ಬೆಂಗಳೂರು (ಅ.28): ಸಾರ್ವಜನಿಕ ರಸ್ತೆಗಳ (Road) ಒತ್ತುವರಿ ಹಾಗೂ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಸರ್ವೇ ನಡೆಸಿ ವರದಿ ಸಲ್ಲಿಸದ ಕಾರಣ ಜಾಮೀನು ವಾರಂಟ್ (Bail warant) ಜಾರಿಗೊಳಿಸಿದ್ದರೂ ನ್ಯಾಯಾಲಯಕ್ಕೆ ಹಾಜರಾಗದ ಮೈಸೂರು (Mysuru) ಪಾಲಿಕೆ ಆಯುಕ್ತ ಹಾಗೂ ವಲಯ ಆಯುಕ್ತರನ್ನು ಬಂಧಿಸಲು ಪೊಲೀಸರಿಗೆ (Police) ಆದೇಶಿಸಬೇಕಾಗುತ್ತದೆ ಎಂದು ಹೈಕೋರ್ಟ್ (High Court) ಎಚ್ಚರಿಕೆ ನೀಡಿದ ಘಟನೆ ನಡೆಯಿತು.
ಈ ವಿಚಾರವಾಗಿ ಮಾಜಿ ಕಾರ್ಪೋರೇಟರ್ ಪಿ.ಶ್ರೀಕಂಠಮೂರ್ತಿ (P Shrikantamurthy) ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.
ಮೊಟ್ಟ ಮೊದಲ ಬಾರಿಗೆ ಕಮಲಕ್ಕೊಲಿದ ಮೈಸೂರು ಮೇಯರ್ ಪಟ್ಟ : BJP ತಂತ್ರಗಾರಿಕೆಗೆ ಸಕ್ಸಸ್
ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತರು (Commissioner) ಮತ್ತು ವಲಯ ಆಯುಕ್ತರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿ,ಒತ್ತುವರಿಗಳನ್ನು ತೆರವುಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ 2021ರ ಜೂ.25ರಂದು ಹೈಕೋರ್ಟ್ (High Court) ಆದೇಶಿಸಿತ್ತು. ಇದಾದ ಬಳಿಕ ಆಯುಕ್ತರು ಮತ್ತು ವಲಯ ಆಯುಕ್ತರ ಪರ ವಕೀಲರು ಮೂರ್ನಾಲ್ಕು ಬಾರಿ ಕಾಲಾವಕಾಶ ಪಡೆದುಕೊಂಡಿದ್ದರು. ಅನೇಕ ಬಾರಿಕಾಲಾವಕಾಶ ಪಡೆದು ವರದಿಯೂ ಸಲ್ಲಿಸದೇ ಇರುವ ಮತ್ತು ಕೋರ್ಟ್ ವಿಚಾರಣೆಗೂ ಹಾಜರಾಗದ ಆಯುಕ್ತರು, ವಲಯ-7ರ ವಲಯ ಆಯುಕ್ತರ ವಿರುದ್ಧ ತಲಾ 25 ಸಾವಿರ ರು. ಮೊತ್ತದ ಜಾಮೀನು ಸಹಿತ ವಾರಂಟ್ (Bailable waranat) ಹೊರಡಿಸಿ ಅ.26ರಂದು ಖುದ್ದು ಹಾಜರಾಗುವಂತೆ ಹೈಕೋರ್ಟ್ ಅ.4ಕ್ಕೆ ಆದೇಶಿಸಿತ್ತು.
ಬುಧವಾರ ಅರ್ಜಿ ವಿಚಾರಣೆಗೆ ಬಂದಾಗ ಮೈಸೂರು ಪಾಲಿಕೆ ಪರ ವಕೀಲರು ಹಾಜರಾಗಿ, ಆಯುಕ್ತರು ಹಾಗೂ ವಲಯ ಆಯುಕ್ತರ ಗೈರಾಗಿರುವುದಕ್ಕೆ ಕ್ಷಮೆ ಕೋರಿದರು. ಅಲ್ಲದೆ, ವಿಚಾರಣೆಗೆ ಹಾಜರಾಗುವುದರಿಂದ ವಿನಾಯ್ತಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ಅದನ್ನು ಪುರಸ್ಕರಿಸಬೇಕು ಎಂದು ಕೋರಿದರು.
ಇದಕ್ಕೆ ತೀವ್ರ ಅಸಮಧಾನಗೊಂಡ ನ್ಯಾಯಪೀಠ, ಹೈಕೋರ್ಟ್ ನಿರ್ದೇಶನ ನೀಡಿದ ಹೊರತಾಗಿಯೂ ಅಧಿಕಾರಿಗಳು ಕೋರ್ಟ್‌ಗೆ ಹಾಜರಾಗಲಿಲ್ಲ. ಮತ್ತೊಂದೆಡೆ ಕೋರ್ಟ್ ಆದೇಶವನ್ನು ಪಾಲಿಸಿಲ್ಲ. ಸರ್ಕಾರಿ ಅಧಿಕಾರಿಗಳು (Govt Officials) ನಡೆದುಕೊಳ್ಳುವ ರೀತಿ ಇದೇನಾ? ಅದರಲ್ಲೂ ಜಾಮೀನು ಸಹಿತ ವಾರಂಟ್ ಜಾರಿಗೊಳಿಸಿದ್ದು, ಅದರ ಅರಿವು ಇದ್ದರೂ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗುವುದಿಲ್ಲ ಎಂದರೆ ಹೇಗೆ, ಸರ್ಕಾರಿ ಅಧಿಕಾರಿಗಳ ಇಂತಹ ನಡವಳಿಕೆ ನ್ಯಾಯಾಲಯ ಸಹಿಸುವುದಿಲ್ಲ ಎಂದು ನುಡಿಯಿತು.
ಕೋರ್ಟ್ ಆದೇಶಗಳಿಗೆ ಬೆಲೆ ಹಾಗೂ ಗೌರವ ಇಲ್ಲವೇ, ಆದೇಶ ಪಾಲನೆ ಮಾಡದೆ ಹೋದರೆ, ಅಧಿಕಾರಿಗಳಿಂದ ಆದೇಶವನ್ನು ಪಾಲನೆ ಮಾಡಿಸುವುದು ಹೇಗೆ ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಜಾಮೀನು ಸಹಿತ ವಾರೆಂಟ್ ಜಾರಿ ಮಾಡಿದ್ದರೂ ಅಧಿಕಾರಿಗಳು ಬರಲಿಲ್ಲ. ಹಾಗಾಗಿ, ಅವರನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲು ಮೈಸೂರು ನಗರ ಪೊಲೀಸ್ ಆಯುಕ್ತರಿಗೆ (Police Commissioner) ಆದೇಶಿಸಿದರೆ ಸರಿಹೋಗುತ್ತದೆ ಎಂದು ನುಡಿದರು.
ಇದರಿಂದ ಕಠಿಣ ಆದೇಶ ಹೊರಡಿಸುವುದರಿಂದ ಹಿಂದೆ ಸರಿದ ನ್ಯಾಯಪೀಠ, ಅರ್ಜಿಯನ್ನು ಅ.29ಕ್ಕೆ ಮುಂದೂಡಿತು. ಅಂದು ಈ ಇಬ್ಬರು ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ ವಿಚಾರಣೆ ಮುಂದೂಡಿತು.