#Watch: ಆಜಾನುಬಾಹು ವ್ಯಕ್ತಿಯ ಮೇಲೆ ದಾಳಿ ಮಾಡಿದ ರಕ್ಕಸ ಬೀದಿ ನಾಯಿಗಳು; ಇನ್ನು ಚಿಕ್ಕ ಮಕ್ಕಳ ಪಾಡೇನು?

By Sathish Kumar KH  |  First Published Apr 9, 2024, 3:12 PM IST

ಆಜಾನುಬಾಹು ವ್ಯಕ್ತಿಯೊಬ್ಬ ಇನ್ನೂ ರಾತ್ರಿ 11 ಗಂಟೆ ಸುಮಾರಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ರಕ್ಕಸ ಬೀದಿ ನಾಯಿಗಳು ದಾಳಿ ಮಾಡಿದ್ದು, ಆತನ ತೊಡೆ ಹಾಗೂ ಕಾಲಿನ ಮಾಂಸವನ್ನು ಕಚ್ಚಿ ಎಳೆದಾಡಿವೆ. 


ಬಾಗಲಕೋಟೆ (ಏ.09): ಆಜಾನುಬಾಹು ವ್ಯಕ್ತಿಯೊಬ್ಬ ಇನ್ನೂ ರಾತ್ರಿ 11 ಗಂಟೆ ಸುಮಾರಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ರಕ್ಕಸ ಬೀದಿ ನಾಯಿಗಳು ದಾಳಿ ಮಾಡಿದ್ದು, ಆತನ ತೊಡೆ ಹಾಗೂ ಕಾಲಿನ ಮಾಂಸವನ್ನು ಕಚ್ಚಿ ಎಳೆದಾಡಿವೆ. 

ಸಾಮಾನ್ಯವಾಗಿ ನಗರ ಪಟ್ಟಣಗಳಲ್ಲಿ ಜನರು ಮಲಗುವುದು ರಾತ್ರಿ 10 ಗಂಟೆ ನಂತರ. ಕೆಲವರು 12 ಗಂಟೆಯಾದರೂ ಮಲಗುವುದಿಲ್ಲ. ಬೆಂಗಳೂರು ಎಂದರೆ ಮಧ್ಯರಾತ್ರಿ 2 ಗಂಟೆವರೆಗೂ ಜನರು ಮನೆಯ ಮುಂದೆ ಓಡಾಡುತ್ತಿರುತ್ತಾರೆ. ಆದರೆ, ಇಲ್ಲಿ ಇನ್ನೂ ರಾತ್ರಿ 11 ಗಂಟೆಗೆ ಆಗಿದೆ. ಅಜಾನುಬಾಹು ವ್ಯಕ್ತಿಯೊಬ್ಬ ಮನೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ದಾಳಿ ಮಾಡಿವೆ. ಪಟ್ಟಣದ ಮುಖ್ಯ ರಸ್ತೆಯ ನಟ್ಟ ನಡುವೆಯೇ ರಕ್ಕಸ ಬೀದಿ ನಾಯಿಗಳು ದಾಳಿ ಮಾಡಿ ಕಚ್ಚಿ ಎಳೆದಾಡಿವೆ. ನಾಲ್ಕು ದೊಡ್ಡ ನಾಯಿಗಳು ಹಾಗೂ ಒಂದು ಚಿಕ್ಕ ನಾಯಿ ದಾಳಿ ಮಾಡಿದ್ದು, ವ್ಯಕ್ತಿ ರಸ್ತೆಯಲ್ಲಿ ಬಿದ್ದು ಹೊರಳಾಡಿದರೂ ಬಿಡದೇ ಆತನನ್ನು ಕಚ್ಚಿ ಮಾಂಸವನ್ನು ಕಚ್ಚಿ ರಕ್ತ ಹೀರಲು ಮುಂದಾಗಿವೆ.

Tap to resize

Latest Videos

undefined

ಬೆಂಗಳೂರು: ಯುಗಾದಿ ಹಬ್ಬಕ್ಕೆಂದು ಬೈಕ್‌ ತೊಳೆಯುತ್ತಿದ್ದ ವ್ಯಕ್ತಿಗೆ 5,000 ರೂ. ದಂಡ ಹಾಕಿದ ಜಲಮಂಡಳಿ

ಈ ಅಪಯಕಾರಿ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಗಾಂಧಿಚೌಕ್ ಬಳಿ ನಡೆದಿದೆ. ರಾತ್ರಿ 11 ಗಂಟೆ ಸುಮಾರಿಗೆ ಸುಮಾರು 6 ಅಡಿ ಎತ್ತರವಿರುವ ಅಜಾನುಬಾಹು ವ್ಯಕ್ತಿಯೋರ್ವ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಏಕಾಏಕಿಯಾಗಿ ನಾಲ್ಕೈದು ನಾಯಿಗಳು ದಾಳಿ ಮಾಡಿವೆ. ನಾಯಿಗಳು ದಾಳಿ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಈ ವ್ಯಕ್ತಿ ಅದೃಷ್ಟವಶಾತ್ ಬೀದಿನಾಯಿಗಳಿಂದ ಪ್ರಾಣ ಉಳಿಸಿಕೊಂಡು ಪಾರಾಗಿದ್ದಾನೆ. ಈ ವೇಳೆ ಆ ವ್ಯಕ್ತಿ ಎಷ್ಟೇ ಕೂಗಿಕೊಮಡರೂ ಯಾರೊಬ್ಬರೂ ಸಹಾಯಕ್ಕೆ ಬಂದಿಲ್ಲ. ಕಾರಣ ಇದು ಜನವಸತಿ ಪ್ರದೇಶವಾಗಿರದೇ ಮಾರುಕಟ್ಟೆ ಪ್ರದೇಶವಾಗಿದೆ.

