ್ ಕ್ಲಾಸ್ ತೆಗೆದುಕ್ಕೊಂಡಿದ್ದಾರೆ ಸಚಿವರ ಕರೆಗೆ ನಡುಗಿದ ಅಧಿಕಾರಿ ಹನುಮಂತ ಕೊಚ್ಚರಗಿಗೆ ಅರ್ದ ಘಂಟೆ ವೇರೆಗೆ ಕ್ಲಾಸ್ ತೆಗೆದುಕ್ಕೊಂಡಿದ್ದಾರೆ ಇನ್ನು ಪೈರೋಜಾ ಮನಿಯಾರ, ಮತ್ತು ಸುಭಾನ್ ಮನಿಯಾರ, ಇಬ್ಬರು ಅರ್ಜಿ ಹಾಕಿದ್ದರು ಮೂರು ತಿಂಗಳಿಂದ ತಹಶಿಲ್ದಾರ ಕಚೇರಿಗೆ ಅಲೆದಾಡಿದ ಅರ್ಜಿದಾರರು ಬೇಸತ್ತು ಹೋಗಿದ್ದರು.

Latest Videos

ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ಫಸ್ಟ್‌, ಕರ್ನಾಟಕದ ಸ್ಥಾನವೆಷ್ಟು ಗೊತ್ತಾ?

ಆದಾಯ ಪ್ರಮಾಣ ಪತ್ರಕ್ಕೂ ಸಚಿವರಿಂದ ಅನುಮತಿ: ಜಿಲ್ಲಾ ಉಸ್ತುವಾರಿ ಸಚಿವ ಸಂತೂಷ್ ಲಾಡ ಅವರಿಗೆ ಕರೆ ಮಾಡಿದ್ದ ಫಾರುಕ್ ಅಧಿಕಾರಿಯ ನಿರ್ಲಕ್ಷದ ಬಗ್ಗೆ ವಿವರಣೆಯನ್ನ ನಿಡಿದ್ದಾರೆ. ಫಾರುಕ್ ನ  ಕರೆ ಸ್ವೀಕರಿಸಿ ಮಾತನಾಡಿದ ಸಚಿವ ಸಂತೋಷ್ ಲಾಡ್ ಅವರು ನಿಮಗೆ ಜಾತಿ, ಮತ್ತು ಆದಾಯ ಪ್ರಮಾಣ ಪತ್ರ ಕೊಡಿಸೋದಾಗಿ ಭರವಸೆ ಕೊಟ್ಟಿದ್ದಾರೆ. ಕೂಡಲೆ ತಮ್ಮ‌ ಕಚೇರಿಯ ಸಿಬ್ಬಂದಿಗಳನ್ನ ಧಾರವಾಡ ತಹಶಿಲ್ದಾರ ಕಚೇರಿಗೆ ಕಳಿಸಿದ ಸಚಿವರು ಗ್ರೇಡ್ 2 ಹನುಮಂತ ಅವರನ್ನ ತರಾಟಗೆ ತಗೆದುಕೊಂಡರು. ಅರ್ಜಿದಾರ ಫಾರುಕ್ ಆ ಗ್ರಾಮದಲ್ಲಿ ವಾಸವಿಲ್ಲ ಎಂದು ನೆಪ ಹೇಳಿ ರಿಜೆಕ್ಟ್‌ ಮಾಡಿದ್ದಾಗಿ ಗ್ರೇಡ್ 2 ಹನುಮಂತ ಕೊಚ್ಚರಗಿ ತಲಾಟಿ ಹೇಳಿದ್ದಾರೆ. ಆದರೆ, ಸರ್ಕಲರ್ ಸ್ಥಾನಿಕ ಚೌಕಾಸಿ ಸಹಿ ಮಾಡಿ ಕೊಟ್ಟರೂ ರಿಜೆಕ್ಟ್ ಮಾಡಿದ ಗ್ರೇಡ್ 2 ಅವರನ್ನು ಜನರು ಪುಲ್‌ಕ್ಲಾಸ್ ತೆಗೆದುಕ್ಕೊಂಡಿದ್ದಾರೆ.

