ಬಿರು ಬಿಸಲಿಗೆ ಬರಿದಾದ ಕೃಷ್ಣೆ; ಆಹಾರ ಅರಸಿ ರೈತರ ಗದ್ದೆಗೆ ನುಗ್ಗಿದ ಬೃಹತ್ ಗಾತ್ರದ ಮೊಸಳೆ!

By Ravi Janekal  |  First Published Apr 9, 2024, 7:08 PM IST

ತಂಪಾದ ವಾತಾವರಣಕ್ಕೆ ಹೆಸರುವಾಸಿಯಾಗಿದ್ದ ಬೆಳಗಾವಿ ವರ್ಷವಿಡೀ ಹಿತಕರ ವಾತವಾರಣವಿರುತ್ತಿತ್ತು. ಆದರೆ ಕಳೆದ ವರ್ಷಕ್ಕೆ ಈ ಬಾರಿ ಬೇಸಗೆಗೆ ತೀವ್ರತರವಾಗಿ ತಾಪಮಾನ ಹೆಚ್ಚಳವಾಗಿದೆ. ಫೆಬ್ರುವರಿ ಆರಂಭದಲ್ಲಿ ತಾಪಮಾನ ಏರಿಕೆಯಾಗಿದ್ದು, ಸದ್ಯ 40 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪಿರುವುದರಿಂದ ಜಿಲ್ಲೆಯ ಜನರು ಬೇಸಗೆ ಬಿಸಲಿಗೆ ತತ್ತರಿಸಿಹೋಗಿದ್ದಾರೆ.


ಚಿಕ್ಕೋಡಿ (ಏ.9) ತಂಪಾದ ವಾತಾವರಣಕ್ಕೆ ಹೆಸರುವಾಸಿಯಾಗಿದ್ದ ಬೆಳಗಾವಿ ವರ್ಷವಿಡೀ ಹಿತಕರ ವಾತವಾರಣವಿರುತ್ತಿತ್ತು. ಆದರೆ ಕಳೆದ ವರ್ಷಕ್ಕೆ ಈ ಬಾರಿ ಬೇಸಗೆಗೆ ತೀವ್ರತರವಾಗಿ ತಾಪಮಾನ ಹೆಚ್ಚಳವಾಗಿದೆ. ಫೆಬ್ರುವರಿ ಆರಂಭದಲ್ಲಿ ತಾಪಮಾನ ಏರಿಕೆಯಾಗಿದ್ದು, ಸದ್ಯ 40 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪಿರುವುದರಿಂದ ಜಿಲ್ಲೆಯ ಜನರು ಬೇಸಗೆ ಬಿಸಲಿಗೆ ತತ್ತರಿಸಿಹೋಗಿದ್ದಾರೆ.

ಇನ್ನು ಚಿಕ್ಕೋಡಿ ಭಾಗದಲ್ಲಿ ವಿಪರೀತ ಬಿರು ಬಿಸಲು, ಬಿಸಿಗಾಳಿಗೆ, ಕೃಷ್ಣ ನದಿ ಹಳ್ಳ ಕೊಳ್ಳಗಳೆಲ್ಲ ಬತ್ತಿಹೋಗಿರುವುದರಿಂದ ಒಂದು ಕಡೆ ನೀರಿಗೆ ಹಾಹಾಕಾರ ಎದ್ದಿದ್ದರೆ, ಇನ್ನೊಂದೆಡೆ ನದಿಗಳು ಬರಿದಾಗಿರುವುದರಿಂದ ಜಲ ಜೀವರಾಶಿಗಳು ಸಾವನ್ನಪ್ಪುತ್ತಿವೆ. ಮೊಸಳೆಗಳು ಆಹಾರ ಅರಸಿ ನಾಡಿನತ್ತ ಬರುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

Tap to resize

Latest Videos

ಕಾದ ಬಾಣಲೆಯಂತಾದ ರಾಯಚೂರು! ಬಿಸಲಿನ ತಾಪದಿಂದ ಘನ ತ್ಯಾಜ್ಯ ಘಟಕಕ್ಕೆ ಬೆಂಕಿ!

ಕೃಷ್ಣಾ ನದಿ ನೀರಿಲ್ಲದೆ ಬರಿದಾಗಿರುವುದರಿಂದ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಭಾವನ ಸೌಂದತ್ತಿ ಗ್ರಾಮದಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ಆಹಾರ ಅರಸಿ ರೈತರ ಕಬ್ಬಿನ ಗೆದ್ದೆಗೆ ನುಗ್ಗಿದೆ. ಗದ್ದೆಗೆ ಹೋಗಿದ್ದ ರೈತರು ಮೊಸಳೆ ಕಂಡು ಬೆಚ್ಚಿಬಿದ್ದಿದ್ದಾರೆ.

ಸತ್ತಿದೆ ಎಂದು ಭಾವಿಸಿ ಜೀವಂತ ಮೊಸಳೆ ಹಿಡಿಯಲು ಹೋದ ಅರಣ್ಯ ಸಿಬ್ಬಂದಿ! ಮುಂದೇನಾಯ್ತು ನೋಡಿ!

ಗಂಗಾಧರ ಮಂಗಸೂಳೆ ಎಂಬ ರೈತನ ಗದ್ದೆ ನುಗ್ಗಿರುವ ಭಾರೀ ಗಾತ್ರದ ಮೊಸಳೆ. ನದಿಪಾತ್ರದ ರೈತರ ಹೊಲಗಳಿಗೆ ಇನ್ನೂ ಮೊಸಳೆಗಳು ನುಗ್ಗಿರುವ ಸಾಧ್ಯತೆಯಿದೆ. ಎಂದೂ ನೋಡಿರದ ಭಾರೀ ಗಾತ್ರದ ಮೊಸಳೆ ಕಂಡು ರೈತರು ಹೌಹಾರಿದ್ದಾರೆ. ತಕ್ಷಣ ಮೊಸಳೆ ನುಗ್ಗಿದ ವಿಚಾರ ಅರಣ್ಯ ಇಲಾಖೆ ತಿಳಿಸಿದ ರೈತರು. ಈ ವರ್ಷ ಅತಿಯಾದ ಬಿಸಲಿನಿಂದ ಕೃಷ್ಣಾ ನದಿ ಸಂಪೂರ್ಣ ಖಾಲಿಯಾಗಿದೆ. ಇದರಿಂದ ನದಿಯಲ್ಲಿದ್ದ ಮೊಸಳೆಗಳಿಗೆ ಆಹಾರದ ಕೊರತೆ ಎದುರಾಗಿದ್ದು ನದಿ ತೊರೆದು ಆಹಾರ ಅರಸಿ ನಾಡಿನತ್ತ ಬರುತ್ತಿವೆ. ಜನವಸತಿ ಪ್ರದೇಶಗಳಿಗೆ ಬಂದರೆ ಏನು ಗತಿ ಎಂದು ರೈತರು ಆತಂಕಕ್ಕೊಳಗಾಗಿದ್ದಾರೆ. 

click me!