ಇನ್ನು ಬಾಗಲಕೋಟೆಯ ರಕ್ಕಸ ಬೀದಿ ನಾಯಿಗಳ ದಾಳಿಯ ಕುರಿತ ಸಿಸಿಟಿವಿ ವಿಡಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಜನರು ತಮ್ಮ ಪ್ರಾಣಕ್ಕೆ ನಾಯಿಗಳಿಂದಲೇ ಕಂಟಕವಿದೆ ಎಂದು ಎಚ್ಚೆತ್ತುಕೊಳ್ಳುವಂತಾಗಿದೆ. ಜೊತೆಗೆ, ದೊಡ್ಡ ವ್ಯಕ್ತಿಗಳ ಮೇಲೆಯೇ ನಾಯಿಗಳು ಹೀಗೆ ದಾಳಿ ಮಾಡಿದರೆ, ಚಿಕ್ಕ ಮಕ್ಕಳು ಹಾಗೂ ಶಾಲೆಗೆ ಹೋಗುವ ವಿದ್ಯಾರ್ಥಿಗಳ ಪಾಡೇನು ಎಂಬುದು ಇಲ್ಲಿನ ಸ್ಥಳೀಯ ನಿವಾಸಿಗಳ ಚಿಂತನೆಯಾಗಿದೆ. ಆದರೆ, ನಾಯಿ ದಾಳಿಗೊಳಗಾದ ವ್ಯಕ್ತಿಯ ಬಗ್ಗೆ ಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಜೊತೆಗೆ, ನಾಯಿಗಳು ಆತನನ್ನು ಸಂಧಿಯೊಳಗೆ ಅಟ್ಟಿಸಿಕೊಂಡು ಹೋಗಿದ್ದು, ಅಲ್ಲಿ ಏನು ನಡೆಯಿತು ಎಂಬುದೇ ತಿಳಿಯುತ್ತಿಲ್ಲ.

ಫ್ಯಾಮಿಲಿ ಎಮರ್ಜೆನ್ಸಿ ಎಂದು ರಜೆ ಹಾಕಿ ಐಪಿಎಲ್ ಮ್ಯಾಚ್‌ಗೆ ಹೋದ ಮಹಿಳೆ; ಲೈವ್ ಟಿವಿಯಲ್ಲಿ ಬಾಸ್ ಕಣ್ಣಿಗೆ ಬಿದ್ಲು!

ಸೊಳ್ಳೆ ಬಿಟ್ಟರೆ, ಬೀದಿ ನಾಯಿಗಳ ಕಚ್ಚುವಿಕೆಯಿಂದಲೇ ಅತಿ ಹೆಚ್ಚು ಜನರ ಸಾವು: ನಮ್ಮ ದೇಶದಲ್ಲಿ ಯಾವುದಾದರೂ ಒಂದು ಪ್ರಾಣಿ ಕಚ್ಚಿ ಮಾನವ ಸಾವು ಸಂಭವಿಸುತ್ತದೆ ಎಂದರೆ ಅದು ಬೀದಿ ನಾಯಿಗಳಿಂದಲೇ ಹೆಚ್ಚು. ನಂತರದ ಸ್ಥಾನದಲ್ಲಿ ಹಾವುಗಳು ಹಾಗೂ ಇತರೆ ಕಾಡು ಪ್ರಾಣಿಗಳಿಂದ ದಾಳಿಗೊಳಗಾಗಿ ಸಾವು ಸಂಭವಿಸುವವ ಸಂಖ್ಯೆ ಇರುತ್ತದೆ. ಆದರೆ, ಸೊಳ್ಳೆ ಕಚ್ಚಿ ಸಾವನ್ನಪ್ಪಿದ ಸಂಖ್ಯೆಯೇ ಅತ್ಯಧಿಕವಾಗಿ ದಾಖಲಾಗುತ್ತವೆ. ಕಾರಣ ಸೊಳ್ಳೆಗಳಿಂದ ಮಲೇರಿಯಾ ಸೇರಿ ಇನ್ನಿತರೆ ಕಾಯಿಲೆಗಳು ಮನುಷ್ಯನಿಗೆ ಬರುತ್ತವೆ. ಇದರಿಂದ ಸೊಳ್ಳೆಗಳಿಂದಲೇ ಅತ್ಯಧಿಕ ಸಾವು ಸಂಭವಿಸುತ್ತದೆ ಎಂದು ಸರ್ಕಾರದ ವರದಿಯಿಂದ ತಿಳಿದುಬಂದಿದೆ.

click me!