ರಾಟೆ ಬಳಿಕ ಪ್ರಮಾಣಪತ್ರ ಕೊಡುವುದಾಗಿ ಒಪ್ಪಿಗೆ: ಕಚೇರಿಗೆ ಬಂದ ಲಾಡ್ ಆಪ್ತರು, ಅರ್ಜಿರಾದರಿಂದ ಗ್ರೇಡ್ 2 ಗೆ ತರಾಟೆ ಅರ್ಜಿ ರಿಜೆಕ್ಟ ಮಾಡಿದ್ದು ಯಾಕೆ..? ಎಂದು ಪ್ರೆಶ್ನೆ ಮಾಡಿದರೆ ಅಧಿಕಾರಿ ಇಂಗು ತಿಂದ ಮಂಗನಂತೆ‌ ತೆಪ್ಪಗೆ ಇದ್ದರು. ಅರ್ಧ ಘಂಟೆವರಗೆ ಗ್ರೇಡ್ 2 ಬೆವರಿಸಿಳಿದ ಅರ್ಜಿದಾರರು ಹಾಗೂ ಸಚಿವರ ಆಪ್ತರು ಹಿಗ್ಗಾಮುಗ್ಗಾ‌ ಜಾಡಿಸಿದ ಬಳಿಕ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೊಡೋದಾಗಿ ಗ್ರೇಡ್ 2 ಹನುಮಂತ ಕೊಚ್ಚರಗಿ ಒಪ್ಪಿಕ್ಕೊಂಡಿದ್ದಾರೆ. ವಿಪರ್ಯಾಸ ಎಂದರೆ ಜಾತಿ ಆದಾಯ ಪ್ರಮಾಣ ಪತ್ರ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ ಅವರು ಕರೆ ಮಾಡುವ ಪರಿಸ್ತಿತಿ ಬಂತಲ್ಲ ಎಂದು ಜನ ಮಾತನಾಡಿಕ್ಕೊಳ್ಳುತ್ತಿದ್ದಾರೆ. 

ಸವಣೂರಿನ 2 ಸಾವಿರ ವರ್ಷದ ಹುಣಸೆ ಮರ, ಮರುನಾಟಿ ಮಾಡಿದ ಕೃಷಿ ವಿಜ್ಞಾನಿಗಳು

ಯಾವ ಕ್ರಮಕ್ಕೂ ಮುಂದಾಗದ ಹಿರಿಯ ಅಧಿಕಾರಿಗಳು:  ಇನ್ನು ಈ ಹಿಂದೆ ಇದೆ ಕಚೇರಿಯಲ್ಲಿ ತಪ್ಪು ಮಾಡಿದವರೆ ಬೇರೆ ಶಿಕ್ಷೆ ಮತ್ತೊಬ್ಬರಿಗೆ ಅನ್ನೋ ರೀತಿಯಲ್ಲಿ ಹಿರಿಯ ಅಧಿಕಾರಿಗಳು ನಡೆದುಕ್ಕೊಳ್ಳುತಿದ್ದರು ಎಂದು ಜನರು ಅಧಿಕಾರಿಗಳ ಮೆಲೆ‌ ಹಿಡಿಶಾಪವನ್ನ ಹಾಕುತ್ತಿದ್ದಾರೆ. ಧಾರವಾಡ ತಹಶಿಲ್ದಾರ ಕಚೇರಿಯಲ್ಲಿ ಅದರಲ್ಲೂ ಗ್ರೇಡ್ 2 ಕಚೇರಿಯಲ್ಲಿ ಹೆಳೋರಿಲ್ಲ‌ ಕೆಳೋರಿಲ್ಲ ಅನ್ನೋ ಹಾಗೆ ಆಗಿದೆ ಇಲ್ಲಿ ಅಧಿಕಾರಿಗಳು ಮಾಡಿದ್ದೆ ಆಟವಾಗಿದೆ. ಈ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನೆ ಕುಳಿತಿರಿವುದು ವಿಪರ್ಯಾಸವೆ ಸರಿ.

click me!